Advertisement

ಜಲ ಸಂರಕ್ಷಣೆಗಾಗಿ ಮಣ‍್ಣಿನ ಗಣೇಶನಿಗೆ ಮೊರೆ

04:22 PM Mar 22, 2022 | Team Udayavani |

ವಿಜಯಪುರ: ಜಲವಿನಾಶಕ್ಕೆ ಕಾರಣವಾಗುವ ರಾಸಾಯನಿಕಯುಕ್ತ ಗಣೇಶ ಮೂರ್ತಿಗೆ ವಿದಾಯ ಹೇಳಿರುವ ಬಸವನಾಡಿನ ವ್ಯಕ್ತಿಯೊಬ್ಬರು, ಪರಿಸರ ಸ್ನೇಹಿ ಮಣ್ಣಿನ ಗಣೇಶನಿಗೆ ಮೊರೆ ಹೋಗಿದ್ದಾರೆ.

Advertisement

ಬಸವರಾಜ ಬೈಚಬಾಳ ಎಂಬವರು “ನನ್ನ ಗಿಡ ನನ್ನ ಭೂಮಿ’ ಸಂಸ್ಥೆ ಕಟ್ಟಿಕೊಂಡು ಕಳೆದ 4 ವರ್ಷಗಳಿಂದ ಜಲ ಸಂರಕ್ಷಣೆಗಾಗಿ ಮನೆ ಮನೆಗೂ ಮಣ್ಣಿನ ಗಣಪ ಅಭಿಯಾನ ಆರಂಭಿಸಿದ್ದಾರೆ.

ಪರಿಸರಕ್ಕೆ ಹಾನಿಕಾರಕ ಆರ್ಶೇನಿಕ್‌ ಇರುವ ಪಿಒಪಿ ರಾಸಾಯನಿಕದಿಂದ ಒಂದೆಡೆ ಭೂಮಿ, ನೀರು ಮಾಲಿನ್ಯ ಆಗುವುದನ್ನು ಕಂಡಿದ್ದ ಬಸವರಾಜ ಅವರಿಗೆ ಪಿಒಪಿ ಮಿಶ್ರಿತ ನೀರು ಮನುಕುಲಕ್ಕೆ ಮಾತ್ರವಲ್ಲ ಜಲಚರಕ್ಕೂ ಸಂಚಕಾರ ಎಂಬುದರ ಮನವರಿಕೆ ಆಗಿತ್ತು. ಹೀಗಾಗಿ ಗಣೇಶೋತ್ಸವ ದಲ್ಲಿ ರಾಸಾಯನಿಕದ ಗಣೇಶ ಮೂರ್ತಿಗಳ ತಯಾರಿ, ಮಾರಾಟ, ಬಳಕೆ ವಿರುದ್ಧ 60-70 ಸ್ನೇಹಿತರ ತಂಡ ಕಟ್ಟಿಕೊಂಡು ಜಾಗೃತಿಗೆ ಮುಂದಾಗಿದ್ದಾರೆ.

ಹೀಗೆ ಆರಂಭಿಸಿದ ಅಭಿಯಾನ ಜಾಗೃತಿ ವಿಜಯಪುರ ನಗರದ ಹೊರತಾಗಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಿಗೂ ಹಬ್ಬಿದೆ. ಪರಿಣಾಮ ಕಳೆದ ಮೂರು ವರ್ಷಗಳಲ್ಲಿ ಸುಮಾರು 22 ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಜಲ ಮಾಲಿನ್ಯ ತಡೆಯಲು ಮುಂದಾಗಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಕೆರೆಗಳು ಹಾಗೂ ನೈಸರ್ಗಿಕ ಜಲಮೂಲಗಳ ಸಂರಕ್ಷಣೆ ಜಾಗೃತಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next