ದುಬೈ: ವಿಶ್ವದ ಐಷಾರಾಮಿ ವಸ್ತುಗಳ ನೆಲೆಯಾದ ದುಬೈನಲ್ಲಿ ಶೀಘ್ರದಲ್ಲೇ ದೈತ್ಯಾಕಾರದ ಚಂದ್ರನ ಆಕಾರದ ರೆಸಾರ್ಟ್ ತೆರೆಯಲಿದೆ. ಅರೇಬಿಯನ್ ಬಿಸಿನೆಸ್ ಪ್ರಕಾರ, ಕೆನಡಾದ ಆರ್ಕಿಟೆಕ್ಚರಲ್ ಕಂಪನಿ, ಮೂನ್ ವರ್ಲ್ಡ್ ರೆಸಾರ್ಟ್ಸ್ (ಎಂಡಬ್ಲ್ಯೂ ಆರ್), ಅತಿಥಿಗಳಿಗೆ ನೆಲದ ಮೇಲೆ ಕೈಗೆಟುಕುವ ಬಾಹ್ಯಾಕಾಶ ಪ್ರವಾಸವನ್ನು ನೀಡುವ ಸಲುವಾಗಿ ರೆಸಾರ್ಟ್ ಅನ್ನು ನಿರ್ಮಿಸಲು ಪ್ರಸ್ತಾಪಿಸಿದೆ.
ಚಂದ್ರನ ಮೇಲ್ಮೈಯ ಪ್ರತಿರೂಪವಾಗಿರುವ ಅಲ್ಟ್ರಾ ಐಷಾರಾಮಿ ಹೋಟೆಲನ್ನು 48 ತಿಂಗಳುಗಳಲ್ಲಿ ನಿರ್ಮಿಸಲು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ 735 ಅಡಿ ಎತ್ತರವನ್ನು ಹೊಂದಿದ ಈ ಹೋಟೆಲ್ ಆತಿಥ್ಯ, ಮನರಂಜನೆ, ಆಕರ್ಷಣೆಗಳು, ಶಿಕ್ಷಣ, ತಂತ್ರಜ್ಞಾನ, ಪರಿಸರ ಮತ್ತು ಬಾಹ್ಯಾಕಾಶ ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ “ಮೂನ್ ದುಬೈ” ಎಮಿರೇಟ್‌ನ ಆರ್ಥಿಕತೆಗೆ ಸೇರಿಸುತ್ತದೆ ಎಂದು ಎಂಡಬ್ಲ್ಯೂ ಆರ್ ಸಂಸ್ಥೆ ಹೇಳಿದೆ.
ಮೂನ್ ದುಬೈ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಆಧುನಿಕ ಪ್ರವಾಸೋದ್ಯಮ ಯೋಜನೆಯಾಗಿದೆ. ಅದರ ಜಾಗತಿಕ ಆಕರ್ಷಣೆ, ಬ್ರ್ಯಾಂಡ್ ಮತ್ತು ಬಹು ಸಂಯೋಜಿತ ಕೊಡುಗೆಗಳ ಆಧಾರದ ಮೇಲೆ ದುಬೈಗೆ ವಾರ್ಷಿಕ ಪ್ರವಾಸೋದ್ಯಮ ಭೇಟಿಗಳನ್ನು ದ್ವಿಗುಣಗೊಳಿಸುತ್ತದೆ” ಎಂದು ಮೂನ್ ವರ್ಲ್ಡ್ ರೆಸಾರ್ಟ್ಸ್ ಸಂಸ್ಥಾಪಕರಾದ ಸಾಂಡ್ರಾ ಜಿ ಮ್ಯಾಥ್ಯೂಸ್ ಮತ್ತು ಮೈಕೆಲ್ ಆರ್ ಹೆಂಡರ್ಸನ್ ಹೇಳಿದರು. ಅಲ್ಲದೆ, ಇಲ್ಲಿಗೆ ವರ್ಷಕ್ಕೆ 10 ಮಿಲಿಯನ್ ಜನರು ಆರಾಮವಾಗಿ ಭೇಟಿ ನೀಡಬಹುದು ಎಂದು ಹೇಳಿದರು.
ಇದನ್ನೂ ಓದಿ:ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಮುಹೂರ್ತ
ಐಷಾರಾಮಿ ರೆಸಾರ್ಟ್‌ಗೆ ಭೇಟಿ ನೀಡುವ ಅತಿಥಿಗಳು ಸ್ಪಾ ಮತ್ತು ವೆಲ್ ನೆಸ್ ಸೆಕ್ಷನ್, ನೈಟ್ ಕ್ಲಬ್, ಈವೆಂಟ್ ಸೆಂಟರ್, ಗ್ಲೋಬಲ್ ಮೀಟಿಂಗ್ ಪ್ಲೇಸ್, ಲಾಂಜ್ ಮತ್ತು ಇನ್-ಹೌಸ್ ‘ಮೂನ್ ಶಟಲ್’ ನ ಲಾಭವನ್ನು ಪಡೆಯಬಹುದು. ಹೋಟೆಲ್ ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಅವರ ಗಗನಯಾತ್ರಿಗಳಿಗೆ ತರಬೇತಿ ವೇದಿಕೆಯನ್ನೂ ಒದಗಿಸುತ್ತದೆ.
ದಿ ನ್ಯಾಷನಲ್ ಪ್ರಕಾರ, ಮೂನ್ ರೆಸಾರ್ಟ್ ನಿರ್ಮಿಸಲು 5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ. ಸದ್ಯಕ್ಕೆ, ಕಂಪನಿಯು ಪರವಾನಗಿಗಳನ್ನು ಪಡೆದುಕೊಳ್ಳುತ್ತಿದೆ. ಗ್ರಾಹಕರಿಗೆ ಉತ್ತೇಜಿಸಲು ರೋಡ್ ಶೋಗಳನ್ನು ಯೋಜಿಸುತ್ತಿದೆ. ಇದರ ನಂತರ, ಸಂಸ್ಥೆಯು ಒಂದು ವರ್ಷದ ಪ್ರಿ-ಡೆವೆಲಪ್ ಮೆಂಟ್ ಕಾರ್ಯ ನಡೆಸುತ್ತದೆ, ಬಳಿಕ ನಾಲ್ಕು ವರ್ಷಗಳ ಇದರ ನಿರ್ಮಾಣ ಕಾರ್ಯ ನಡೆಯಲಿದೆ.