Advertisement

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

01:31 PM Sep 22, 2020 | Nagendra Trasi |

ಕೋಲ್ಕತ್ತಾ: ದೇಶದ ಇತರೆ ರಾಜ್ಯಗಳಿಗಿಂತ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮಂದಿ ಅಲ್‌ಖೈದಾ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮೂಲಗಳು ತಿಳಿಸಿವೆ.

Advertisement

ಶನಿವಾರವಷ್ಟೇ ಪ. ಬಂಗಾಳದ ಮುರ್ಷಿದಾಬಾದ್‌ನಲ್ಲಿ 6 ಅಲ್‌ಖೈದಾ ಉಗ್ರರನ್ನು ಎನ್‌ಐಎ ಬಂಧಿಸಿತ್ತು. “ಮುರ್ಷಿದಾಬಾದ್‌ನ ಮನೆಯಲ್ಲಿ ಗುರುವಾರ ರಾತ್ರಿ ಅಲ್‌ -ಖೈದಾ ಸಂಪರ್ಕಿತರ ಸಭೆ ನಡೆದಿತ್ತು. ಇದರಲ್ಲಿ ಮಾಲ್ಡಾ ಜಿಲ್ಲೆಗೆ ಸೇರಿದ ಇಬ್ಬರು ಉಗ್ರರು ಪಾಲ್ಗೊಂಡಿದ್ದರು.

ಶುಕ್ರವಾರ ನಸುಕಿನಲ್ಲೇ ಅವರು ಅಲ್ಲಿಂದ ಮಾಲ್ಡಾಕ್ಕೆ ಹೊರಟಿದ್ದಾರೆ. ಈಗ ಇಬ್ಬರೂ ಪರಾರಿಯಾಗಿದ್ದು, ತೀವ್ರ ಶೋಧ ನಡೆಯುತ್ತಿದೆ’ ಎಂದು ಹೇಳಿದೆ. ಬಂಧಿತ 6 ಮಂದಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಕಾಶ್ಮೀರ ಉಗ್ರರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವರಿಗೆ ಸೇರಿದ ಕೆಲವು ಸಿಮ್‌ ಕಾರ್ಡ್‌ಗಳು, ಮೊಬೈಲ್‌ಗ‌ಳು, ಲ್ಯಾಪ್‌ಟಾಪ್ ‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿವೆ.

ಕೇರಳದ 10 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌
ಆರೆಂಜ್‌ ಅಲರ್ಟ್‌ ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ಪುನಃ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಕೇರಳ ದಲ್ಲಿ ಮುಂದಿನ 2-3 ದಿನಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್‌, ಪಾಲ ಕ್ಕಾಡ್‌, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್‌, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

ಭಾನುವಾರ-ಸೋಮವಾರ ರಾಜ್ಯಾದ್ಯಂತ ಸರಾಸರಿ 7ಸೆಂ.ಮೀ. ಮಳೆಯಾಗಿದೆ. ತಿರುವನಂತಪುರದಲ್ಲಿ ಒಬ್ಬರು ಹಾಗೂ ಕಾಸರಗೋಡಿನಲ್ಲಿ ಇಬ್ಬರು ಮಳೆ ಸಂಬಂಧಿತ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಕಾಸರಗೋಡಿನಲ್ಲಿ ಎಂಟು ಮನೆ ಗಳುಕುಸಿದುಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲೂ ವರ್ಷಧಾರೆ: ಮಧ್ಯಪ್ರದೇಶದಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಸಿಯೋನಿ, ಮಾಂಡ್ಲಾ, ಬಾಲಾಘಾಟ್‌, ದಿನದೋರಿ ಜಿಲ್ಲೆಗ ‌ಳಲ್ಲಿ “ಆರೆಂಜ್‌ ಅಲರ್ಟ್‌’ ಘೋಷಿಸ‌ಲಾಗಿದೆ.. ಜಬಲ್ ಪುರ್ ಸೇರಿದಂತೆ ಏಳು ಜಿಲ್ಲೆಗಳಲ್ಲಿ “ಯೆಲ್ಲೋ ಅಲರ್ಟ್‌’ ಘೋಷಿಸ‌ಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next