Advertisement

ನಿರುದ್ಯೋಗದಿಂದ ಹೆಚ್ಚು ಆತ್ಮಹತ್ಯೆ

09:19 AM Jan 16, 2020 | mahesh |

2017-18ರ ಸಾಲಿನಲ್ಲಿ ದೇಶದ ಸುಮಾರು 12 ಸಾವಿರ ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆಯ ಸಂಖ್ಯೆ ಇದೇ ವರ್ಷ ದೇಶಾದ್ಯಂತ ಆತ್ಮಹತ್ಯೆಗೆ ಶರಣಾಗಿರುವ ರೈತರ ಸಂಖ್ಯೆಗಿಂತಲೂ ಅಧಿಕವಾಗಿದೆ ಎಂದು ನ್ಯಾಶನಲ್‌ ಕ್ರೈಂ ರೆಕಾರ್ಡ್ಸ್‌ ಬ್ಯೂರೋ (NCRB)ದ ಭಾರತದಲ್ಲಿ ಆತ್ಮಹತ್ಯೆ ಎಂಬ ವರದಿಯಲ್ಲಿ ಅಂಕಿ-ಅಂಶ ಸಹಿತ ವಿವರವಾಗಿ ಉಲ್ಲೇಖೀಸಿದೆ.

Advertisement

12,936 ಆತ್ಮಹತ್ಯೆ
ಈ ಪೈಕಿ 12,936 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಸಂಭವಿಸಿರುವ ಒಟ್ಟು ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಶೇ. 9.6ರಷ್ಟಿದೆ. ಗಂಟೆಗೊಂದು ಆತ್ಮಹತ್ಯೆ ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಪ್ರತಿ 1 ಗಂಟೆಗೆ ಓರ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

ಸುಮಾರು 10 ಸಾವಿರ ಪುರುಷರು
ಆತ್ಮಹತ್ಯೆಗೆ ಶರಣಾಗಿರುವ ನಿರುದ್ಯೋಗಿಗಳಲ್ಲಿ ಪುರುಷರ ಸಂಖ್ಯೆ ಅಧಿಕವಾಗಿದೆ. ಒಟ್ಟು 10,687 ನಿರುದ್ಯೋಗಿ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ.

2,249 ಮಹಿಳೆಯರು
2,249 ನಿರುದ್ಯೋಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳ ಪ್ರಥಮ
ನಿರುದ್ಯೋಗಿಗಳ ಆತ್ಮಹತ್ಯೆಯಲ್ಲಿ ಕೇರಳ ರಾಜ್ಯ ಮೊದಲ ಸ್ಥಾನದಲ್ಲಿದೆ. ಇಲ್ಲಿ 1,585 ಜನ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ರಾಜ್ಯಕ್ಕೆ 4ನೇ ಸ್ಥಾನ
ನಿರುದ್ಯೋಗ ಸಮಸ್ಯೆ ಹಿನ್ನೆಲೆ ಅತೀ ಹೆಚ್ಚು ಆತ್ಮಹತ್ಯೆ ಘಟಿಸಿದ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನದಲ್ಲಿದೆ. 1,094 ಜನರು ಉದ್ಯೋಗವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

1,34,516
ಒಟ್ಟು ಆತ್ಮಹತ್ಯೆ ಪ್ರಕರಣ ದಾಖಲು

3.6 %
ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಚ್ಚಳ

12,936
ನಿರುದ್ಯೋಗಿಗಳ ಆತ್ಮಹತ್ಯೆ

10,655 ರೈತರು ಆತ್ಮಹತ್ಯೆ

92,114
ಪುರುಷರ ಆತ್ಮಹತ್ಯೆ

42,391 ಮಹಿಳೆಯರ ಆತ್ಮಹತ್ಯೆ

1,707
ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸರಕಾರಿ ನೌಕರರ ಪ್ರಮಾಣ ಶೇ. 1.3 (1,707) ರಷ್ಟಿದ್ದು, ಶೇ. 6.1 (8,246) ಖಾಸಗಿ ವಲಯದ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next