ಕಾರವಾರ: ಏಷ್ಯಾ ಖಂಡದಲ್ಲೇ ಅತೀ ದೊಡ್ಡದಾದ ಸೀಬರ್ಡ್ ನೌಕಾನೆಲೆ ಐಎನ್‌ಎಸ್ ಕದಂಬಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಸ್ಪೀಕರ್ ಸಹಿತ ಭೇಟಿ ನೀಡಿ ನೌಕಾನೆಲೆ ಅಧಿ ಕಾರಿ ಗಳಿಂದ ಮಾಹಿತಿ ಪಡೆದರು.
ಬೆಳಗ್ಗೆಯೇ ಆಗಮಿಸಿದ ಸ್ಪೀಕರ್ ಕೋಳಿವಾಡ ಅವರನ್ನು ಶಾಸಕ ಸತೀಶ್ ಸೈಲ್ ನೌಕಾನೆಲೆ ದ್ವಾರದ ಬಳಿ ಸ್ವಾಗತಿಸಿದರು. ಅವರೊಂದಿಗೆ ಸಚಿವ ಆಂಜನೇಯ ಮತ್ತು ಸಚಿವೆ ಉಮಾಶ್ರೀ ಆಗಮಿಸಿದ್ದರು. ಐರಾವತ್ ಬಸ್‌ನಲ್ಲಿ ಮಾಜಿ ಸಚಿವ ಹೊರಟ್ಟಿ ಸಹಿತ ನೂರಕ್ಕೂ ಹೆಚ್ಚು ಶಾಸಕರು ನೌಕಾನೆಲೆ ವೀಕ್ಷಣೆಗೆ ಆಗಮಿಸಿದ್ದರು. ಶಾಸಕರು ಸರಕಾರಿ ಬಸ್‌ನಲ್ಲೇ ಬೆಳಗಾವಿ
ಯಿಂದ ಆಗಮಿಸಿದ್ದು ವಿಶೇಷ.
ನೌಕಾನೆಲೆ ಪ್ರವೇಶಕ್ಕೂ ಮುನ್ನ ಸ್ಪೀಕರ್ ಕೋಳಿವಾಡ ಪತ್ರಕರ್ತರೊಂದಿಗೆ ಮಾತನಾಡಿ, ಸೀಬರ್ಡ್ ನಿರಾಶ್ರಿತರ ಭೂ ಪರಿಹಾರದ ಕಗ್ಗಂಟು ಮುಗಿದಿಲ್ಲ. ಪರಿಹಾರ ವಿಳಂಬವಾಗುತ್ತಿದೆ ಎಂಬ ವಿಷಯ ತಿಳಿದಿಲ್ಲ. ಈ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವೆ. ದೇಶದ ಪ್ರತಿಷ್ಠಿತ ಯೋಜನ ಪ್ರದೇಶಕ್ಕೆ ಭೇಟಿ ನೀಡುವುದು ಮತ್ತು ಅದರ ಕಾರ್ಯವೈಖರಿ ತಿಳಿಯುವ ಮತ್ತು ವೀಕ್ಷಿಸುವ ಕುತೂಹಲವಿದೆ. ಇಲ್ಲಿನ ಜನ ದೇಶದ ರಕ್ಷಣೆಗಾಗಿ ಯೋಜನೆ ಅನುಷ್ಠಾನಕ್ಕೆ ಸಹಮತ ನೀಡಿರುವುದು ನಿಜ ಸಂಗತಿ ಎಂದರು.