Advertisement

ಜಿಲ್ಲೆಗೆ ಲಭಿಸಲಿ ಹೆಚ್ಚು ಅವಕಾಶ: ಹೊಟ್ಟಿ

01:21 PM Aug 11, 2017 | |

ಯಾದಗಿರಿ: ಜಿಲ್ಲೆ ಚಿಕ್ಕದಾದರೂ ಸಾಂಸ್ಕೃತಿಕವಾಗಿ ಹಿರಿದಾದ ಸಾಧನೆ ಮಾಡಿದೆ. ಇಂತಹ ಜಿಲ್ಲೆಗೆ ಅವಕಾಶಗಳು ಇನ್ನೂ ಹೆಚ್ಚು ಲಭಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು. ಭಾರತ ಆಹಾರ ನಿಗಮದ ಸದಸ್ಯ
ಖಂಡಪ್ಪ ದಾಸನ್‌ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಅವರನ್ನು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು. ಜಿಲ್ಲೆಯ ವತಿಯಿಂದ ಇಬ್ಬರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಆಹಾರ ನಿಗಮದ ಸದಸ್ಯ ಖಂಡಪ್ಪ ದಾಸನ್‌, ರಾಷ್ಟ್ರಮಟ್ಟದಲ್ಲಿ ಅದರಲ್ಲೂ ದಕ್ಷಿಣ ಭಾರತದಿಂದ ನಾನು ಮಾತ್ರ ಸದಸ್ಯನಾಗಿದ್ದೇನೆ. ಆಹಾರ ನಿಗಮದಿಂದ ಜಿಲ್ಲೆಗೆ ಅನುಕೂಲವಾಗುವ ರೀತಿಯಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ
ಪ್ರಕಾಶ ಅಂಗಡಿ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ನನಗೆ ಹಿರಿದಾದ ಜವಾಬ್ದಾರಿ ದೊರಕಿದೆ. ಜಿಲ್ಲೆಗೆ ಕೀರ್ತಿತರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಕಸಾಪ ತಾಲೂಕು ಅಧ್ಯಕ್ಷ ಡಾ| ಭೀಮರಾಯ ಲಿಂಗೇರಿ ಅಭಿನಂದನಾ
ಭಾಷಣ ಮಾಡಿದರು. ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ ಮತ್ತು ವೆಂಕಟರಾವ ಕುಲಕರ್ಣಿ ಸನ್ಮಾನಿತರ ಕುರಿತು ಮಾತನಾಡಿ,
ಸಮರ್ಥವಾಗಿ ಅಧಿಕಾರ ಬಳಸಿಕೊಂಡು ಆಯಾ ಕ್ಷೇತ್ರಗಳಲ್ಲಿ ಅರ್ಹರನ್ನು ಗುರುತಿಸಿ ಜಿಲ್ಲೆಗೆ ಸಿಗಬೇಕಾದ ಅವಕಾಶಗಳನ್ನು
ದೊರಕಿಸಿ ಕೊಡುವಂತೆ ಸಲಹೆ ನೀಡಿದರು. ವಿ.ಸಿ. ರೆಡ್ಡಿ, ಮಹಾದೇವಪ್ಪಗೌಡ ಅಬ್ಬೆ ತುಮಕೂರ, ಬಸವಂತರಾಯಗೌಡ
ಮಾಲಿಪಾಟೀಲ, ಬಸವರಾಜ ಮೋಟನಳ್ಳಿ, ಶಶಿಕಾಂತ ಕಶೆಟ್ಟಿ, ಸ್ವಾಮಿದೇವ ದಾಸನಕೇರಿ, ನಾಗೇಂದ್ರ ಜಾಜಿ, ಸುಭಾಷ ಆಯಾರಕರ್‌, ಬಸವರಾಜಪ್ಪ ಸಜ್ಜನ, ಲಕ್ಷ್ಮೀನಾರಾಯಣ, ನಾಗಪ್ಪ ಸಜ್ಜನ, ಶ್ಯಾಮಸುಂದರ ಭಟ್ಟಡ, ಸಂಗಣ್ಣ ಹೋತಪೇಟ, ಮಹಾಂತಪ್ಪ ಜಾಗಟೆ, ನೂರಂದಪ್ಪ ಲೇವಡಿ, ತಮ್ಮಣ್ಣಗೌಡ, ಚನ್ನಪ್ಪ ಸಾಹು ಠಾಣಗುಂದಿ, ಅನಿಲ ಗೂರುಜಿ, ನೀಲಕಂಠ ಶಿಲವಂತ,
ದೇವರಾಜ ವರ್ಕನಳ್ಳಿ, ಸಾಹೇಬಗೌಡ ಏವೂರ, ಬಸಪ್ಪ ಬಾಗೇವಾಡಿ, ಸೈದಪ್ಪ ಗುತ್ತೆದಾರ ಇದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ| ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಎಸ್‌.ಎಸ್‌. ನಾಯಕ ನಿರೂಪಿಸಿದರು. ಶ್ರೀನಿವಾಸ ಕರ್ಲಿ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next