Advertisement

ಶಾಶ್ವತ ಪರಿಹಾರಕ್ಕೆ ಹೆಚ್ಚಿನ ಅನುದಾನ

04:23 PM Jan 05, 2018 | |

ಸುರಪುರ: ಕರ್ನಾಟಕ ಕೊಳಿಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಗಾಂಧಿ  ನಗರ ಹಾಗೂ ತಿಮ್ಮಾಪೂರದಲ್ಲಿ 16 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಗುದ್ದಲಿ ಪೂಜೆ ನೇರವೆರಿಸಿದರು.

Advertisement

ನಂತರ ಮಾತನಾಡಿದ ಅವರು, ನಗರದ ಪ್ರತಿ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಿಸಲಾಗಿದೆ. ಇತ್ತೀಚೆಗೆ ಒಳಚರಂಡಿ ಕಾಮಗಾರಿಯಿಂದ ನಗರದಲ್ಲಿ ಬಹುತೇಕ ರಸ್ತೆಗಳು ಹಾಳಾಗಿ ಹೋಗಿವೆ. ಆದ್ದರಿಂದ ಕೆಟ್ಟು ಹೋಗಿರುವ ಎಲ್ಲಾ ರಸ್ತೆಗಳನ್ನು ಪುನರ್‌ ನಿರ್ಮಿಸಲಾಗುತ್ತಿದ್ದು, ನಾಗರಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. 

ನಗರದ ನೀರು ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆಯನ್ನು ಹೋಗಲಾಡಿಸಿ ಶಾಶ್ವತ ಪರಿಹಾರಕ್ಕಾಗಿ ಹೆಚ್ಚುವರಿ ಅನುದಾನ ಒದಗಿಸುವಂತೆ ಹುಣಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಸಿಎಂ ಅವರು ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ನಗರದ ಜನತೆಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.

ತ್ವರಿತವಾಗಿ ಕಾಮಗಾರಿ ಆರಂಭಿಸಿ ಶೀಘ್ರ ಮುಗಿಸುವಂತೆ ಹಾಗೂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ
ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರಸಭೆ ಅಧ್ಯಕ್ಷೆ ಕವಿತಾ ಎಲಿಗಾರ, ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಮುಖಂಡರಾದ ವೆಂಕೊಬ ಯಾದವ, ಶಾಂತಗೌಡ ಚನ್ನಪಟ್ಟಣ, ಅಬ್ದುಲ ಗಫರ ನಗನೂರಿ, ಅಬ್ದುಲ ಅಲೀಮ ಗೋಗಿ, ಶೇಖ ಮೈಬೂಬ ಒಂಟಿ, ದಾವಲಸಾಬ ಚಿಟ್ಟೆವಾಲೆ, ನಾಸೀರ ಕುಂಡಾಲೆ, ಮುಕೀದ ಕುಂಡಾಲೆ, ನಾಗಪ್ಪ ಕಟ್ಟಮನಿ, ಜ್ಯೋತಿ ವೆಂಕಟರೆಡಿ, ಹುಸ್ಮಾನ ಅಲ್ಹಾತೆ, ನಟರಾಜ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next