Advertisement

ಹಳ್ಳಿಗಿಂತ ಪಟ್ಟಣದಲ್ಲೇ ಬಾಲ್ಯ ವಿವಾಹ ಹೆಚ್ಚು!

03:45 AM Jun 11, 2017 | |

ನವದೆಹಲಿ:  ದೇಶದಲ್ಲೇ ಅತಿಹೆಚ್ಚು ಬಾಲ್ಯ ವಿವಾಹವಾಗುತ್ತಿರುವ ಜಿಲ್ಲೆಗಳ ಪೈಕಿ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಗಳಿಗೂ ಸ್ಥಾನ ಸಿಕ್ಕಿದೆ. ದೇಶದ ವಿವಿಧ ರಾಜ್ಯಗಳ 70 ಜಿಲ್ಲೆಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿರುವ ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿಯ ವರದಿ, ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶ ಗಳಲ್ಲೇ ಹೆಚ್ಚೆಚ್ಚು ಬಾಲ್ಯವಿವಾಹ ಗಳಾಗುತ್ತಿವೆ ಎಂಬ ಆತಂಕಕಾರಿ ವರದಿ ನೀಡಿದೆ. 

Advertisement

ವಿಶೇಷವೆಂದರೆ, ಹಳ್ಳಿಗಳಿಗಿಂತ ನಗರಗಳಲ್ಲೇ ಏಕೆ ಮಕ್ಕಳಿಗೆ ಬೇಗ ಮದುವೆ ಮಾಡಲಾಗುತ್ತಿದೆ ಎಂಬು ದಕ್ಕೆ ಈ ವರದಿ ಕಾರಣ ಕೊಟ್ಟಿಲ್ಲ. ಆದರೆ 2001ರ ಜನಗಣತಿಗೆ ಹೋಲಿಕೆ ಮಾಡಿದರೆ, 2011ರ ಜನಗಣತಿ ವೇಳೆಗೆ ಬಾಲ್ಯವಿವಾಹದ ಪ್ರಮಾಣವೂ ತಗ್ಗಿದೆ ಎಂಬ ಸಮಾಧಾನಕರ ಸಂಗತಿಯನ್ನೂ ಈ ವರದಿ ಬಹಿರಂಗ ಮಾಡಿದೆ. ಜತೆಗೆ 10 ವರ್ಷದೊಳಗಿನ ಯಾರನ್ನೂ ವಿವಾಹ ಮಾಡಿರುವ ಬಗ್ಗೆ 2011ರ ಜನಗಣತಿಯಲ್ಲಿ ವರದಿಯಾಗಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. 

ಬೇರೆ ಎಲ್ಲ ರಾಜ್ಯಗಳಿಗಿಂತ ರಾಜಸ್ಥಾನದಲ್ಲೇ ಬಾಲ್ಯ ವಿವಾಹದ ಪ್ರಮಾಣ ಹೆಚ್ಚು. ಇಲ್ಲಿ 10ರಿಂದ 20ರ ವಯಸ್ಸಿನ ಬಾಲಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹ ಮಾಡುತ್ತಾರೆ ಎಂದಿದೆ ವರದಿ . ದಾವಣಗೆರೆಯಲ್ಲಿ ಬಾಲ್ಯ ವಿವಾಹ ತುಸು ಹೆಚ್ಚಾಗಿಯೇ ಕಂಡು ಬಂದಿದ್ದರೆ, ಬಾಗಲಕೋಟೆಯಲ್ಲಿ ಹಿಂದಿಗಿಂತ ಕಡಿಮೆ ಬಾಲ್ಯವಿವಾಹ ಗಳು ವರದಿಯಾಗಿವೆ. 18 ತುಂಬುವ ಮೊದಲೇ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವ ಪ್ರವೃತ್ತಿ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿದೆ ಎಂದು ಈ ವರದಿ ಹೇಳಿದೆ.

2011ರ ವರದಿ ಪ್ರಕಾರ ಅತೀಹೆಚ್ಚು ಬಾಲ್ಯ ವಿವಾಹ ಇರುವ 70 ಜಿಲ್ಲೆಗಳ ಪೈಕಿ, ನಗರಗಳಲ್ಲೇ ಶೇ. 25.8 ಬಾಲ್ಯವಿವಾಹಗಳಾಗುತ್ತವೆ. ನಗರದಲ್ಲಿನ 10ರಿಂದ 17 ವರ್ಷದೊಳಗಿನ ಪ್ರತಿ ಐವರು ಬಾಲೆ ಯರಲ್ಲಿ ಒಬ್ಬರು ಮದುವೆಯಾಗುತ್ತಾರೆ ಎಂದು ಹೇಳುತ್ತಿದೆ ಈ ವರದಿ. 

Advertisement

Udayavani is now on Telegram. Click here to join our channel and stay updated with the latest news.

Next