Advertisement
ಜೂನ್ 1ರಿಂದ ಸೆಪ್ಟಂಬರ್ ಕೊನೆಯ ವರೆಗೆ ಆಯಾ ಜಿಲ್ಲೆಗಳಲ್ಲಿ ಸುರಿಯ ಮಳೆಯ ಆಧಾರದಲ್ಲಿ ಹವಾಮಾನ ಇಲಾಖೆಯು ಮುಂಗಾರಿನ ಲೆಕ್ಕಾಚಾರ ಹಾಕುತ್ತದೆ. ರಾಜ್ಯದಲ್ಲಿ 839 ಮಿ.ಮೀ. ಮಳೆಯಾಗಬೇಕು. ಈ ಬಾರಿ 977 ಮಿ.ಮೀ. ಸುರಿದು ಶೇ. 16ರಷ್ಟು ಹೆಚ್ಚಳವಾಗಿದೆ.
ದ.ಕ. ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ವಾಡಿಕೆಯಂತೆ 3,441 ಮಿ.ಮೀ. ಮಳೆಯಾಗಬೇಕಿದ್ದು, 3,334 ಮಿ.ಮೀ. ಮಳೆಯಾಗಿದೆ. ಆ ಮೂಲಕ ಶೇ. 3ರಷ್ಟು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ ವಾಡಿಕೆಗಿಂತ ಶೇ. 3ರಷ್ಟು ಮಳೆ ಜಾಸ್ತಿಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ ವಾಡಿಕೆಯಂತೆ ಒಟ್ಟು 4,071 ಮಿ.ಮೀ. ಮಳೆಯಾಗಬೇಕು. ಆದರೆ 4,466 ಮಿ.ಮೀ. ಮುಂಗಾರು ಮಳೆಯಾಗಿದ್ದು ವಾಡಿಕೆಗಿಂತ ಶೇ. 10ರಷ್ಟು ಜಾಸ್ತಿಯಾಗಿದೆ.
Related Articles
ದ.ಕ. ಜಿಲ್ಲೆಯಲ್ಲಿ ಬೇರೆ ತಾಲೂಕು ಗಳಿಗೆ ಹೋಲಿಸಿ ದರೆ ಮಂಗಳೂರು ತಾಲೂಕಿ ನಲ್ಲಿ ಶೇ. 3ರಷ್ಟು ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶೇ. 1, ಕುಂದಾಪುರ ತಾಲೂಕಿನಲ್ಲಿ ಶೇ. 19, ಉಡುಪಿ ತಾಲೂಕಿನಲ್ಲಿ ಶೇ. 11ರಷ್ಟು ಮಳೆ ಹೆಚ್ಚಳವಾಗಿದೆ.
Advertisement
ಸಾಮಾನ್ಯವಾಗಿ ಅಕ್ಟೋಬರ್ 2ನೇ ವಾರದಿಂದ ಹಿಂಗಾರು ಆರಂಭ ಗೊಳ್ಳುತ್ತದೆ. ಈ ಬಾರಿಯ ಹಿಂಗಾರು ಹೇಗಿರಬಹುದು ಎಂದು ಹವಾಮಾನ ಇಲಾಖೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಸಾಮಾನ್ಯವಾಗಿ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ ಬಂದರೆ ಹಿಂಗಾರು ಉತ್ತಮವಾಗಿರುತ್ತದೆ. ಆದರೆ ಮುಂಗಾರು ಪ್ರವೇಶ ಪಡೆದ ಬಳಿಕ ಆಗಸ್ಟ್‌ನಲ್ಲಿ ಭಾರೀ ಮಳೆಯಾಗಿತ್ತು. ಬಳಿಕ ಕ್ಷೀಣಿಸಿತ್ತು.
ಯಾವೆಲ್ಲ ಜಿಲ್ಲೆಗಳಲ್ಲಿ ಮುಂಗಾರು ಕ್ಷೀಣರಾಜ್ಯದ ಒಟ್ಟು ಮಳೆ ಪ್ರಮಾಣ ಹೆಚ್ಚಳವಾಗಿದ್ದರೂ 11 ಜಿಲ್ಲೆಗಳಲ್ಲಿ ವಾಡಿಕೆಯಂತೆ ಮುಂಗಾರು ಸುರಿದಿಲ್ಲ. ದಕ್ಷಿಣ ಕನ್ನಡ ಶೇ. 3, ಬೆಂಗಳೂರು ನಗರ ಶೇ. 16, ಬೆಂಗಳೂರು ಗ್ರಾಮೀಣ ಶೇ. 7, ಕೋಲಾರ ಶೇ. 9, ಚಿಕ್ಕಬಳ್ಳಾಪುರ ಶೇ. 8, ಕೊಪ್ಪಳ ಶೇ. 6, ರಾಯಚೂರು ಶೇ. 16, ಕಲಬುರಗಿ ಶೇ. 22, ಯಾದಗಿರಿ 25, ಬೀದರ್ ಶೇ. 25, ವಿಜಯಪುರ ಶೇ. 27 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿಲ್ಲ. ಕಳೆದ 5 ವರ್ಷಗಳ ಮುಂಗಾರು ಮಳೆ ವಿವರ
ವಾಡಿಕೆ ಮಳೆ 839 ಮಿ.ಮೀ.
2014ರಲ್ಲಿ 833 ಮಿ.ಮೀ.
(ಶೇ. 1ರಷ್ಟು ಕೊರತೆ)
2015ರಲ್ಲಿ 652 ಮಿ.ಮೀ.
(ಶೇ. 22ರಷ್ಟು ಕೊರತೆ)
2016ರಲ್ಲಿ 690 ಮಿ.ಮೀ.
(ಶೇ. 18ರಷ್ಟು ಕೊರತೆ)
2017ರಲ್ಲಿ 774 ಮಿ.ಮೀ.
(ಶೇ. 8ರಷ್ಟು ಕೊರತೆ)
2018ರಲ್ಲಿ 804 ಮಿ.ಮೀ.
(ಶೇ. 4ರಷ್ಟು ಕೊರತೆ)
2019ರಲ್ಲಿ 977 ಮಿ.ಮೀ.
(ಶೇ. 16ರಷ್ಟು ಹೆಚ್ಚಳ) ಈ ಬಾರಿಯ ಮುಂಗಾರು ಪೂರ್ಣಗೊಂಡಿದೆ. ರಾಜ್ಯದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಸರಾಸರಿ ಮಳೆ ಪ್ರಮಾಣ ಹೆಚ್ಚಳವಾಗಿದೆ. ಮುಂಗಾರು ಮಾರುತ ಇನ್ನೂ ಉತ್ತರ ಭಾರತದಲ್ಲಿ ಉತ್ತಮವಾಗಿದ್ದು, ರಾಜ್ಯ ಕರಾವಳಿಗೆ ಹಿಂಗಾರು ಮಾರುತ ಅಪ್ಪಳಿಸಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.
-ಸುನಿಲ್ ಗವಾಸ್ಕರ್, ಕೆಎಸ್‌ಟಿಡಿಎಂಸಿ ವಿಜ್ಞಾನಿ