Advertisement
ಕಳೆದ ವರ್ಷ ಸೆ. 17ರಂದು ಒಂದೇ ದಿನ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷದಷ್ಟಿತ್ತು. ಅದಕ್ಕಿಂತ ಮೂರು ಪಟ್ಟು ಹೆಚ್ಚು ಸಕ್ರಿಯ ಪ್ರಕರಣಗಳು ಮುಂದಿ ನ ತಿಂಗಳ ಮಧ್ಯಭಾಗದಲ್ಲಿಯೇ ಕಂಡು ಬರಲಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
Related Articles
Advertisement
ವಿವಿಧ ರಾಜ್ಯಗಳಿಂದ ಅಸ್ಸಾಂನ ಸಿಲ್ಚಾರ್‌ಗೆ ಆಗಮಿಸಿದ್ದ ಸುಮಾರು 300ಕ್ಕೂ ಹೆಚ್ಚು ಪ್ರಯಾಣಿಕರು, ಕಡ್ಡಾಯ ಕೋವಿಡ್ ಪರೀಕ್ಷೆಗೆ ಒಳಗಾಗದೇ ಪರಾರಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ನಿಯಮಗಳಂತೆ, ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆ ನಿಲ್ದಾಣದ ಸಮೀಪವೇ ಇರುವ ಟಿಕೋಲ್ ಮಾಡೆಲ್ ಆಸ್ಪತ್ರೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ (ಆರ್‌ಎಟಿ) ಹಾಗೂ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬುಧವಾರ ಇಲ್ಲಿಗೆ ವಿವಿಧ ರಾಜ್ಯಗಳಿಂದ ಸುಮಾರು 690 ಪ್ರಯಾಣಿಕರು ಬಂದಿಳಿದಿದ್ದರು. ಅವರಲ್ಲಿ ಕೆಲವರು ಈಶಾನ್ಯ ರಾಜ್ಯಗಳಿಗೆ ಪ್ರಯಾಣ ಬೆಳಸಬೇಕಿದ್ದರಿಂದ ಅವರನ್ನು ಪರೀಕ್ಷೆಗೊಳಪಡಿಸದೇ ಕಳುಹಿಸಲಾಯಿತು. ಆದರೆ, ಅಸ್ಸಾಂ ರಾಜ್ಯವನ್ನು ಪ್ರವೇಶಿಸಬೇಕಿದ್ದ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆಗೊಳಪಡುವಂತೆ ಸೂಚಿಸ ಲಾಗಿತ್ತು. ಆದರೆ ಅವರಲ್ಲಿ 189 ಪ್ರಯಾಣಿಕರು ಮಾತ್ರವೇ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಅವರಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ, ಉಳಿದ ಪ್ರಯಾಣಿಕರು ಆಸ್ಪತ್ರೆಗೆ ಬಂದಿಲ್ಲ. ಮಾರ್ಗ ಮಧ್ಯೆಯೇ ಪರಾರಿಯಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.
24 ಗಂಟೆಗಳಲ್ಲಿ 3.14 ಲಕ್ಷ ಪ್ರಕರಣ! :
ಬುಧವಾರ-ಗುರುವಾರ ನಡುವಿನ 24 ಗಂಟೆಗಳಲ್ಲಿ 3,14,835 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ವಿಶ್ವದ ಯಾವುದೇ ರಾಷ್ಟ್ರದಲ್ಲಿ ದಿನಂಪ್ರತಿ ದಾಖಲಾಗುವ ಪ್ರಕರಣಗಳಿಗಿಂತ ಗರಿಷ್ಠದ್ದಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ದಾಖಲೆಯಲ್ಲಿದೆ. ಸಕ್ರಿಯ ಸೋಂಕಿತರ ಸಂಖ್ಯೆ 22,91,428ಕ್ಕೆ ಏರಿದೆ. ಮಂಗಳವಾರ-ಬುಧವಾರದಂದು ದೇಶದ ನಾನಾ ರಾಜ್ಯಗಳಲ್ಲಿ 2,104 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,84,657ಕ್ಕೆ ಮುಟ್ಟಿದೆ. ಚೇತರಿಕೆ ಪ್ರಮಾಣ ಶೇ.84.46ಕ್ಕೆ ಕುಸಿದಿದೆ. ಸತತ 43ನೇ ದಿನ ಈ ದಾಖಲೆಯ ಏರಿಕೆಯಾಗಿದೆ.
ಹಂತಹಂತವಾಗಿ ಏರಿಕೆ :
ಕಳೆದ ವರ್ಷ, ಆ. 7ರಂದು ಭಾರತದಲ್ಲಿ ಕೊರೊನಾ ಪ್ರಕರಣಗಳು 20 ಲಕ್ಷ ಗಡಿ ದಾಟಿದ್ದವು. ಆ. 23ರಂದು 30 ಲಕ್ಷ ಗಡಿ ದಾಟಿದರೆ, ಸೆ. 5ರಂದು 40 ಲಕ್ಷ ಹಾಗೂ ಸೆ. 28ರಂದು 60 ಲಕ್ಷ ಗಡಿ ದಾಟಿದ್ದವು. ಡಿ. 19ರಂದು 1 ಕೋಟಿ ಗೆರೆಯನ್ನು ದಾಟಿದ್ದವು. ಈ ವರ್ಷ ಎ. 19ರಂದು ಪ್ರಕರಣಗಳ ಸಂಖ್ಯೆ 1.50 ಕೋಟಿ ದಾಟಿದೆ.