Advertisement
ಕೇಂದ್ರ ಸರಕಾರವೇ ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ಈ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ದೇಶಾದ್ಯಂತ ಒಟ್ಟಾರೆ ಮೃತಪಟ್ಟವರ ಪೈಕಿ 103 ಮಂದಿ 30ರೊಳಗಿನ ವಯೋಮಾನದವರು. ಈ ಪೈಕಿ 17 ಮಂದಿ 15 ವರ್ಷದೊಳಗಿನ ಮಕ್ಕಳು ಸೇರಿಕೊಂಡಿದ್ದಾರೆ. ಈ ವೈರಸ್ ನೇರವಾಗಿ ಶ್ವಾಸಕೋಶ, ಮೂತ್ರಕೋಶ, ಹೃದಯದಂಥ ಪ್ರಮುಖ ಅಂಗಗಳ ಮೇಲೆಯೇ ದಾಳಿ ನಡೆಸುವ ಕಾರಣ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ.
Related Articles
Advertisement
ಒಸಿಐ ಕಾರ್ಡ್ ಹೊಂದಿರುವವರಿಗೆ ಸ್ವದೇಶಕ್ಕೆ ಬರಲು ಅವಕಾಶ: ಭಾರತದ ಸಾಗರೋತ್ತರ ನಾಗರಿಕರು (ಒಸಿಐ) ಕಾರ್ಡ್ ಹೊಂದಿರುವ ಕೆಲವರಿಗೆ ಭಾರ ತಕ್ಕೆ ಆಗಮಿ ಸಲು ಅನುಮತಿ ನೀಡಿ ಕೇಂದ್ರ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿ ರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ವಂದೇ ಭಾರತ್ ಮಿಷನ್ ಯಶಸ್ವಿಯಾಗಿ ಸಾಗುತ್ತಿರುವ ನಡುವೆಯೇ, ಸರ್ಕಾರದಿಂದ ಈ ಘೋಷಣೆ ಹೊರಬಿದ್ದಿದೆ.
ಒಸಿಐ ಕಾರ್ಡ್ ಹೊಂದಿರುವ ಭಾರತೀಯರ ಅಪ್ರಾಪ್ತ ವಯಸ್ಸಿನ ಮಕ್ಕಳು, ಕೌಟುಂಬಿಕ ತುರ್ತು ಅನಿವಾರ್ಯತೆ (ಕುಟುಂಬ ಸದಸ್ಯರ ಸಾವು ಇತ್ಯಾದಿ)ಯ ಕಾರಣಕ್ಕಾಗಿ ದೇಶಕ್ಕೆ ವಾಪಸಾಗಲು ಬಯಸುವವರು ಮತ್ತು ಒಸಿಐ ಕಾರ್ಡ್ ಹೊಂದಿರುವ ವಿವಿ ವಿದ್ಯಾರ್ಥಿಗಳು(ಆದರೆ ಅವರ ಹೆತ್ತವರು ಭಾರತೀಯ ನಾಗರಿಕರಾಗಿದ್ದು, ಭಾರತದಲ್ಲೇ ವಾಸಿಸುತ್ತಿರಬೇಕು) ಈ ಸೌಲಭ್ಯವನ್ನು ಪಡೆಯಲಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: 29 ಲಕ್ಷ ಪ್ರಕರಣಕ್ಕೆ ತಡೆದೇಶಾದ್ಯಂತ ಆರಂಭಿಕ ಹಂತದಲ್ಲೇ ಲಾಕ್ ಡೌನ್ ಘೋಷಿಸಿದ ಕಾರಣ, ಸೋಂಕಿತರು ಹಾಗೂ ಸಾವಿನ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಅಭಿಪ್ರಾಯಪಟ್ಟಿದ್ದಾರೆ. ಸರಳ ಮಾದರಿಯನ್ನು ಅನುಸರಿಸಿ ಹೇಳುವುದಾದರೆ, ದೇಶವ್ಯಾಪಿ ನಿರ್ಬಂಧದಿಂದಾಗಿ ಭಾರತ ಸರಕಾರವು ಕನಿಷ್ಠ 14ರಿಂದ 29 ಲಕ್ಷ ಕೋವಿಡ್ ಪ್ರಕರಣಗಳು ಹಾಗೂ 37 ಸಾವಿರದಿಂದ 71 ಸಾವಿರ ಸಾವುಗಳನ್ನು ತಪ್ಪಿಸಿದೆ. ನಿರ್ಬಂಧ ವಿಧಿಸದೇ ಸುಮ್ಮನಿದ್ದ ಅನೇಕ ದೇಶಗಳು ಅದಕ್ಕೆ ತಕ್ಕ ಬೆಲೆ ತೆತ್ತಿವೆ. ಆದರೆ, ಭಾರತದಲ್ಲಿ ಪ್ರಧಾನಿ ಕಾರ್ಯಾಲಯ ಸಮಯಕ್ಕೆ ಸರಿಯಾಗಿ ಸೂಕ್ತ ನಿರ್ಧಾರ ಕೈಗೊಂಡಿತು. ಅಲ್ಲದೆ, ದೇಶದ ಜನರು ಕೂಡ ಅತ್ಯಂತ ಪರಿಣಾಮಕಾರಿಯಾಗಿ ಲಾಕ್ ಡೌನ್ ಅನುಷ್ಠಾನಗೊಳ್ಳುವಂತೆ ನೋಡಿ ಕೊಂಡರು ಎಂದು ಅವರು ಹೇಳಿದ್ದಾರೆ. ಏ.3ರವರೆಗೆ ಸೋಂಕಿನ ಪ್ರಗತಿ ದರ ಶೇ.22.6ರ ದರದಲ್ಲಿ ಹೆಚ್ಚಳವಾಗುತ್ತಿತ್ತು. ಏ.4ರ ಬಳಿಕ ಈ ದರ ಇಳಿಮುಖವಾಗುತ್ತಾ ಸಾಗಿ, ಶೇ.5.5ಕ್ಕೆ ತಲುಪಿತು. ನಮ್ಮ ದೇಶದಲ್ಲಿ ಸೋಂಕಿನ ವ್ಯಾಪಿಸುವಿಕೆಯ ದರವನ್ನು ನಿಯಂತ್ರಣಕ್ಕೆ ತರಲಾಯಿತು. ವೈರಸ್ ವ್ಯಾಪಿಸುವಿಕೆಯ ಪ್ರಮಾಣ ಶೇ.22ರಷ್ಟೇ ಮುಂದುವರಿದಿದ್ದರೆ ಪರಿಸ್ಥಿತಿ ಈಗ ಏನಾಗಿರುತ್ತಿತ್ತು ಎಂಬುದನ್ನು ನೀವೇ ಕಲ್ಪಿಸಿಕೊಳ್ಳಿ ಎಂದೂ ಪೌಲ್ ನುಡಿದಿದ್ದಾರೆ. ಈ ಹಿಂದೆ ಸೋಂಕಿನ ದ್ವಿಗುಣಾವಧಿ 3.5 ದಿನಗಳಾಗಿದ್ದವು. ಆದರೆ ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 13.5 ದಿನಗಳು ಬೇಕಾಗುತ್ತಿವೆ ಎಂದೂ ತಿಳಿಸಿದ್ದಾರೆ. ಆರು ಸಾವಿರ ಪ್ರಕರಣ
ಆತಂಕಕಾರಿ ಸಂಗತಿಯೆಂಬಂತೆ, ಇದೇ ಮೊದಲ ಬಾರಿಗೆ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದೆ. 4ನೇ ಹಂತದ ಲಾಕ್ ಡೌನ್ ಆರಂಭವಾದ ಬಳಿಕ ದೇಶಾದ್ಯಂತ ಸೋಂಕಿತರ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಸಾಗುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 6,088 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟು, 148 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 66 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, 48,533 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಂದರೆ, ಗುಣಮುಖ ಪ್ರಮಾಣ ಶೇ.40.97 ಕ್ಕೇರಿ ದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ, ಒಂದೇ ದಿನದಲ್ಲಿ 3234 ರೋಗಿಗಳು ಗುಣಮುಖರಾಗಿದ್ದಾರೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ 148 ಮಂದಿ ಅಸುನೀಗಿದ್ದಾರೆ.