Advertisement

ಕ್ರೀಡೆಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ

11:40 AM Nov 21, 2021 | Team Udayavani |

ಬೆಂಗಳೂರು: ಕ್ರೀಡಾ ಇಲಾಖೆಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಇಂಡಿಯನ್‌ ನ್ಯಾಷನಲ್‌ ಬ್ಯಾಸ್ಕೆಟ್‌ ಬಾಲ್‌ ಲೀಗ್‌ನ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಅಮೃತ ಕ್ರೀಡಾ ದತ್ತು ಯೋಜನೆಯಡಿ 75 ಕ್ರೀಡಾಪಟುಗಳನ್ನು ಈಗಾ ಗಲೇ ಆಯ್ಕೆ ಮಾಡಲಾಗಿದ್ದು, ಉತ್ತಮ ಹಾಗೂ ಅನುಭವಿ ತರಬೇತುದಾರರಿಂದ ತರಬೇತಿ ಕೊಡಿಸಿ 75 ಮಂದಿಯಲ್ಲಿ ಕನಿಷ್ಠ 5 ಮಂದಿಯಾದರು ಪದಕ ಗೆಲ್ಲುವ ಗುರಿಯನ್ನು ಸರ್ಕಾರ ಹೊಂದಿದೆ.

Advertisement

ಮುಂಬರುವ ಆಯವ್ಯಯದಲ್ಲಿ ಕ್ರಿಡಾ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು. ಖೇಲೋ ಇಂಡಿಯಾ, ಜೀತೋ ಇಂಡಿಯಾದ ಸ್ಪೂರ್ತಿಯಾದ ನಮ್ಮ ಪ್ರಧಾನಮಂತ್ರಿಯವರನ್ನು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಉದ್ಘಾಟ ನೆಗೆ ಆಹ್ವಾನಿಸಲಾಗುವುದು. ಪ್ರಧಾನಿಯವರು ನೀಡಿದ ಕ್ರೀಡಾ ಪೋ›ತ್ಸಾಹದಿಂದ 2021ರ ಒಲಂಪಿಕ್ಸ್‌ನಲ್ಲಿ ಭಾರತ ಗರಿಷ್ಠ ಪದಕಗಳನ್ನು ಗೆಲ್ಲುವಂತಾಯಿತು. ಈ ಪರಂಪರೆ ಮುಂದುವರೆಸಲು ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದು ತಿಳಿಸಿದರು. ಶಕ್ತಿಯುತ ಯುವಜನತೆ ದೇಶದ ಭವಿಷ್ಯ .

ಇದನ್ನೂ ಓದಿ:- ಪ್ರತಾಪ್‌ ಸಿಂಹ ವಿರುದ್ದ ಕಾಂಗ್ರೆಸ್‌ ಆಕ್ರೋಶ

ಹುರುಪು ಹುಮ್ಮಸ್ಸು ಶಕ್ತಿಯನ್ನು ಕ್ರೀಡಾಪಟುಗಳಲ್ಲಿ ಕಾಣುತ್ತೇವೆ. ಯಾವುದೇ ಕ್ರೀಡೆಯಲ್ಲಿ ಗೆಲ್ಲಬೆಕೆನ್ನುವ ಹಂಬಲ ಇರಬೇಕು. ಗೆಲವು ಸಾಧಿಸಲು ಕಠಿಣ ಪರಿಶ್ರಮ, ಶಿಸ್ತು ಬೇಕಾಗುತ್ತದೆ. ಕ್ರೀಡೆ ಯುವಕರಲ್ಲಿ ಚಾರಿತ್ರ್ಯವನ್ನು ಬೆಳೆಸುತ್ತದೆ. ಆಟವನ್ನು ರಕ್ಷಣಾತ್ಮಕವಾಗಿ ಹಾಗೂ ಆಕ್ರಮಕಾರಿಯಾಗಿ ಆಡಬಹುದು.

ಆದರೆ ಆಟದಲ್ಲಿ ಗೆಲವು ಸಾಧಿಸಲು ಆಕ್ರಮಣಕಾರಿಯಾಗಿ ಆಡಬೇಕಾಗುತ್ತದೆ. ನಿಜವಾದ ಕ್ರೀಡಾಪಟು ಗೆಲ್ಲುವ ಛಲ, ಗುರಿ ಇದ್ದರೂ ಮಾನಸಿಕವಾಗಿ ಸೋಲು, ಗೆಲವನ್ನು ಸಮನಾಗಿ ತೆಗೆದುಕೊಳ್ಳುವುದು ಒಬ್ಬ ಕ್ರೀಡಾಪಟುವಿನ ಗುಣವಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯಪಾಲ ಥಾವರಚಂದ್‌ ಗೆಹಲೋಥ್‌, ಸಚಿವ ನಾರಾಯಣಗೌಡ, ಐನ್‌ಬಿಎಲ್‌ ಅಧ್ಯಕ್ಷ ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಚಿತ್ರನಟ ಯಶ್‌, ಗಾಯಕ ವಿಜಯಪ್ರಕಾಶ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next