Advertisement

Bengaluru: ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿ: ಟೆಕಿ ಸಾವು

10:48 AM Oct 26, 2024 | Team Udayavani |

ಬೆಂಗಳೂರು: ಎಚ್‌ಎಎಲ್‌ ಹಳೇ ಏರ್‌ಪೋರ್ಟ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು ಟೆಕಿ ದುರ್ಮರಣ ಹೊಂದಿದ್ದಾರೆ.

Advertisement

ಕೇರಳ ಮೂಲದ ದೊಡ್ಡ ಬಾಣಸವಾಡಿಯ ನಿವಾಸಿ ರೋಹನ್‌ ಮೃತ ದುರ್ದೈವಿ.

ಮಾರತ್ತಹಳ್ಳಿಯ ಸಾಫ್ಟ್ವೇರ್‌ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೋಹನ್‌ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಾರ್ತಿಕ್‌ ನಗರದ ಸೇಲಂ ರೈಲ್ವೆ ಬ್ರಿಡ್ಜ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಇವರ ದ್ವಿಚಕ್ರವಹನ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ರೋಹನ್‌ ಮೃತಪಟ್ಟಿದ್ದಾರೆ. ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next