Advertisement

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

01:30 PM May 16, 2024 | sudhir |

ಹೊಸದಿಲ್ಲಿ: ಈ ಬಾರಿ ನೈಋತ್ಯ ಮುಂಗಾರು ನಿಗದಿತ ಸಮಯಕ್ಕೆ ಕೇರಳಕ್ಕೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಂಎಡಿ) ಬುಧವಾರ ಹೇಳಿದೆ. ಮೇ 31ಕ್ಕೆ ಮುಂಗಾರು ಭಾರತ ಪ್ರವೇಶಿಸಲಿದ್ದು, ಈ ವರ್ಷ ಭಾರತದ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ಇಲಾಖೆ ಹೇಳಿದೆ.

Advertisement

ಈ ಬಾರಿ ಮುಂಚಿತವಾಗಿ ಮುಂಗಾರು ಭಾರತ ಪ್ರವೇಶಿಸುತ್ತಿಲ್ಲ. ಜೂ.1 ಮುಂಗಾರು ಭಾರತ ಪ್ರವೇಶಿಸುವ ದಿನವಾಗಿದೆ. ಕೆಲವೊಮ್ಮೆ ಇದು 7 ದಿನಗಳ ಕಾಲ ತಡವಾಗುವ ಸಾಧ್ಯತೆಯೂ ಇತ್ತು. ಆದರೆ ಈ ವರ್ಷ ನಿಗದಿತ ಸಮಯಕ್ಕೆ ಮಳೆ ಬೀಳಲಿದೆ. ಈ ಬಾರಿ ಹೆಚ್ಚೆಂದರೆ 4 ದಿನಗಳ ವ್ಯತ್ಯಾಸವಾಗಬಹುದು ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ್‌ ಮಹೋಪಾತ್ರ ಹೇಳಿದ್ದಾರೆ. ಈ ಭಾರಿ ಭಾರತದಲ್ಲಿ ಮುಂಗಾರಿನ ಪ್ರಭಾವದಿಂದ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ. ಜೂನ್‌ನಿಂದ ಸೆಪ್ಟಂಬರ್‌ವರೆಗೆ ಮಳೆ ಅಧಿಕವಾಗಿರಲಿದೆ ಎಂದು ಇಲಾಖೆ ಕಳೆದ ತಿಂಗಳು ಹೇಳಿತ್ತು. ಭಾರತದ ಕೃಷಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಗಮನಿಸಿದರೆ ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಬೀಳುವ ಮಳೆ ಅತ್ಯಂತ ಪ್ರಮುಖವಾಗಿದೆ.

ಇದನ್ನೂ ಓದಿ: Hoarding Collapse: ಅಪ್ಪಚ್ಚಿಯಾದ ಕಾರಿನಲ್ಲಿತ್ತು ನಿವೃತ್ತ ಅಧಿಕಾರಿ, ಪತ್ನಿಯ ಮೃತದೇಹ

Advertisement

Udayavani is now on Telegram. Click here to join our channel and stay updated with the latest news.

Next