Advertisement
ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಹರ್ಯಾಣ ವಿರುದ್ಧ 8 ಅಂಕ ಗಳಿಸಿದಾಗ ಪರ್‌ದೀಪ್ ನರ್ವಾಲ್ ಅತೀ ಹೆಚ್ಚು ರೈಡಿಂಗ್ ಅಂಕ ಗಳಿಸಿದ 2ನೇ ಆಟಗಾರನೆನಿಸಿದ್ದರು (369). ಅನಂತರ ತಮ್ಮ ಡುಮ್ಕಿ ರೈಡಿಂಗ್ ಸ್ಕಿಲ್ ಮೂಲಕ ಮೆರೆಯುತ್ತಲೇ ಬಂದ ಪರ್‌ದೀಪ್ ಇದೀಗ ಅತ್ಯಧಿಕ ರೈಡಿಂಗ್ ಅಂಕಗಳನ್ನು ಗಳಿಸಿದ ಸಾಧಕರಾಗಿದ್ದಾರೆ.
“ಮೊದಲ ದಿನದಿಂದಲೇ ಪ್ರೊ ಕಬಡ್ಡಿ ಎನ್ನುವುದು ನನ್ನ ಪಾಲಿಗೆ ಅಮೋಘ ಪಯಣವಾಗಿದೆ. ಇದು ಇಲ್ಲಿಗೇ ನಿಲ್ಲದು. ಆದರೆ ತಂಡದ ಪ್ಲೇ-ಆಫ್ ಹಾದಿ ಸುಲಭವಲ್ಲ. ಇನ್ನೂ 8 ಪಂದ್ಯಗಳು ನಮ್ಮ ಮುಂದಿವೆ. ಹಿಂದಿನ ತಪ್ಪುಗಳನ್ನು ಪುನರಾವರ್ತಿಸದೆ ಈ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಿದೆ. ಎಲ್ಲರೂ ಸಾಮರ್ಥ್ಯ ಮೀರಿ ಪ್ರದರ್ಶನ ನೀಡಬೇಕಿದೆ’ ಎಂದರು.