Advertisement
ಸೋಮವಾರ ಮಧ್ಯಾಹ್ನ 11ಕ್ಕೆ ಕಾಣಿಸಿಕೊಂಡಿರುವ ಬೆಂಕಿ ದಿನವಿಡೀ ಉರಿದಿದ್ದು, ರಾತ್ರಿಯ ವೇಳೆಗೆ ಬೈಲಿನಲ್ಲಿ ಸಂಪೂರ್ಣವಾಗಿ ಹರಡಿ ಹೋಗಿತ್ತು. ಮಂಗಳವಾರ ಬೆಳಗ್ಗೆ ಉಚ್ಚಿಲ – ಪೊಲ್ಯ ಪ್ರದೇಶದ ಗದ್ದೆಗಳಲ್ಲೂ ಬೆಂಕಿ ವಿಸ್ತರಿಸಿದ್ದು ಸುಜ್ಲಾನ್ ಸಂಸ್ಥೆಯು ಸ್ಥಳೀಯರಿಂದ ಖರೀದಿ ಸಿದ್ದ ನೂರಾರು ಎಕರೆ ಗದ್ದೆ ಪ್ರದೇಶಗಳು ಸಂಪೂರ್ಣ ಕರಟಿ ಹೋಗಿವೆ.
ಉಡುಪಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್, ಸಹಾಯಕ ಅಧಿಕಾರಿ ಮೀರ್ ಮಹಮ್ಮದ್ ಗೌಸ್ ಮತ್ತು ಸಿಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದಾರಾದರೂ ಗಾಳಿ ಮತ್ತು ಬಿಸಿಲಿನ ಕಾರಣದಿಂದಾಗಿ ಬೆಂಕಿ ಎಲ್ಲೆಡೆಗೆ ಹಬ್ಬಿಕೊಂಡಿದೆ. ಮನೆಗಳತ್ತ ಬೆಂಕಿ ಬರದಂತೆ ತಡೆ
ಬೆಳಪು ಮಾಗಂದಡಿ, ಎಲ್ಲದಡಿ, ಪೊಲ್ಯ ಪರಿಸರದ ಹತ್ತಾರು ಮನೆಗಳತ್ತ ಬೆಂಕಿ ಹಬ್ಬಿರುವ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿ ಮನೆಗಳತ್ತ ವ್ಯಾಪಿಸುವುದಕ್ಕೆ ತಡೆಯೊಡ್ಡಿದ್ದಾರೆ.
Related Articles
ಬೆಳಪು ಮಾಗಂದಡಿ ಪರಿಸರದಲ್ಲಿ ನಾಗಬನದತ್ತ ಬೆಂಕಿ ವ್ಯಾಪಿಸಿದ್ದು ನಾಗ ಬನಕ್ಕೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ. ಪೊದೆ, ಗಿಡ- ಮರಗಳಲ್ಲಿ ಗೂಡು ಕಟ್ಟಿದ್ದ ಹಲವಾರು ಪಕ್ಷಿಗಳಲ್ಲದೇ ಹಾವುಗಳು, ಮೊಲ, ಮುಂಗುಸಿ ಸಹಿತ ವಿವಿಧ ಪ್ರಾಣಿಗಳೂ ಕರಟಿ ಹೋಗಿವೆ.
Advertisement
ಸುಜ್ಲಾನ್ ಸಂಸ್ಥೆಯು ದಶಕಗಳ ಹಿಂದೆ ಖರೀದಿಸಿದ್ದ ನೂರಾರು ಎಕರೆ ಗದ್ದೆಗಳು ಹಡೀಲು ಬಿದ್ದಿವೆ. ಬೆಂಕಿ ದುರಂತಕ್ಕೆ ಸುಜ್ಲಾನ್ ಸಂಸ್ಥೆಯ ನಿರ್ಲಕ್ಷéವೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.