ಅದರಲ್ಲೂ ಟಿವಿ, ರೆಫ್ರಿಜರೇಟರ್ಸ್ ಮತ್ತು ವಾಷಿಂಗ್ ಮೆಷಿನ್ ಗಳ ಮಾರಾಟದಲ್ಲಿ ಶೇ.8ರಿಂದ 10ರಷ್ಟು ಪ್ರಗತಿಯಾಗಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ವಿಶೇಷವೆಂದರೆ, ಲ್ಯಾಪ್‌ಟಾಪ್ ಸೇರಿದಂತೆ ಕೆಲವೊಂದು ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದರೂ ಮಾರುಕಟ್ಟೆಗೆ ಸರಿಯಾಗಿ ಪೂರೈಕೆಯಾಗಿಲ್ಲ. ಹೀಗಾಗಿ ಕೆಲವೆಡೆ ಮಾರಾಟ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
Advertisement
ಗ್ರಾಹಕರ ಸೆಳೆಯುವ ಸಲುವಾಗಿ ಕಂಪೆನಿಗಳು ಉತ್ತಮ ಇಎಂಐ ಸ್ಕೀಮ್, ಹಣಕಾಸು ಯೋಜನೆಗಳು, ಕ್ಯಾಶ್‌ಬ್ಯಾಕ್‌ನಂಥ ಆಫರ್ ನೀಡಿದ್ದವು. ಇದರಿಂದಾಗಿ ಗ್ರಾಹಕರ ಖರೀದಿ ವೆಚ್ಚವೂ ಹೆಚ್ಚಾಯಿತು. ಕಳೆದೊಂದು ವಾರದಲ್ಲಿ ಈ ವಸ್ತುಗಳ ಮಾರಾಟದಲ್ಲಿ ಗಣನೀಯ ಪ್ರಗತಿಯಾಗಿದೆ ಎಂದು ಕಂಪೆನಿಗಳು ಹೇಳಿಕೊಂಡಿವೆ.
Related Articles
ಈಗ ಆನ್‌ಲೈನ್ ಕ್ಲಾಸ್ ನಡೆಯುತ್ತಿರುವುದರಿಂದ ಸ್ಮಾರ್ಟ್ ಫೋನ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಮೊದಲು ಸ್ಮಾರ್ಟ್ ಫೋನ್ ಖರೀದಿದಾರರ ವಯಸ್ಸು 18 ವರ್ಷದಿಂದ ಆರಂಭವಾಗುತ್ತಿತ್ತು. ಆದರೆ ಈಗ 10 ವರ್ಷ ಮೇಲ್ಪಟ್ಟ ಮಕ್ಕಳ ಸಲುವಾಗಿ ಖರೀದಿಯಾಗುತ್ತಿದೆ ಸಂಗೀತಾ ಮೊಬೈಲ್ಸ್‌ನ ನಿರ್ದೇಶಕ ಚಂದು ರೆಡ್ಡಿ ಹೇಳಿದ್ದಾರೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಹುತೇಕ ಹೆಚ್ಚಿನ ಕಂಪೆನಿಗಳ ಮೊಬೈಲ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.
Advertisement