ಹೊಸದಿಲ್ಲಿ: ಪ್ರಖ್ಯಾತ ರೇಟಿಂಗ್ ಸಂಸ್ಥೆ ಮೂಡಿ ಭಾರತದ ರೇಟಿಂಗ್ ಬಿಎಎ2 ಮೇಲ್ದರ್ಜೆಗೆ ಏರಿಸಿದ ಬೆನ್ನಲ್ಲೇ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದ್ದು, ‘ಭಾರತದ ಸುಧಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದಿದ್ದಾರೆ.
ಶುಕ್ರವಾರ ಮೂಡಿ ರೇಟಿಂಗನ್ನು ಮೇಲ್ದರ್ಜೆಗೆ ಏರಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಜೇಟ್ಲಿ ‘ನಾವಿದನ್ನು ಸ್ವಾಗತಿಸುತ್ತೇವೆ. ಕೆಳದ ಕೆಲ ವರ್ಷಗಳಿಂದ ನಮ್ಮ ಆರ್ಥಿಕತೆಯನ್ನು ಉತ್ತಮಪಡಿಸಲು ನಾವು ಕೈಗೊಳ್ಳುತ್ತಿದ್ದ ಧನಾತ್ಮಕ ಕ್ರಮಗಳಿಗೆ ತಡವಾಗಿ ಸಿಕ್ಕ ಪ್ರಶಂಸೆ ಇದಾಗಿದೆ’ಎಂದರು.
‘ಯಾರು ನಮ್ಮ ಆರ್ಥಿಕತೆಯ ಬಗ್ಗೆ ಸಂಶಯ ಹೊಂದಿದ್ದರೋ ಅವರು ಈಗ ಅವರ ಅಸ್ಥಿತ್ವವನ್ನೇ ಪ್ರಶ್ನಿಸಿಕೊಳ್ಳಬೇಕಾಗಿದೆ’ ಎಂದು ಟಾಂಗ್ ನೀಡಿದರು.
‘ಅಂತರಾಷ್ಟ್ರೀಯ ಮಟ್ಟದಿಂದ ಬಂದ ಪ್ರಶಂಸೆ ನಮ್ಮ ನಿರ್ಣಯಗಳಿಗೆ ನೀಡಿರುವ ಪ್ರೋತ್ಸಾಹ’ ಎಂದಿದ್ದಾರೆ.
ರೇಟಿಂಗ್ ಸಂಸ್ಥೆ ಮೂಡಿಯು ಭಾರತದ ಸಾರ್ವಭೌಮ ಶ್ರೇಣಿಯನ್ನು 14 ವರ್ಷಗಳ ಸುದೀರ್ಘ ಅಂತರದ ನಂತರ ಹೂಡಿಕೆ ದರ್ಜೆಯ ಮೇಲಿರುವ ಒಂದು ಹಂತವನ್ನು ಪರಿಷ್ಕರಿಸಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವಿದ್ದಾಗ ರೇಟಿಂಗ್ ಪರಿಷ್ಕರಿಸಲಾಗಿತ್ತು.
ಮೂಡಿ ರೇಟಿಂಗ್ ನೀಡಿರುವುದು ಕೇಂದ್ರ ಸರ್ಕಾರಕ್ಕೆಟೀಕಾಕಾರರ ಬಾಯಿ ಮುಚ್ಚಿಸಲು ಸಹಕಾರಿಯಾಗಲಿದ್ದು, ವಿಪಕ್ಷಗಳಿಗೆ ಹಿನ್ನಡೆ ಎನ್ನಲಾಗಿದೆ.