ಬಂಟ್ವಾಳ: ಕರಾವಳಿ ಭದ್ರತಾ ಪಡೆಯನ್ನು ಬಲವರ್ಧನೆ ಗೊಳಿಸುವುದು ಹಾಗೂ ಅದಕ್ಕೆ ಹೆಚ್ಚಿನ ಸೌಲಭ್ಯ ನೀಡುವುದಕ್ಕೆ ರಾಜ್ಯ ಗೃಹ ಇಲಾಖೆ ತೀರ್ಮಾನಿಸಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಗುರುವಾರ ಬಂಟ್ವಾಳ ಐಬಿಯಲ್ಲಿ ಪಶ್ಚಿಮ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು.
ಬಂಟ್ವಾಳ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವ ವಿಚಾರವನ್ನು ಅಧಿಕಾರಿಗಳು ತನ್ನ ಗಮನಕ್ಕೆ ತಂದಿದ್ದು, ಅದರ ಕುರಿತು ಚರ್ಚಿಸಿ ಇನ್ಸ್‌ಪೆಕ್ಟರ್ ಗಳನ್ನು ನಿಯೋಜಿಸುವ ಕುರಿತು ತೀರ್ಮಾನಿಸಲಾಗುತ್ತದೆ. ದ.ಕ.ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಕುರಿತು ಶೀಘ್ರ ಬೆಂಗಳೂರಿನಲ್ಲಿ ಸಭೆ ಕರೆಯಲಾಗುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೇರಿದಂತೆ ಪೊಲೀಸ್ ಅಧಿಕಾರಿಗಳು, ಬಿಜೆಪಿ ಮುಂದಾಳುಗಳು ಜತೆಗಿದ್ದರು.