Advertisement

ಪೊಲೀಸ್ ಶೋಧದ ಬೆನ್ನಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ 100 ತಬ್ಲಿಘಿಗಳು

09:15 AM Apr 11, 2020 | Hari Prasad |

ನವದೆಹಲಿ: ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗಿಯಾಗಿ, ಆನಂತರ ತಲೆ ಮರೆಸಿಕೊಂಡಿರುವ ತಬ್ಲೀಘಿ -ಎ-ಜಮಾತ್‌ ಸಂಘಟನೆಯ ಇನ್ನೂ 100 ಜನ ತಬ್ಲೀಘಿ ಗಳು ರಾಷ್ಟ್ರ ರಾಜಧಾನಿಯ ವಿವಿಧೆಡೆ ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.

Advertisement

ತಲೆಮರೆಸಿಕೊಂಡಿರುವ ಮಾಹಿತಿಯ ಜಾಡು ಹಿಡಿದು ಮುನ್ನಡೆದಿದ್ದ ದೆಹಲಿ ಪೊಲೀಸರು ಅಂಥವರನ್ನು ಪತ್ತೆ ಹಚ್ಚಲು ಅವರ ಮೊಬೈಲ್‌ ಡೇಟಾ ಮಾಹಿತಿಗಳನ್ನು ಬಳಸಲಾರಂಭಿಸಿದ್ದರು. ಪೊಲೀಸರ ಈ ತಂತ್ರಗಾರಿಕೆ ಅರಿವಿಗೆ ಬಂದಿದ್ದೇ ತಡ, ದೆಹಲಿಯ ನಾನಾ ಭಾಗಗಳಲ್ಲಿ ಅಡಗಿದ್ದ ತಬ್ಲೀಘಿಗಳು ತಮ್ಮ ಮೊಬೈಲ್‌ಗ‌ಳನ್ನು ಸ್ವಿಚ್‌ ಆಫ್ ಮಾಡಿದ್ದಾರೆ. ಜೊತೆಗೆ, ಈವರೆಗೆ ಪತ್ತೆಯಾಗಿರುವ 198 ವಿದೇಶಿ ತಬ್ಲೀಘಿಗಳನ್ನು ಗುರುತು ಹಚ್ಚುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾಕ್‌ ಗುಡುಗು: ನೆರೆಯ ಪಾಕಿಸ್ತಾನದಲ್ಲೂ ಕೋವಿಡ್ ಸೋಂಕು ಹರಡಿರುವ ತಬ್ಲೀಘಿ-ಎ-ಜಮಾತ್‌ ಸಂಘಟನೆಯ ವಿರುದ್ಧ ಅಲ್ಲಿನ ಸರಕಾರ ಕಿಡಿ ಕಾರಿದೆ. ಕೋವಿಡ್ ಭೀತಿ ಆವರಿಸಿದ ದಿನಗಳಲ್ಲೇ ಸರಕಾರದ ಒಪ್ಪಿಗೆ ಇಲ್ಲದಿದ್ದರೂ ಪಂಜಾಬ್‌ನ ರೈವಿಂದ್‌ ನಗರದಲ್ಲಿ ತಬ್ಲೀಘಿ ಸಂಘಟನೆಯು ಮಾ. 10ರಂದು ಅದ್ಧೂರಿಯಾಗಿ ಧಾರ್ಮಿಕ ಸಮಾವೇಶ ಆಯೋಜಿಸಿತ್ತು. ಅದರಲ್ಲಿ 70ರಿಂದ 80 ಸಾವಿರ ತಬ್ಲೀಘಿಗಳು ಭಾಗವಹಿಸಿದ್ದರು.

ಅದರ ಬೆನ್ನಲ್ಲೇ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಹಾಜರಾಗಿದ್ದ ಸುಮಾರು 30,000 ವಿದೇಶಿ ತಬ್ಲೀಘಿಗಳು ಪಾಕಿಸ್ತಾನದಲ್ಲೇ ಉಳಿಯುವಂತಾಗಿದೆ. ಇದರಿಂದ ಸೋಂಕು ಗಣನೀಯವಾಗಿ ಹರಡುತ್ತಿದೆ. ಸಾವಿರಾರು ತಬ್ಲೀಘಿಗಳಲ್ಲಿ ಸೋಂಕು ಅಥವಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಈವರೆಗೆ, 10,200 ತಬ್ಲೀಘಿಗಳನ್ನು ನಿಗ್ರಹ ವಲಯಕ್ಕೆ ರವಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next