Advertisement
ಕಳೆದ ಎರಡು ವಾರಗಳಿಂದ ಕಾಕು ಆಂಕಣದಲ್ಲಿ ನಿರ್ಮಲಕ್ಕನ ಬಜೆಟ್ ಬಗ್ಗೆ ಕೊರೆಯಲಾಯಿತು. ಅದಕ್ಕೂ ಮೊದಲಿನ ಎರಡು ವಾರಗಳಲ್ಲಿ ಈ ವಿತ್ತ ವರ್ಷಕ್ಕೆ ಸಂಬಂಧಪಟ್ಟಂತೆ 87ಎ ರಿಯಾಯಿತಿ ಮತ್ತು ಅದರ ಮಹತ್ವದ ಬಗ್ಗೆ ಕೊರೆಯುತ್ತಿದ್ದರೆ. ಇದು ಅದರ ಮುಂದುವರಿಕೆ. ಮಧ್ಯದಲ್ಲಿ ಬಜೆಟ್ ಬಂದು ಎಲ್ಲಾ ಸಜ್ಜಿಗೆ-ಬಜಿಲ್ ಆಗಿಬಿಡ್ತು. ಸ್ವಲ್ಪ ಎಡ್ಜಸ್ಟ್ ಮಾಡ್ಕೊಂಡು ಓದಿ.
– ಸೆಕ್ಷನ್ 80ಸಿ ಸರಣಿಯ 3 ಉಪ ಸೆಕ್ಷನ್ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ. 1.5 ಲಕ್ಷ) ಎಂಪ್ಲಾಯೀಸ್ ಫ್ರಾವಿಡೆಂಟ್ ಫಂಡ್ (ಇಪಿಎಸ್) – ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಚೆಯಿಂದ ವಾಲಂಟರಿಯಾಗಿ ಪಿ.ಎಫ್.ಗೆ ನೀಡಿದ್ದು ಸಹಿತ: (ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಅದು ಪ್ರತ್ಯೇಕ)
Related Articles
Advertisement
– ಗರಿಷ್ಠ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್ ಫೀ. (ಬಿಲ್ಡಿಂಗ್ ಫಂಡ್, ಕ್ಯಾಪಿಟೇಶನ್ ಫೀ, ಡೊನೇಶನ್ ಇತ್ಯಾದಿ ಆಗಲ್ಲ; ಟ್ಯೂಶನ್ ಫೀ/ಕೋರ್ಸ್ ಫೀ ಮತ್ತಿತರ ಶೈಕ್ಷಣಿಕ ಫೀಗಳು ಮಾತ್ರ)
– ಗೃಹಸಾಲದ ಮರುಪಾವತಿಯಲ್ಲಿ (ಇಎಮ್‌ಐ) ಅಸಲು ಭಾಗ (ಬಡ್ಡಿ ಅಲ್ಲದೆ)
– ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್, ಸ್ಟಾಂಪ್ ಡ್ನೂಟಿ ವೆಚ್ಚಗಳು.
ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದೇಣಿಗೆ: – ಅಂಚೆ ಕಚೇರಿಯ ಎನ್.ಎಸ್.ಸಿ. ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ. – ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇ.ಎಲ….ಎಸ್.ಎಸ್.) ನಾಮಾಂಕಿತ ಮ್ಯೂಚುವಲ್ ಫಂಡ್. ಇಲ್ಲಿ ಯಾವುದೇ ಈಕ್ವಿಟಿ ಫಂಡುಗಳು ಬರುವುದಿಲ್ಲ. ಇವುಗಳು ಇ.ಎಲ….ಎಸ್.ಎಸ್. ಅಥವಾ ಟ್ಯಾಕ್ಸ್ ಸೇವರ್ ಎಂಬ ನಿರ್ದಿಷ್ಟ ಲೇಬಲ್ ಗಳೊಂದಿಗೆ ಬಿಡುಗಡೆಯಾಗುತ್ತವೆ. – ಮ್ಯೂಚುವಲ್ ಫಂಡ್‌ಗಳ ಯುನಿಟ್ ಲಿಂಕ್ಡ್ ಪೆನ್ಶನ್ ಪ್ಲಾನ್‌ಗಳು (UTI&RBP, Franklin Templeton&TIPP and Reliance Retirement Fund): – ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರನೋಂದಾಯಿತ ಎಫ್.