Advertisement

ಶಿವಮೊಗ್ಗ: ಸಿಐಡಿ ಎಸ್ ಪಿ ಭೀಮಾಶಂಕರ್ ಗುಳೇದ್ ಕಾರಿಗೆ ಮೊಪೆಡ್ ಬೈಕ್ ಢಿಕ್ಕಿ

09:14 AM Dec 08, 2020 | keerthan |

ಶಿವಮೊಗ್ಗ: ಐಪಿಎಸ್ ಅಧಿಕಾರಿ ಸಿಐಡಿ ಎಸ್ ಪಿ ಭೀಮಾ ಶಂಕರ್ ಗುಳೇದ್ ಅವರಿದ್ದ ಇನ್ನೋವಾ ಕಾರಿಗೆ ಮೊಪೆಡ್ ದ್ವಿಚಕ್ರ ವಾಹನ ಢಿಕ್ಕಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಶಿವಮೊಗ್ಗದಲ್ಲಿ ನಡೆದಿದೆ.

Advertisement

ಟಿವಿಎಸ್ ಮೊಪೆಡ್ ವಾಹನದಲ್ಲಿ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಸರ್ಕಾರಿ ಮೆಗ್ಗಾನ್ ಅಸ್ಪತ್ರೆ ಗೆ ದಾಖಲು ಮಾಡಲಾಗಿದೆ.

ಭೀಮಾ ಶಂಕರ್ ಗುಳೇದ್ ಅವರು ಬೆಂಗಳೂರಿನ ಸಿಐಡಿ ಎಸ್ ಪಿಯಾಗಿದ್ದು, ಶಿವಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಕರ್ತವ್ಯಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದರು.

ಇದನ್ನೂ ಓದಿ:ಬಳಕೆದಾರರ ವೇದಿಕೆಯ ಮಾಜಿ ಸಂಚಾಲಕ, ಶಿಕ್ಷಣ ತಜ್ಞ ದಾಮೋದರ್ ಐತಾಳ್ ನಿಧನ

Advertisement

ಇಂದು ಬೆಳಿಗ್ಗೆ ಆಲ್ಕೋಳ ಸರ್ಕಲ್ ಬಳಿ ಘಟನೆ ನಡೆದಿದೆ. ಘಟನೆಯಲ್ಲಿ ಎಸ್ ಪಿಯವರ ಇನ್ನೋವಾ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next