Advertisement
ಅನುಭವ ಪಾಠಹಿಂದಿನ ಕಾಲ ದಲ್ಲಿ ಶಿಕ್ಷಕರು ತಮ್ಮ ಜೀವನಾನುಭದಲ್ಲಿ ಕಲಿತ ಅನೇಕ ವಿಷಯಗಳನ್ನು ತರ ಗ ತಿ ಯಲ್ಲಿ ಹೇಳುತ್ತಿದ್ದರು. ಆದರೆ ಇಂದು ಪಠ್ಯವಿಷಯ ಬಿಟ್ಟು ಬೇರೆ ವಿಷಯಗಳ ಕುರಿತಾಗಿ ಮಾತನಾಡಲು ಸಮಯವೇ ಇರುವುದಿಲ್ಲ.
ಶಿಕ್ಷಣ ಒಬ್ಬ ವ್ಯಕ್ತಿಗೆ ವಿನಯ, ಸಭ್ಯತೆ , ಸಜ್ಜನಿಕೆ ಹಾಗೂ ಸೌಜನ್ಯವನ್ನು ಕಲಿಸಿಕೊಡಬೇಕು. ಆಗ ಶಿಕ್ಷಣವೇ ನಿಜವಾಗಿಯೂ ಅರ್ಥ ಪೂರ್ಣವೆನಿಸುತ್ತದೆ. ಜೀವನ ಪ್ರೀತಿ ಹೆಚ್ಚಿಸುವಂತಿರಲಿ
ಎಂತಹ ನೋವು, ಆಘಾತ ಆದರೂ ಜೀವನ ಪ್ರೀತಿ ಇದ್ದರೆ ಇವುಗಳನ್ನು ಎದುರಿಸಲು ಸಾಧ್ಯ. ಅಂತಹ ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳಿ. ಜೀವನದಲ್ಲಿ ಪ್ರೀತಿ ಇದ್ದಾಗ ಎಂತಹ ಸಮಸ್ಯೆಯೂ ಶೂನ್ಯ ಎನಿಸುತ್ತದೆ. ಕಡಿಮೆ ಅಂಕ ಬಂದರೆ ಇಂದಿನ ಯುವ ಪೀಳಿಗೆ ಕುಗ್ಗಿ ಹೋಗುವವರೆ ಹೆಚ್ಚು. ಇದಕ್ಕೆಲ್ಲ ಜೀವನ ಪ್ರೀತಿಯ ಕೊರತೆ ಕಾರಣ.
Related Articles
ಧನಾತ್ಮಕ ಯೋಚನೆಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಬದುಕಿನಲ್ಲಿ ಉತ್ತಮ ಸ್ಥಾನಕ್ಕೇರಲು ಸಕಾರಾತ್ಮಕ ಅಂಶಗಳು ಸಹಕಾರಿ. ಆದ್ದರಿಂದ ಆದಷ್ಟು ಧನಾತ್ಮಕ ಅಂಶಗಳನ್ನು ತಲೆಯಲ್ಲಿ ತುಂಬಿಕೊಳ್ಳಿ.
Advertisement
ಶಿಸ್ತು ಮತ್ತು ಸಮಯ ಪಾಲನೆಶಿಸ್ತು ಮತ್ತು ಸಮಯ ಪಾಲನೆಯನ್ನು ನಮ್ಮ ಜೀವನದಲ್ಲಿ ರೂಢಿಸಿಕೊಂಡಲ್ಲಿ ನಾವು ಯಾರಿಗೂ ತಲೆ ಬಾಗುವ ಸಂದರ್ಭ ಎದುರಾಗುವುದಿಲ್ಲ. ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಇವುಗಳನ್ನು ಹೇಳಿಕೊಡಬೇಕು ಮತ್ತು ಕಟ್ಟುನಿಟ್ಟಿನಲ್ಲಿ ಪಾಲಿಸುವಂತೆ ಮಾಡಬೇಕು. ಸಾಮಾಜಿಕ ಕರ್ತವ್ಯಗಳ ಪಾಲನೆ
ಬಾಲ್ಯದಿಂದಲೇ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಅಂಶಗಳನ್ನು ತಿಳಿಸಿದರೆ ಮುಂದೆ ಮಕ್ಕಳು ಸಮಾಜಘಾತುಕರಾಗುವುದನ್ನು ತಪ್ಪಿಸಬಹುದು. ವಿಶಾಲ ಮನೋಭಾವ / ದೃಷ್ಟಿಕೋನ ಬೆಳೆಸಿಕೊಳ್ಳಲಿ
ಶಿಕ್ಷಣವೂ ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ ಬೆಳೆಸುವಲ್ಲಿ ಪೇರಣೆ ನೀಡಬೇಕು. ಸಂಕುಚಿತ ಮನಸ್ಥಿತಿಯು ನಮ್ಮನ್ನು ಇದ್ದಲ್ಲಿಯೇ ಇರುವಂತೆ ಮಾಡುತ್ತದೆ.
ಪ್ರಜ್ಞಾವಂತ ಪ್ರಜೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮೌಲ್ಯಯುತ ಶಿಕ್ಷಣ ಪ್ರಜ್ಞಾವಂತ ಪ್ರಜೆಗಳನ್ನು ಮಾಡವಲ್ಲಿ ಸಹಕಾರಿ. ಧನ್ಯಶ್ರೀ ಬೋಳಿಯಾರ್