ಡಿ: ಇಲ್ಲೂ ಕೂಡಾ 80ಸಿ ಸೆಕ್ಷನ್ ಅನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್-ಇನ್ ಇರುತ್ತದೆ. – ಅಂಚೆ ಕಚೇರಿಯ 5 ವರ್ಷದ ಸೀನಯರ್ ಸಿಟಿಜನ್ ಸೇವಿಂಗ್ ಸ್ಕೀಂ (ಎಸ್.ಸಿ.ಎಸ್.ಎಸ್)ನಲ್ಲಿ ಮಾಡಿದ ಹೂಡಿಕೆ. – ಸುಕನ್ಯಾ ಸಮೃದ್ಧಿ ಯೋಜನೆ: ಕೇವಲ ಹತ್ತು ವರ್ಷ ಮೀರದ ಹೆಣ್ಮಕ್ಕಳಿಗಾಗಿ ಮಾತ್ರ ಮೀಸಲಾಗಿರುವ ಈ ಯೋಜನೆಯಲ್ಲಿ ಮಾಡಿದ ಹೂಡಿಕೆ. – ಎಲ್ಲೆ„ಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಶನ್ ಪ್ಲಾನುಗಳು (ಸೆಕ್ಷನ್ 80ಸಿಸಿಸಿ) – ನ್ಯಾಶನಲ್ ಪೆನ್ಶನ್ ಸ್ಕೀಂ (ಎನ್.ಪಿ.ಎಸ್)/ಅಟಲ್ ಪೆನ್ಶನ್ (ಸೆಕ್ಷನ್ 80ಸಿಸಿಡಿ): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್ನುಗಳಲ್ಲಿ ಬರುತ್ತವೆ -80ಸಿಸಿಡಿ(1) ಮತ್ತು 80ಸಿಸಿಡಿ(1ಬಿ). ಮೊದಲೇ ಹೇಳಿದಂತೆ, ನಿಮಗೆ ಬೇಕಾದಂತೆ ಬೇಕಾದ ಸೆಕ್ಷನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು. ಇದರಲ್ಲಿ ಲಾಭವನ್ನು ಮೊತ್ತ ಮೊದಲು 80ಸಿಸಿಡಿ(1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳುವುದು ಉತ್ತಮ. ಅದರಡಿಯಲ್ಲಿ ಬೇರೆ ಆಯ್ಕೆಗಳಿಲ್ಲ. 80ಸಿಸಿಡಿ(1) ಸೆಕ್ಷನ್ ಉಳಿದ 80ಸಿ ಸೆಕ್ಷನ್ ಜೊತೆಯಲ್ಲಿ ಬರುವ ಕಾರಣ ಅಲ್ಲಿ ಇತರ ಆಯ್ಕೆಗಳಿವೆ. ಹಾಗಾಗಿ 80ಸಿಸಿಡಿ(1ಬಿ) ಮಿತಿ ಮೀರಿದರೆ ಉಳಿದ ಮೊತ್ತವನ್ನು ಇಲ್ಲಿ 80ಸಿಸಿಡಿ(1) ಅಡಿಯಲ್ಲಿ ತೆಗೆದುಕೊಳ್ಳಬಹುದು. ಅಫೋಡೇìಬಲ್ ಹೌಸ್ ಯೋಜನೆ (ಸೆಕ್ಷನ್ 80ಇಇಎ)
ಇದರಡಿಯಲ್ಲಿ ಒಬ್ಟಾತನಿಗೆ ಪ್ರಪ್ರಥಮ ಬಾರಿ ಮನೆ ಕಟ್ಟುವವರಿಗೆ/ಖರೀದಿಸುವವರಿಗೆ ಮಾತ್ರ ಅನ್ವಯಿಸುವಂತೆ, ಸ್ವಂತ ವಾಸಕ್ಕಿರುವ ಮನೆಗೆ ಮಾತ್ರ ಅನ್ವಯಿಸುವಂತೆ, ಮನೆಯ ಒಟ್ಟು ಮೌಲ್ಯ ರೂ. 