Advertisement
ಎಷ್ಟೇ ಮೊತ್ತದ ಸಾಲ ಪಡೆದಿದ್ದರೂ ಎಲ್ಲ ಸಾಲಗಾರರು ಇದಕ್ಕೆ ಅರ್ಹರಾಗುತ್ತಾರೆ ಎಂದೂ ಕೋರ್ಟ್ ಹೇಳಿದೆ.ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಮಾ. 1ರಿಂದ ಆ. 31ರ ವರೆಗೆ ಆರ್‌ಬಿಐ ಸಾಲದ ಕಂತು ಪಾವತಿ ಅವಧಿ ವಿಸ್ತರಣೆ (ಮೊರಟೋರಿಯಂ) ಪ್ರಕಟಿಸಿತ್ತು. ಆದರೆ ಕೆಲವು ಬ್ಯಾಂಕುಗಳು ಈ ಅವಧಿಯ ಕಂತಿನ ಮೇಲೆ ಚಕ್ರಬಡ್ಡಿ ವಿಧಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಮಂಗಳವಾರ ಈ ಆದೇಶ ಹೊರಡಿಸಿದೆ.
ಇದೇ ವೇಳೆ, ಮೊರಟೋರಿಯಂ ಅವಧಿಯನ್ನು ಆ. 31ಕ್ಕಿಂತ ವಿಸ್ತರಣೆ ಮಾಡಲಾಗದು ಎಂಬ ಕೇಂದ್ರ ಮತ್ತು ಆರ್‌ಬಿಐ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುವು ದಿಲ್ಲ ಎಂದೂ ಕೋರ್ಟ್ ಹೇಳಿದೆ. ಇದು ದೇಶದ ಆರ್ಥಿಕತೆಗೆ ಸಂಬಂಧಿಸಿದ ವಿಚಾರ ಎಂದು ಕೋರ್ಟ್ ತಿಳಿಸಿದೆ. ಮೊರಟೋರಿಯಂ ಅವಧಿಯ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂಬ ಅರ್ಜಿ
ದಾರರ ಕೋರಿಕೆಯನ್ನೂ ನ್ಯಾಯಪೀಠ ತಿರಸ್ಕರಿಸಿದೆ.