Advertisement

ಮೂರೂರು ವಿಷ್ಣು ಭಟ್‌ಗೆ ಮಹಾಬಲ ಹೆಗ್ಡೆ ಪ್ರಶಸ್ತಿ 

06:00 AM Nov 16, 2018 | |

ಬಡಗು ಯಕ್ಷರಂಗದಲ್ಲಿ ಸುಮಾರು ಮೂರುವರೆ ದಶಕಗಳ ಕಾಲ ಸ್ತ್ರೀ ವೇಷಧಾರಿಯಾಗಿ ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕಲಾವಿದರಲ್ಲಿ ಮೂರೂರು ವಿಷ್ಣು ಭಟ್‌ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರಿಗೆ ನ.17ರಂದು ಉಡುಪಿಯಲ್ಲಿ ಪೆರ್ಡೂರು ಮೇಳದ ರಂಗಸ್ಥಳದಲ್ಲಿ ಕುಕ್ಕೆಹಳ್ಳಿ ಬೈಲುಬೀಡು ಕೀರ್ತಿಶೇಷ ಮಹಾಬಲ ಹೆಗ್ಡೆ ಸ್ಮಾರಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. 

Advertisement

ವಿಷ್ಣುಭಟ್ಟರು 10ನೇ ತರಗತಿಗೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ  ಮೂರೂರು  ರಾಮ ಹೆಗಡೆಯವರಿಂದ ಯಕ್ಷಗಾನದ ಓಂಕಾರವನ್ನು ಕಲಿತ ಭಟ್ಟರು ಬಳಿಕ ಪಿ.ವಿ.ಹಾಸ್ಯಗಾರರಲ್ಲಿ ಹೆಜ್ಜೆಗಾರಿಕೆ ಮತ್ತು ನಟನಾ ಕೌಶಲದ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಗುಂಡಬಾಳ ಮೇಳದಲ್ಲಿ ಪ್ರಥಮ ಬಾರಿಗೆ ಗೆಜ್ಜೆ ಕಟ್ಟುವ ಮೂಲಕ ವಿಷ್ಣು ಭಟ್ಟರ ಯಕ್ಷ ಪಯಣ ಪ್ರಾರಂಭಗೊಂಡಿತು. ಇಲ್ಲಿ ಅನೇಕ ಪ್ರಸಿದ್ಧ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಪಳಗಿದ ಭಟ್ಟರು ಬಳಿಕ ನಡುತಿಟ್ಟಿನ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಪಂಚಲಿಂಗೇಶ್ವರ, ಪೆರ್ಡೂರು, ಮಂದಾರ್ತಿ, ಶಿರಸಿ, ಸಾಲಿಗ್ರಾಮ, ಪೂರ್ಣಚಂದ್ರ ಮೇಳ ಕೊಂಡದಕುಳಿ ಹಾಗೂ ಇಡಗುಂಜಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. 

 ಶೇಣಿ, ಚಿಟ್ಟಾಣಿ, ತೆಕ್ಕಟ್ಟೆ ಮಾಸ್ತರ್‌, ವಾಸುದೇವ ಸಾಮಗರು, ವೈಕುಂಠ ನಾಯ್ಕ…, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ನಗರ ಜಗನ್ನಾಥ್‌ ಶೆಟ್ಟಿ, ಯಾಜಿ, ಕೊಂಡದಕುಳಿ, ತೀರ್ಥಹಳ್ಳಿ, ಸಿದ್ಧಕಟ್ಟೆದ್ವಯರು, ಐರೋಡಿ, ತೋಟಿಮನೆ, ರಮೇಶ್‌ ಭಂಡಾರಿ ಮುಂತಾದ ಪ್ರಸಿದ್ಧ ಕಲಾವಿದರೊಂದಿಗೆ ಸಮದಂಡಿಯಾಗಿ ಪಾತ್ರ ನಿರ್ವಹಿಸಿರುವ ಅವರು ಪೌರಾಣಿಕ ಪ್ರಸಂಗಗಳಲ್ಲಿ ಮಾತ್ರವಲ್ಲದೇ ನವ್ಯ ಪ್ರಸಂಗಳಲ್ಲಿಯೂ  ಯಕ್ಷರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆೆ. ಶೂದ್ರ ತಪಸ್ವಿನಿಯ ಚಂದ್ರಮತಿ, ಮಧು ಮಾಧವಿಯ ಮಾಧವಿ, ಚಾರು ಚಂದ್ರಿಕೆಯ ಚಂದ್ರಿಕೆ ಹೀಗೆ ಯಾವುದೇ ಪಾತ್ರವಿರಲಿ ಅವುಗಳನ್ನು ಭಟ್ಟರು ನಿರ್ವಹಿಸುತ್ತಿದ್ದ ರೀತಿ ಇಂದಿನ ಯುವ ಕಲಾವಿದರಿಗೆ ಮಾದರಿಯಂತಿದೆ.

ಮೋಹನ್‌ ಪೆರ್ಡೂರು 

Advertisement

Udayavani is now on Telegram. Click here to join our channel and stay updated with the latest news.

Next