Advertisement

Papua New Guinea; ಭಾರೀ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವು: ವರದಿ

06:02 PM May 24, 2024 | Team Udayavani |

ಪಪುವಾ ನ್ಯೂಗಿನಿಯಾ: ಇಲ್ಲಿ ಶುಕ್ರವಾರ ಭಾರೀ ಭೂಕುಸಿತ ಸಂಭವಿಸಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯದ ಮಾಧ್ಯಮ ಎಬಿಸಿ ವರದಿ ಮಾಡಿದೆ.

Advertisement

ಪಪುವಾ ನ್ಯೂಗಿನಿಯಾ ದೇಶದ ಪರ್ವತ ಭಾಗದಲ್ಲಿರುವ ಗ್ರಾಮದಲ್ಲಿ ಬೆಳಗಿನ ಜಾವ 3 ಗಂಟೆಗೆ ಸಂಭವಿಸಿದ ಭೂಕುಸಿತದಲ್ಲಿ ಭಾರೀ ನಾಶ ಸಂಭವಿಸಿದ್ದು ತುರ್ತು ರಕ್ಷಣ ಪ್ರತಿಕ್ರಿಯೆ ನಡೆಯುತ್ತಿದೆ ಎಂದು ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ ಮತ್ತು ಸುದ್ದಿ ಮಾಧ್ಯಮ ತಿಳಿಸಿದೆ.

ರಾಜಧಾನಿ ಪೋರ್ಟ್ ಮೊರೆಸ್ಬಿಯ ವಾಯುವ್ಯಕ್ಕೆ ಸುಮಾರು 600 ಕಿಲೋಮೀಟರ್ (370 ಮೈಲುಗಳು) ದೂರದಲ್ಲಿರುವ ಎಂಗಾ ಪ್ರಾಂತ್ಯದ ಕಾಕಲಂ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪರಿಸ್ಥಿತಿಯ ಬಗ್ಗೆ ನನಗೆ ಇನ್ನೂ ಸಂಪೂರ್ಣವಾಗಿ ವಿವರಿಸಲಾಗಿಲ್ಲ. ಆದಾಗ್ಯೂ, ಇಂದು ಮುಂಜಾನೆ ಸಂಭವಿಸಿದ ಭೂಕುಸಿತ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಧಿಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಅದು ಲಭ್ಯವಾದಾಗ ನಾಶ ಮತ್ತು ಜೀವಹಾನಿಯ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ಜೇಮ್ಸ್ ಮರಾಪೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next