Advertisement
ಶೇ.60 ಬಸ್ಕೆಎಸ್ಆರ್ಟಿಸಿ ಕುಂದಾಪುರ ಘಟಕದ ಆದಾಯಕ್ಕೆ ನಿತ್ಯವೂ ಶೇ. 50ರಷ್ಟು ಹೊಡೆತ ಬೀಳುತ್ತಿದೆ. ಘಟಕದಲ್ಲಿ ಮಾರ್ಗಸೂಚಿ ಪ್ರಕಾರ 97 ಶೆಡ್ನೂಲ್‌ಗಳಲ್ಲಿ ಓಡಾಟ ನಡೆಸುತ್ತಿದ್ದವು. ಅವುಗಳಲ್ಲಿ ಪ್ರಸ್ತುತ 55ರಿಂದ 60 ರೂಟ್‌ಗಳಲ್ಲಷ್ಟೇ ಸುಮಾರು ಶೇ. 60ರಷ್ಟು ಬಸ್‌ಗಳು ಸಂಚಾರ ನಡೆಸುತ್ತಿವೆ. ಬಹುತೇಕ ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರಿಲ್ಲ ಆದಾಯವೂ ಇಲ್ಲ.
ಬೆಂಗಳೂರಿಗೆ ನಿತ್ಯ ಹೋಗುವ ಎಸಿ ಬಸ್‌ಗಳ ಸಹಿತ ಇತರ ಬಸ್‌ಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುತ್ತಿಲ್ಲ. ಬೆಂಗಳೂರು, ಮಂಡ್ಯ, ಭಟ್ಕಳ, ಸಿದ್ದಾಪುರ, ಯಡಮೊಗೆ, ಉಡುಪಿ ಮೊದಲಾದ ಕಡೆಗಳಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆದರೆ ಸಿಂಧನೂರು, ಗೋಕಾಕ್, ಆಜ್ರಿ, ಬೈಂದೂರಿನ ಗ್ರಾಮೀಣ ಪ್ರದೇಶಗಳಿಗೆ ಓಡಾಟ ಆರಂಭಿಸಿಲ್ಲ. ಇನ್ನೂ ಒಂದು ತಿಂಗಳು ಇನ್ನಷ್ಟು ಬಸ್‌ಗಳು ಸಂಚಾರ ಆರಂಭಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಇರುವ ಬಸ್‌ಗಳ ಆದಾಯ ಸರಿದೂಗದ ಹೊರತು ಇನ್ನಷ್ಟು ನಷ್ಟ ಮಾಡಿಕೊಳ್ಳಲು ನಿಗಮ ಸಿದ್ಧವಿಲ್ಲ. ಶಾಲೆ, ಕಾಲೇಜಿಗೆ ಕಾಯುವಿಕೆ
ನವರಾತ್ರಿ ಹಬ್ಬದ ಸಂದರ್ಭ ಜನರ ಓಡಾಟ ಸಹಜ ಸ್ಥಿತಿಗೆ ಬರಬಹುದು, ವ್ಯಾಪಾರ ವಹಿವಾಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಸೆಪ್ಟಂಬರ್ ಕೊನೆ ವಾರ, ಅಕ್ಟೋಬರ್ ಮೊದಲ ವಾರ ನವರಾತ್ರಿ ಇರುವ ಕಾರಣ ಆ ದಿನಗಳಲ್ಲಿ ಪ್ರಯಾಣಿಕರ ಓಡಾಟ ಕೂಡಾ ಹೆಚ್ಚಿರುತ್ತದೆ. ಆದರೆ ಈ ಬಾರಿ ಅಧಿಕ ಮಾಸ ಬಂದ ಕಾರಣ ನವರಾತ್ರಿ ಕೂಡಾ ಭರ್ತಿ ಒಂದು ತಿಂಗಳು ಮುಂದಕ್ಕೋಗಿದೆ. ಕಾಲೇಜುಗಳ ಆರಂಭ ನವೆಂಬರ್‌ನಿಂದಲೇ ಎನ್ನಲಾಗಿದೆ. ವಿದ್ಯಾರ್ಥಿಗಳ ಓಡಾಟ ಆರಂಭವಾದಾಗ ಜನರ ಓಡಾಟ ಕೂಡಾ ಹೆಚ್ಚಬಹುದು ಎಂದು ಭಾವಿಸಲಾಗಿದೆ. ಖಾಸಗಿ ಬಸ್‌ಗಳು ಅ. 1ರಿಂದ ಇನ್ನಷ್ಟು ಸಂಖ್ಯೆಯಲ್ಲಿ ಓಡಾಟ ಆರಂಭಿಸಲಿವೆ.
