Advertisement

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

09:28 AM May 02, 2024 | Team Udayavani |

ಹೊಸದಿಲ್ಲಿ: ವಿಜ್ಞಾನಿಗಳಿಗೆ ಅಚ್ಚರಿಯ ಆಗರವಾಗಿರುವ ಚಂದ್ರನಲ್ಲಿ ಜಲ ರಾಶಿಯೇ ಅಡಗಿದೆ ಎಂಬುದಕ್ಕೆ ಸಾಕ್ಷ್ಯ  ಗಳು ಮತ್ತೆ ದೊರೆತಿವೆ. ಧ್ರುವೀಯ ಕುಳಿಗಳಲ್ಲಿ ನೀರಿನಂಶ ಇರವ ಬಗ್ಗೆ ಇಸ್ರೋದ ಕೇಂದ್ರ(ಎಸ್‌ಎಸಿ) ವಿಜ್ಞಾನಿಗಳ ಅಧ್ಯಯನದಲ್ಲಿ ತಿಳಿದು ಬಂದಿದೆ.

Advertisement

ಈ ಅಧ್ಯಯನವನ್ನ ಐಐಟಿ ಕಾನ್ಪುರ್‌, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿ ಮತ್ತು ಜೆಟ್‌ ಪ್ರಪಲಷನ್ ಲ್ಯಾಬೋರೇಟರಿ, ಐಐಟಿ(ಐಎಸ್‌ಎಂ) ಧನಬಾದ್‌ ಜಂಟಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿತ್ತು. ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಚಂದ್ರನ ದಕ್ಷಿಣ ಮತ್ತು ಉತ್ತರ ಕುಳಿಯೊಂದರಲ್ಲಿ ಈಗಾಗಲೇ ಕಂಡು ಬಂದಿರುವು ದಕಿಂತಲೂ ಈಗಿನ ಕುಳಿ ಯಲ್ಲಿ ಮೊದಲೆರಡು ಮೀಟರ್‌ನಲ್ಲಿ ನೀರಿನಂಶ 5ರಿಂದ 8 ಪಟ್ಟು ಹೆಚ್ಚು ಎಂದು ತಿಳಿಸಲಾಗಿದೆ. ಈ ಅಧ್ಯಯನ ವರದಿಯ ಮಾಹಿ ತಿಯು ಚಂದ್ರನ ಮೇಲೆ ಮಾನವನ ವಾಸ ಹಾಗೂ ಮುಂಬರುವ ಚಂದ್ರ ಯೋಜನೆಗಳಿಗೆ ಹೆಚ್ಚಿನ ಬಲವನ್ನು ತಂದುಕೊಡಲಿದೆ. ಗಮನಾರ್ಹ ಸಂಗತಿ ಎಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿರುವುದಕ್ಕಿಂತಲೂ ಉತ್ತರ ಧ್ರುವದ ಕುಳಿಗಳಲ್ಲಿ ನೀರಿನಂಶ ಹೆಚ್ಚು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next