45 ಲಕ್ಷದ ಒಳಗೆ ಇರುವ ಸಂದರ್ಭಕ್ಕೆ ಮಾತ್ರ ಅನ್ವಯಿಸುವಂತೆ, ಎಪ್ರಿಲ್ 1,2019ರಿಂದ ಆರಂಭಗೊಂಡು ಮಾರ್ಚ್ 31, 2020 ರ ಒಳಗೆ ಪಡಕೊಂಡ ಗೃಹ ಸಾಲಕ್ಕೆ ಮಾತ್ರ ಅನ್ವಯಿಸುವಂತೆ (ಹಳೆ ಸಾಲಕ್ಕೆ ಈ ಸೌಲಭ್ಯ ಸಿಗದು) ಕಟ್ಟುವ ಬಡ್ಡಿಯ ಮೇಲೆ ಹೆಚ್ಚುವರಿ ರೂ 1.5 ಲಕ್ಷಕ್ಕೆ ಆದಾಯದಿಂದ ನೇರವಾಗಿ ಕಳೆಯುವಂತೆ ವಿನಾಯಿತಿ ನೀಡಲಾಗಿದೆ. ಅಂದರೆ, ಸಾಮಾನ್ಯವಾಗಿ ದಕ್ಕುವ 2 ಲಕ್ಷ (ಸೆಕ್ಷನ್ 24) ಮತ್ತು ಅಫೋಡೇìಬಲ್ ತರಗತಿಯ 1.5 ಲಕ್ಷ – ಒಟ್ಟಾರೆ 3.5 ಲಕ್ಷದ ಲಾಭ ಸಿಗುತ್ತದೆ. ಆದರೆ, “ಅಫೋಡೇìಬಲ್ ಹೌಸಿಂಗ್’ ಅಲ್ಲದ ಅಂದರೆ ರೂ. 45 ಮೀರಿದ ಮನೆಗಳಿಗೆ ಮೊದಲಿನಂತೆ ಕೇವಲ ರೂ. 2 ಲಕ್ಷದ ಲಾಭ ಮಾತ್ರ ಸಿಗುತ್ತದೆ. ವಿದ್ಯುತ್ ವಾಹನ: (ಸೆಕ್ಷನ್ 80ಇಇಬಿ)
ನೀವೊಂದು ವಿದ್ಯುತ್ ಚಾಲಿತ ಕಾರು ಕೊಂಡರೆ ಅದರ ಸಾಲದ ಮೇಲಿನ ಬಡ್ಡಿ ಪಾವತಿಗೆ ರೂ. 1.5 ಲಕ್ಷ ವಾರ್ಷಿಕ ತೆರಿಗೆ ವಿನಾಯಿತಿ ಇದೆ. ಸಾಲವನ್ನು ಎಪ್ರಿಲ್ 1, 2019 ರಿಂದ ಮಾರ್ಚ್ 31, 2023 ಒಳಗಾಗಿ ಪಡೆಯತಕ್ಕದ್ದು. ಎಸ್.ಬಿ/ಎಫ್.ಡಿ/ಆರ್.ಡಿ. ಬಡ್ಡಿಗೆ ಕರವಿನಾಯಿತಿ (ಸೆಕ್ಷನ್ 80 ಟಿಟಿಎ/ಟಿಟಿಬಿ)
ಸೆಕ್ಷನ್ 80ಟಿಟಿಎ ಅನುಸಾರ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ. 10,000ದ ವರೆಗೆ ಕರ ವಿನಾಯಿತಿ ಇದೆ. ಅಲ್ಲದೆ, ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್ 80ಟಿಟಿಬಿ ಅನುಸಾರ ರೂ. 50,000ದ ವರೆಗೆ ಬ್ಯಾಂಕ್ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಟಿಟಿಎ ಅನ್ವಯವಾಗುವುದಿಲ್ಲ). ಈ ರೂ. 50,000ದಲ್ಲಿ ಬ್ಯಾಂಕು ಪೋಸ್ಟಾಫೀಸುಗಳ ಎಸ್.ಬಿ. ಬಡ್ಡಿಯ ಜೊತೆಗೆ ಎಫ್ಡಿ ಮತ್ತು ಆರ್.ಡಿ. ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. (ಹೌದು, ಪೆನ್ಶನ್ ಆದಾಯ ಇರುವ ಹಿರಿಯ ನಾಗರಿಕರು ಬಡ್ಡಿಯ ಮೇಲೆ ಈ 50,000 ಹಾಗೂ ಪೆನ್ಶನ್ ಮೇಲೆ ಸ್ಟಾಂಡರ್ಡ್ ಡಿಡಕ್ಷನ್‌ನ ಆ 50,000 – ಎರಡನ್ನೂ ಪಡೆಯಬಹುದು. ಸಂಶಯವೇ ಬೇಡ) ಈ ರೀತಿ ವಿವಿಧ ಹೂಡಿಕೆಗಳಲ್ಲಿ ತೊಡಗಿಸಿಕೊಂಡು ನಿಮ್ಮ ಕರಾರ್ಹ ಆದಾಯ ರೂ. 5 ಲಕ್ಷದ ಒಳಗೆ ಬರುವಂತೆ ನೋಡಿಕೊಂಡು ಕರ ಮುಕ್ತ ಜೀವನ ನಡೆಸಬಹುದು. – ಜಯದೇವ ಪ್ರಸಾದ ಮೊಳೆಯಾರ