Advertisement
ಜಿಲ್ಲಾಡಳಿತಕ್ಕೆ ಶಿಥಿಲ ಶಾಲೆಗಳ ಪಟ್ಟಿ: ಸ್ವಾತಂತ್ರ್ಯ ಪೂರ್ವದ ಕೆಲ ಹಾಗೂ 50-60 ವರ್ಷದ ಹಳೆಯ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ದುರಸ್ತಿಯಲ್ಲಿರುವ ಹಾಗೂ ಶಿಥಿಲಾವಸ್ಥೆಯ ಕಟ್ಟಡಗಳನ್ನು ಕ್ಷೇತ್ರ ಶಿಕ್ಷಣ ಇಲಾಖೆ ಪಟ್ಟಿಮಾಡಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ನೀಡಿದೆ. ಜಿಲ್ಲೆಯಲ್ಲಿ ಲೋಕೋಪಯೋಗಿ ಸಚಿವರು ಇರುವುದರಿಂದ ನೂತನ ಕೊಠಡಿಗಳು ನಿರ್ಮಾಣ ಆಗುವ ಆಶಾದಾಯಕದಲ್ಲಿ ಶಿಕ್ಷಕರು ಗ್ರಾಮಸ್ಥರು ಕಳೆದ ಒಂದು ವರ್ಷದಿಂದ ದಿನ ಕಳೆಯುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ.
Related Articles
Advertisement
ಕೊಠಡಿಯಿಲ್ಲದೇ ಬೇರೆಡೆ ಪಾಠ: 16 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲವಾಗಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿವೆ. ಆದ್ದರಿಂದ ಗ್ರಾಮದಲ್ಲಿನ ಸಮುದಾಯ ಭವನ, ಸ್ಥಗಿತವಾಗಿರುವ ಅಂಗನವಾಡಿ ಕೇಂದ್ರ, ದೇವಾಲಯ ಇಲ್ಲವೇ ಗ್ರಾಮದಲ್ಲಿ ಯಾವ ಮನೆ ಕಾಲಿ ಇದೆ ಅಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಗ್ರಾಮದಲ್ಲಿನ ಸಾರ್ವಜನಿಕ ಕಟ್ಟಡಲ್ಲಿ ಶಾಲೆ ನಡೆಯುತ್ತಿವೆ. ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿಯೂ ಶಾಲೆ ನಡೆಯುತ್ತಿದ್ದು, ಹಾಲಿನ ವಾಸನೆಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ.
ನಮ್ಮ ಶಾಲೆಗೆ ಬನ್ನಿ ಸಿಎಂ: ರಾಜ್ಯದ ಮುಖ್ಯ ಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಶಾಲೆಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಸನ ಜಿಲ್ಲೆ ಹೇಳಿ ಕೇಳಿ ಕುಮಾರಣ್ಣನ ತವರು ಜಿಲ್ಲೆ, ರಾಜಕೀಯವಾಗಿ ಜನ್ಮ ಪಡೆಯದೆ ಇದ್ದರು, ಇದೇ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಅವರು ಬಾಲ್ಯವನ್ನು ಕಳೆದಿದ್ದಾರೆ. ಬಾಲ್ಯದ ನೆನಪಿಗಾದರೂ ಹಾಸನ ಜಿಲ್ಲೆ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಜಿಲ್ಲೆ ಹಾಗೂ ತಾಲೂಕಿನಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೆ ಮುಂದಾಗಬೇಕು ಎಂದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉದಯವಾಣಿ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಸಚಿವರೇ ಇತ್ತ ಕಣ್ಣುಹಾಯಿಸಿ: ರಾಜ್ಯದ ಸೂಪರ್ ಸಿಎಂ ಎಂಬ ಖ್ಯಾತಿ ಪಡೆದಿರುವ ಜಿಲ್ಲಾ ಮಂತ್ರಿ ಎಚ್. ಡಿ.ರೇವಣ್ಣ ಮೈತ್ರಿ ಸರ್ಕಾರದಲ್ಲಿ ಪ್ರಭಾವಿ ಖಾತೆ ಯಾಗಿರುವ ಲೋಕೋಪಯೋಗಿ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಹೊಸ ಯೋಜನೆಗೆ ಒತ್ತು ನೀಡುವ ಇವರು ಸರ್ಕಾರಿ ಶಾಲೆ ಕಡೆ ಕಣ್ಣು ಹಾಯಿಸಿದರೆ ಶಿಥಿಲಶಾಲಾ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬಹುದು.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