Advertisement
ನಗರದ ಟಿ.ಚನ್ನಯ್ಯ ರಂಗಮಂದಿರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಭಾನುವಾರ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಕೋಲಾರ ಘಟಕ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಪ್ರತಿಭೆಗಳ ಗುರುತಿಸಿ: ಕರುನಾಡ ಹಣತೆ ಬಳಗದ ಜಿಲ್ಲಾಧ್ಯಕ್ಷ ಲಕ್ಷ್ಮೀಪುರ ಶ್ರೀನಿವಾಸ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಬಳಗದಿಂದ ಎಲೆ ಮರೆ ಕಾಯಿಯಂತಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು.
ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ: ಕವಿ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಮಾಸ್ತಿ ಕೃಷ್ಣಪ್ಪ ಮಾತನಾಡಿ, ಕವಿಗಳು ಹೆಚ್ಚು ಅಧ್ಯಯನ ಮಾಡುವ ಮೂಲಕ ಅನುಭವವನ್ನು ಪೋಣಿಸಿ, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ, ಕವನಗಳ ರಚನೆ ಮಾಡಬೇಕೆಂದು ಸಲಹೆ ನೀಡಿದರು.
ಶಿಕ್ಷಕಿ ಸಿ.ಪದ್ಮಾವತಿ ಮಾತನಾಡಿ, ಉದಯೋನ್ಮುಖ ಕವಿಗಳು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿ ಕೊಂಡು ಮುಖ್ಯವಾಹಿನಿಯ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ ಎಂದರು. ಬಳಗದ ರಾಜ್ಯ ಸಹ ಕಾರ್ಯದರ್ಶಿ ಶಿವಮೂರ್ತಿ ಟಿ.ಕೋಡಿಹಳ್ಳಿ ಮಾತನಾಡಿದರು.
ಕವನ ವಾಚಿಸಿದವರು: ಕವಿಗೋಷ್ಠಿಯಲ್ಲಿ ಕೋಲಾರ ದಿಂದ ಹಣಬೆ ಪಾಪೇಗೌಡ, ಅರಿನಾಗನಹಳ್ಳಿ ಅಮರನಾಥ್, ಮಾಲೂರಿನಿಂದ ಭೀಮಬಂಧು ಮಂಜುನಾಥ್, ಅಮರನಾಥ ಅಚಲ, ಬಂಗಾರ ಪೇಟೆಯಿಂದ ಜಿ.ಟಿ.ರಾಮಚಂದ್ರ, ಈ.ವೆಂಕಟ ಸ್ವಾಮಿ, ಮುಳಬಾಗಿಲಿನಿಂದ ಎನ್.ಸಿ.ರಾಜೇಶ್ವರಿ,ಎಸ್.ಟಿ.ಭಾರತಿ ಶ್ರೀನಿವಾಸ್, ಶ್ರೀನಿವಾಸಪುರದಿಂದ ಗಾಂಡ್ಲಹಳ್ಳಿ ಎನ್.ಚಲಪತಿ, ಡಿ.ಕೆ.ಶ್ರೀರಾಮರೆಡ್ಡಿ, ಕೆಜಿಎಫ್ನಿಂದ ರೂಪಾ ಶ್ರೀನಿವಾಸ್, ಜಿ.ಗೀತಾ ಸ್ವರಚಿತ ಕವನಗಳ ವಾಚಿಸಿದರು. ಪ್ರಿಯ ಸುಳ್ಯ ಸ್ವಾಗತಿಸಿ, ಸಿ.ಆರ್.ನಟರಾಜ್ ನಾಡಗೀತೆ ಹಾಡಿ ದರು. ಬಿ.ವಿ.ವೆಂಕಟೇಶ್ ವಂದಿಸಿ, ಕೆ.ಆರ್. ವೆಂಕಟೇಶ್ ನಿರೂಪಿಸಿದರು. ಕವನ ವಾಚನ ಮಾಡಿದ ಎಲ್ಲಾ ಕವಿಗಳನ್ನು ಸನ್ಮಾನಿಸಲಾಯಿತು.