Advertisement

ವ್ಯಕ್ತಿಗತ ಸಾಮರ್ಥ್ಯಕ್ಕೆ ಹೆಚ್ಚು  ಮಹತ್ವ

05:25 PM Sep 15, 2018 | Team Udayavani |

ಹುಬ್ಬಳ್ಳಿ: ಜಗತ್ತಿನಲ್ಲಿಂದು ವ್ಯಕ್ತಿಗತ ಸಾಮರ್ಥ್ಯಕ್ಕೆ ಮಹತ್ವ ನೀಡಲಾಗುತ್ತಿದೆ ವಿನಃ ಹೆಣ್ಣು-ಗಂಡೆಂಬ ಭೇದ ಅಳೆಯಲಾಗುತ್ತಿಲ್ಲವೆಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ| ನೀಲಾಂಬಿಕಾ ಪಟ್ಟಣಶೆಟ್ಟಿ ಹೇಳಿದರು. ಜೆ.ಸಿ. ನಗರದ ಜಗದ್ಗುರು ಮೂರು ಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಹಾಗೂ ಸ್ನಾತಕೋತ್ತರ ಸಂಗೀತ ವಿಭಾಗದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

Advertisement

ಪುರುಷ ಪ್ರಧಾನ ಸಮಾಜ ಹೋಗಿ ವ್ಯಕ್ತಿಗತ ಸಮಾಜವಾಗಿ ಬದಲಾಗುತ್ತಿದೆ. ಹೆಣ್ಣು-ಗಂಡುವೆಂಬ ಲಿಂಗ ಆಧಾರದ ಮೇಲೆ ಪ್ರತಿಭೆಗಳು ನಿಂತುಕೊಂಡಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಶೇ.70ಪಾಲು ಮಹಿಳೆಯದ್ದಾಗಿದೆ. ಸಾಮಾಜಿಕ, ರಾಜಕೀಯ, ಆರ್ಥಿಕತೆ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಅವಳ ಪಾತ್ರ ಮಹತ್ತರವಾಗಿದೆ. ವಿಶ್ವದಲ್ಲಿ ಮಹಿಳೆಯರ ಸಂಖ್ಯೆ ಶೇ.50ರಷ್ಟಿದೆ. ಅದರಲ್ಲಿ ಶೇ.33ಮಹಿಳೆಯರು ಕಷ್ಟದ ಕೆಲಸ ಮಾಡಿದರೆ, ಶೇ.77 ದುಡಿಯುತ್ತಿದ್ದಾರೆ. ಆದರೆ ಇವರ ಉತ್ಪನ್ನ ಕೇವಲ ಶೇ.10 ಆಗಿದೆ. ಅಲ್ಲದೆ ಇವರ ಆಸ್ತಿ ಶೇ.1 ಮಾತ್ರವಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ| ಕಮಲ ಪುರಂದರೆ ಮತ್ತು ಎಸ್‌ಜೆಎಂವಿಎಸ್‌ನ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಮಾತನಾಡಿದರು. ಮೂಜಗು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ| ನೀಲಾಂಬಿಕಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿಜಯಲಕ್ಷ್ಮೀ ಕಟ್ಟಿಮಠ ಸ್ವಾಗತಿಸಿದರು. ಶ್ವೇತಾ ಕಾಗೇನವರ ನಿರೂಪಿಸಿದರು. ಪ್ರೊ| ಜಿ.ಎಸ್‌. ಗುಡಾರದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next