Advertisement
ಇದೇ ವೇಳೆ, ಕೋವಿಡ್ 19 ಕಾರ್ಕೋಟಕ, ಅಮೆರಿಕದ ಹೆಗಲೇರಿ ಕುಳಿತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು, ಸಂಪೂರ್ಣ ಲಾಕ್‌ಡೌನ್ ಹೊರತಾಗಿ, ಬೇರೆ ದಾರಿಗಳೇ ಉಳಿದಿಲ್ಲ. ಎಪ್ರಿಲ್ ತಿಂಗಳು ಅತ್ಯಂತ ನಿರ್ಣಾಯಕ ಘಟ್ಟ ಎಂದು ಟ್ರಂಪ್ ಘೋಷಿಸಿದ್ದಾರೆ. 33 ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ ಈಗ 25 ಕೋಟಿ ಮಂದಿ, ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ. ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ಸಮೀಪಿಸುತ್ತಿದೆ. ಸೋಮವಾರ ಒಂದೇ ದಿನ 541 ಮಂದಿ ಅಸುನೀಗಿದ್ದರು.
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಬೇರೆ ದೇಶಗಳಿಂದ ಹೋಗಿ ದುಡಿಯುತ್ತಿರುವ 4.7 ಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇವರಲ್ಲಿ ಭಾರತೀಯರೇ ಹೆಚ್ಚಾಗಿದ್ದಾರೆ. ಹಾಗೊಂದು ವೇಳೆ ಅವರು ಕೆಲಸ ಕಳೆದುಕೊಂಡರೆ, ಅವರು ಹೊಂದಿರುವ ಎಚ್1ಬಿ ವೀಸಾ ನಿಯಮಗಳ ಅನುಸಾರ ಅವರು ಕೆಲಸ ಕಳೆದುಕೊಂಡ ಅನಂತರವೂ ಅಮೆರಿಕದಲ್ಲಿ 60 ದಿನಗಳ ಕಾಲ ‘ಅನುಮತಿ ವಾಸ್ತವ್ಯ’ ಹೂಡಬಹುದು. ಹಾಗಾಗಿ, ಈ ಅವಕಾಶವನ್ನು 180 ದಿನಗಳಿಗೆ ಹೆಚ್ಚಿಸಬೇಕು ಎಂದು ಟ್ರಂಪ್ ಸರಕಾರವನ್ನು ಆಗ್ರಹಿಸಿರುವ ಆ ಉದ್ಯೋಗಿಗಳು, ವೈಟ್‌ಹೌಸ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಸಹಿ ಸಂಗ್ರಹಣೆ ಅಭಿಯಾನ ಆರಂಭಿಸಿದ್ದಾರೆ.
Related Articles
– 3200 ಮೀರಿದ ಸಾವಿನ ಸಂಖ್ಯೆ
– 10 ಲಕ್ಷಕ್ಕೂ ಹೆಚ್ಚು ಮಂದಿ ನಾಗರಿಕರು ಸೋಂಕು ಪರೀಕ್ಷೆಗೆ
Advertisement