Advertisement
89ನೇ ಅಕಾಡೆಮಿ ಅವಾರ್ಡ್ ಬ್ಯಾರಿ ಜೆಂಕಿನ್ಸ್ ನಿರ್ದೇಶನದ “ಮೂನ್‌ಲೈಟ್’ ಚಿತ್ರದ ಪಾಲಾಗಿದೆ. ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ ಈ ಚಿತ್ರದ ಕತೆ ಈಗಾಗಲೇ ಜಾಗತಿಕವಾಗಿ ಹುಬ್ಬೇರಿಸಿದೆ. “ಅತ್ಯುತ್ತಮ ಚಿತ್ರ’ದೊಂದಿಗೆ ಇನ್ನೆರಡು ಗೌರವಗಳನ್ನೂ “ಮೂನ್‌ಲೈಟ್’ ಬಾಚಿದೆ. ಇದೇ ಚಿತ್ರದ ಮಹೇರ್ಷಲಾ ಅಲಿಗೆ “ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಸಿಕ್ಕಿದ್ದು, ಮುಸ್ಲಿಮ್ ಕಲಾವಿದನೊಬ್ಬನಿಗೆ ಆಸ್ಕರ್ ಪ್ರಾಪ್ತವಾಗಿದ್ದು ಇದೇ ಮೊದಲು. “ಅತ್ಯುತ್ತಮ ಚಿತ್ರಕಥೆ’ ವಿಭಾಗದಲ್ಲಿ ಬ್ಯಾರಿ ಜೆಂಕಿನ್ಸ್ ಮತ್ತು ಟ್ಯಾರೆಲ್ ಆಲ್ವಿನ್ ಮೆಕ್ರಾನೇಗೆ ಪ್ರಶಸ್ತಿ ಸಿಕ್ಕಿದೆ. ಸ್ಕ್ರೀನ್‌ಪ್ಲೇ ವಿಭಾಗದಲ್ಲೂ ಆಸ್ಕರ್ ಪಡೆದಿದೆ.
Related Articles
ಭಾರತೀಯ ಮೂಲದ ದೇವ್ ಪಟೇಲ್‌ಗೆ ಆಸ್ಕರ್ ತಪ್ಪಿದರೂ , ಭಾರತೀಯರೆಲ್ಲ ಹೆಮ್ಮೆ ಪಡುವಂಥ ಅಲೆ ಆಸ್ಕರ್ ಅಂಗಳದಲ್ಲಿ ಸೃಷ್ಟಿಯಾ ಗಿತ್ತು. ನಾಮನಿರ್ದೇಶನಗೊಂಡ “ದಿ ಲಯನ್ ಕಿಂಗ್’ ಚಿತ್ರದಲ್ಲಿ ದೇವ್ ಪಟೇಲ್‌ನ ಬಾಲ್ಯದ ಪಾತ್ರದಲ್ಲಿ ನಟಿ ಸಿದ 8 ವರ್ಷದ ಸನ್ನಿ ಪವಾರ್, ಕೆಂಪು ಹಾಸಿನ ಮೇಲೆ ಹೆಜ್ಜೆಯಿಟ್ಟರು. ಸನ್ನಿ ನಡಿಗೆಯ ಫೋಟೋ ಆಸ್ಕರ್‌ನ ಅತ್ಯು ತ್ತಮ ಫೋಟೋಗಳಲ್ಲಿ ಒಂದೆಂಬ ಶ್ಲಾಘ ನೆಗೆ ಪಾತ್ರವಾಗಿದೆ. ಅಮೆರಿಕದ ಖ್ಯಾತ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್, ಸನ್ನಿಯನ್ನು “ಆಸ್ಕರ್’ ಪ್ರತಿಮೆಯಂತೆ ಎತ್ತಿ ಎಲ್ಲರೆ ದುರು ಗೌರವ ಸೂಚಿಸಿದಾಗ ಸಭಾಂ ಗಣದಲ್ಲಿ ಚಪ್ಪಾಳೆಗಳು ಮೊಳಗಿದವು.
Advertisement
ಟ್ರಂಪ್ ನೀತಿಗೆ ಅಸ್ಕರ್ ಫರ್ಹಾದಿ ಸಡ್ಡುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ವಿರೋಧಿ ನೀತಿಗೆ ಆಸ್ಕರ್ ಸಮಾರಂಭವನ್ನೂ ಕಾವೇರಿಸಿತ್ತು. “ಸೇಲ್ಸ್‌ಮ್ಯಾನ್’ ಚಿತ್ರದ ನಿರ್ದೇಶಕ, ಇರಾನ್‌ನ ಅಸ್ಕರ್ ಫರ್ಹಾದಿ “ಅತ್ಯುತ್ತಮ ವಿದೇಶಿ ಚಿತ್ರ’ ಗೌರವ ಸ್ವೀಕರಿಸಲು ಬಾರದೆ ಟ್ರಂಪ್ ವಿರುದ್ಧ ಪ್ರತಿಭಟನೆ ಸೂಚಿಸಿದರು. “ಅಮೆರಿಕ ತನ್ನ ದೇಶದ ಪ್ರಜೆಗಳನ್ನು ಅವಮಾನಿಸಿದೆ. ಹಾಗಾಗಿ ಆಸ್ಕರ್‌ಗೆ ಬರುವುದಿಲ್ಲ. ಆದರೆ, ಆಸ್ಕರ್ ಸಮಿತಿ ತಮ್ಮ ಚಿತ್ರಕ್ಕೆ ಗೌರವ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂಬ ಪತ್ರವನ್ನು ಅಸ^ರ್ ರವಾನಿಸಿದ್ದರು. ಟ್ರಂಪ್‌ಗೆ ವ್ಯಂಗ್ಯ ಮಾಡಿದ ಜಿಮ್ಮಿ
ಆಸ್ಕರ್‌ನಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಮ್ ಕಲಾವಿದನಿಗೆ (ಮಹೇರ್ಶಲಾ ಅಲಿ “ಅತ್ಯುತ್ತಮ ಪೋಷಕ ನಟ’) ಗೌರವ ಸಿಕ್ಕಿದೆ. ಇದನ್ನೇ ಪ್ರಸ್ತಾಪಿಸುತ್ತಾ ಅಮೆರಿಕದ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್ ಅವರು ಡೊನಾಲ್ಡ್ ಟ್ರಂಪ್‌ರ ಭಾಷಣವನ್ನು ವೇದಿಕೆಯಲ್ಲಿಯೇ ಅಣಕಿಸಿದರು. ಅಲ್ಲದೆ, “ಜನಾಂಗೀಯ ನಿಂದನೆಯಿಂದ ಅಮೆರಿಕ ಈಗ ಇಬ್ಭಾಗ ಆಗಿ ಹೋಗಿದೆ. ಆದರೆ, ನಾವು ಜನಾಂಗೀಯ ನಿಂದಕರಲ್ಲ ಎಂದು ಆಸ್ಕರ್ ಹೇಳಿದೆ’ ಎನ್ನುವ ಮೂಲಕ ಅಧ್ಯಕ್ಷರ ಕಣ್ತೆರೆಸುವ ಕೆಲಸ ಮಾಡಿದರು!