Related Articles
ಖಾಸಗಿ ಬಸ್‌ಗಳು ಕೂಡಾ ಬೆಂಗಳೂರಿನಂತಹ ದೂರ ಪ್ರಯಾಣಕ್ಕೆ ಇನ್ನೂ ಎಲ್ಲವೂ ತೆರೆದುಕೊಳ್ಳಲಿಲ್ಲ. ಶೇ.40ರಷ್ಟು ದೂರ ಪ್ರಯಾಣದ ಬಸ್‌ಗಳು ನಿಲ್ಲಿಸಿದಲ್ಲೇ ಬಾಕಿಯಾಗಿವೆ. ಈಗ ಓಡಾಡುತ್ತಿರುವ ಬಸ್‌ಗಳಲ್ಲೂ ಸರಣಿ ರಜೆಯ ಹೊರತಾಗಿ ಇತರ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿದೆ. ಅನೇಕರು ಕೊರೊನಾ ಕಾರಣದಿಂದ ಸಾರ್ವತ್ರಿಕ ಸಾರಿಗೆಯನ್ನು ಬಳಸದೇ ಒಂದಷ್ಟು ಜನ ಸೇರಿ ವಾಹನವನ್ನು ಬಾಡಿಗೆ ಆಧಾರದಲ್ಲಿ ಊರಿಗೆ ತರುತ್ತಿದ್ದಾರೆ. ಇದು ಹೆಚ್ಚು ಸುರಕ್ಷಿತ ಎಂಬ ಕಾರಣದಿಂದ.
Advertisement
ಗ್ರಾಮೀಣ ಜನಗ್ರಾಮಾಂತರದಿಂದ ನಗರಕ್ಕೆ ಜನ ಬಾರದ ಹೊರತು ನಗರದ ವ್ಯಾಪಾರ, ವಹಿವಾಟಿನಲ್ಲಿ ಏರಿಕೆ ಆಗುವುದಿಲ್ಲ. ಬಸ್ಸುಗಳಲ್ಲಿ ಜನರೂ ಹೆಚ್ಚುವುದಿಲ್ಲ. ನಗರದಲ್ಲಿ ಜನ ಕೊರೊನಾ ತಡೆಗಾಗಿ ಕೈಗೊಂಡ ಕ್ರಮಗಳಿಗೆ ಎಲ್ಲ ಸಹಕಾರ ನೀಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸಿದರೆ ಇತರೆಡೆಯಿಂದ ಬಂದವರಿಗೂ ವಿಶ್ವಾಸ ಮೂಡುತ್ತದೆ. ಕೊರೊನಾ ಪಾಸಿಟಿವ್ ಪ್ರಕರಣಗಳೂ ಕಡಿಮೆಯಾಗಿ ಉದ್ದಿಮೆಯಲ್ಲಿ ಪಾಸಿಟಿವ್ ಬೆಳವಣಿಗೆ ಹೆಚ್ಚಾಗುತ್ತವೆ. 160 ಗ್ರಾಮಗಳನ್ನು ಹಾದು ಹೋಗುವಂತೆ ರೂಟ್ ವಿನ್ಯಾಸಗೊಳಿಸಿದರೆ ನಿಗಮಕ್ಕೆ ನಷ್ಟವಾಗುವ ಸಾಧ್ಯತೆ ಕಡಿಮೆ. ಪ್ರಯಾಣಿಕರ ಕೊರತೆಯಿದೆ
ಶೇ.60ರಷ್ಟು ಬಸ್‌ಗಳು ಓಡಾಡುತ್ತಿದ್ದು ಪ್ರಯಾಣಿಕರ ಕೊರತೆಯಿದೆ. ಜನಜೀವನ ಇನ್ನಷ್ಟು ಸಹಜ ಸ್ಥಿತಿಗೆ ಬಂದ ಬಳಿಕ ಉಳಿದ ಮಾರ್ಗಗಳಲ್ಲೂ ಬಸ್‌ಗಳ ಓಡಾಟ ನಡೆಯಲಿದೆ. -ರಾಜೇಶ್ ಮೊಗವೀರ
ಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಕುಂದಾಪುರ