Advertisement

ಮೂಡುಬಿದಿರೆ ಪುರಸಭೆ : 30.36 ಲಕ್ಷ ರೂ.ಗಳ ಮಿಗತೆ ಬಜೆಟ್‌ ಮಂಡಿಸಿದ ಮುಖ್ಯಾಧಿಕಾರಿ

11:51 PM Mar 08, 2021 | Team Udayavani |

ಮೂಡುಬಿದಿರೆ: ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಇಂದೂ ಎಂ. 2021-22ನೇ ಸಾಲಿಗೆ ರೂ. 30,36,055 ಮಿಗತೆ ಬಜೆಟ್‌ ಮಂಡಿಸಿದರು.
3.12 ಕೋಟಿ ರೂ. ಆರಂಭಿಕ ಶಿಲ್ಕು ಇದ್ದು,2021-22ರಲ್ಲಿ 22.98 ಕೋಟಿ ರೂ. ಜಮೆ, 25.81 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ.

Advertisement

ಆದಾಯ ವಿವರ (ನಿರೀಕ್ಷೆ)
ಕಟ್ಟಡಗಳು- ತೆರಿಗೆಗಳಿಂದ 218.25 ಲಕ್ಷ ರೂ., ಬಾಡಿಗೆಯಿಂದ 80 ಲಕ್ಷ ರೂ., ಮನೆಕಸ ವಸೂಲಿಯಿಂದ 65 ಲಕ್ಷ ರೂ. ಕಟ್ಟಡ ಪರವಾನಿಗೆಗಳಿಂದ 35 ಲಕ್ಷ ರೂ., ದಂಡ ಜುಲ್ಮಾನೆಯಿಂದ 15 ಲಕ್ಷ ರೂ., ಅಭಿವೃದ್ಧಿ ಶುಲ್ಕದಿಂದ 50 ಲಕ್ಷ ರೂ., ಉದ್ಯಮ ಪರವಾನಿಗೆಗಳಿಂದ 15 ಲಕ್ಷ ರೂ., ಮಾರ್ಕೆಟ್‌ವರಿ ವಸೂಲಿಯಿಂದ 60 ಲಕ್ಷ ರೂ., ಬಸ್‌ಸ್ಟ್ಯಾಂಡ್ ‌ ಶುಲ್ಕದಿಂದ 0.6 ಲಕ್ಷ ರೂ., ನೀರಿನ ಶುಲ್ಕದಿಂದ 80 ಲಕ್ಷ ರೂ., ಖಾತಾ ಬದಲಾವಣೆ, ಜಾಹೀರಾತು ತೆರಿಗೆ, ಇತರ ಪ್ರತಿಗಳ ಶುಲ್ಕ ಗಳಿಂದ ತಲಾ 5 ಲಕ್ಷ ರೂ., ನೀರಿನ ಸಂಪರ್ಕದಿಂದ 6 ಲಕ್ಷ ರೂ., ರಸ್ತೆ ಅಗೆತದಿಂದ 1 ಲಕ್ಷ ರೂ. ಲಭಿಸುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ಪುರಸಭೆ ನಿಧಿಯಿಂದ ಭರಿಸುವ ವೆಚ್ಚಗಳು
ಕಚೇರಿಯ ಮುದ್ರಣ, ಲೇಖನ ಸಾಮಗ್ರಿಗಳಿಗೆ 6 ಲಕ್ಷ ರೂ., ಕಂಪ್ಯೂಟರ್‌, ಪೀಠೊಪಕರಣಗಳಿಗೆ 3.5 ಲಕ್ಷ ರೂ., ಕಚೇರಿಯ ವಾಹನಗಳ ಇಂಧನದ ಬಗ್ಗೆ 20 ಲಕ್ಷ ರೂ., ವಿಮಾ ಕಂತು ಬಗ್ಗೆ 10 ಲಕ್ಷ ರೂ., ದುರಸ್ತಿ ಬಗ್ಗೆ 1 ಲಕ್ಷ ರೂ., ಅಡಿಟ್‌, 3ನೇ ಪಾರ್ಟಿ ತಪಾಸಣೆ, ಕಾನೂನು ವೆಚ್ಚಗಳಿಗೆ 15 ಲಕ್ಷ ರೂ., ಜಾಹೀರಾತುಗಳಿಗೆ 7 ಲಕ್ಷ ರೂ., ಕಾರ್ಯಕ್ರಮಗಳ ವೆಚ್ಚಗಳಿಗೆ 3.50 ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಜಂಗಲ್‌ ಕಟ್ಟಿಂಗ್‌, ಹೂಳೆತ್ತಲು 23 ಲಕ್ಷ ರೂ., ಕಸ ಸಂಗ್ರಹಣೆಯ ವಾಹನ, ಚಾಲಕರ ಸಹಿತ ನಿರ್ವಹಣೆಗೆ 25 ಲಕ್ಷ ರೂ., ಹೊರಗುತ್ತಿಗೆಯಡಿ ದಾರಿದೀಪ ನಿರ್ವಹಣೆಗೆ 30 ಲಕ್ಷ ರೂ., ದಾರಿದೀಪ ಸಾಮಗಿಗಳಿಗೆ 10 ಲಕ್ಷ ರೂ., ನೀರಿನ ಬಿಲ್ಲು ನಿರ್ವಹಣೆಗೆ 12 ಲಕ್ಷ ರೂ., ಕೊಳವೆಬಾವಿ ಪಂಪ್‌, ಪೈಪ್‌ ಸೋರುವಿಕೆ ದುರಸ್ತಿಗೆ 50 ಲಕ್ಷ ರೂ., ದೂರವಾಣಿ, ವಿದ್ಯುತ್‌ ಬಗ್ಗೆ 5 ಲಕ್ಷ ರೂ., ಕಟ್ಟಡ ದುರಸ್ತಿ, ನಿರ್ವಹಣೆಗೆ 15 ಲಕ್ಷ ರೂ., ಸಮಾನ ವೇತನದಡಿಯ ನೌಕರರಿಗೆ 23 ಲಕ್ಷ ರೂ., ಕನಿಷ್ಠ ವೇತನದಡಿ ನೌಕರರಿಗೆ 5.70 ಲಕ್ಷ ರೂ., ಅಕೌಂಟ್ಸ್‌ ಗುತ್ತಿಗೆಯಡಿ ನೌಕರರಿಗೆ 14 ಲಕ್ಷ ರೂ., ಕಾರುಬಾಡಿಗೆ 4 ಲಕ್ಷ ರೂ., ನೌಕರರ ಪ್ರಯಾಣ ಭತ್ಯೆ 1.5 ಲಕ್ಷ ರೂ., ಹೊರಗುತ್ತಿಗೆ ಜೂ.ಪ್ರೋಗ್ರಾಮರ್‌ ಮತ್ತಿತರರ ವೇತನಕ್ಕೆ 14 ಲಕ್ಷ ರೂ., ಶೇ.24.10 ನಿಧಿಗೆ ಎಸ್‌ಎಫ್‌ಸಿ ನಿಧಿಯಿಂದ 25 ಲಕ್ಷ ರೂ., ಪುರಸಭೆ ನಿಧಿಯಿಂದ 6 ಲಕ್ಷ ರೂ., ಶೇ.7.25ರ ನಿಧಿಗೆ ಪುರಸಭೆಯ ನಿಧಿಯಿಂದ 2.5 ಲಕ್ಷ ರೂ., ಶೇ.5ರ ನಿಧಿಗೆ 2 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು ಪುರಸಭೆಯ ಅಭಿವೃದ್ಧಿಗಾಗಿ 18.34 ಕೋಟಿ ರೂ.ಗಳ ಆಯ-ವ್ಯಯ ಅಂದಾಜು ಪಟ್ಟಿಯನ್ನು ಮಂಡಿಸಲಾಯಿತು. ಸದಸ್ಯರು ಚರ್ಚೆಗಳಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನಿತ್ತರು.

ಉಪಾಧ್ಯಕ್ಷೆ ಸುಜಾತಾ ಶಶಿಧರ ಕೋಟ್ಯಾನ್‌, ಕಚೇರಿ ವ್ಯವಸ್ಥಾಪಕ ಗೋಪಾಲ ನಾೖಕ್‌, ಪರಿಸರ ಅಭಿಯಂತರರಾದ ಶಿಲ್ಪಾ ಎಸ್‌. , ಕಂದಾಯನಿರೀಕ್ಷಕ ಅಶೋಕ್‌ ಮತ್ತು ಸಿಬಂದಿಗಳು ಉಪಸ್ಥಿತರಿದ್ದರು.

Advertisement

ವೆಚ್ಚಗಳು
ಪೌರಕಾರ್ಮಿಕರ ವೇತನಕ್ಕೆ 59 ಲಕ್ಷ ರೂ., ಶೇ.24.10 ಪ.ಜಾ.ಪ. ಪಂ. ವರ್ಗಕ್ಕೆ 25 ಲಕ್ಷ ರೂ., 15ನೇ ಹಣಕಾಸು ಅನುದಾನದಲ್ಲಿ ರಸ್ತೆ ರಚನೆಗೆ 75.75 ಲಕ್ಷ ರೂ., ಚರಂಡಿರಚನೆಗೆ 23.23 ಲಕ್ಷ ರೂ., ಕುಡಿಯುವ ನೀರು ಕಾಮಗಾರಿಗಳಿಗೆ 50.50 ಲಕ್ಷ ರೂ., ದಾರಿದೀಪಕ್ಕೆ 2.02 ಲಕ್ಷ ರೂ., ಘನತ್ಯಾಜ್ಯ ಘಟಕಕ್ಕೆ 50.50 ಲಕ್ಷ ರೂ., ಖಾಯಂ ನೌಕರರ ವೇತನ, ಪಿಂಚಣಿಗೆ 80 ಲಕ್ಷ ರೂ. ಕಾದಿರಿಸಲಾಗಿದೆ.

ಪ್ರಮುಖ ಚರ್ಚೆಗಳು
– ಪುರಸಭೆ ಕಟ್ಟಡಗಳ ಬಾಡಿಗೆ ಬಾಕಿ 60 ಲಕ್ಷ ರೂ. ವಸೂಲಾತಿಗೆ ನೋಟಿಸ್‌ ನೀಡಲು ಕ್ರಮ
– ರಸ್ತೆ ಬದಿ ವ್ಯಾಪಾರಿಗಳಿಗೆ ವೆಂಡಿಂಗ್‌ ಝೋನ್‌ ನಿಗದಿಗೊಳಿಸಿ ಟೆಂಡರ್‌ ಮೂಲಕ ಒದಗಿಸಲಾಗುವುದು
– ಕನವರ್ಶನ್‌ ಆದ ನಿವೇಶನದಲ್ಲಿ ಮನೆ ಹೊರತು ಖಾಲಿ ಬಿದ್ದ ಜಾಗಕ್ಕೆ ಶೇ. 0.2 ರಿಂದ ಶೇ. 1.5 ತೆರಿಗೆ ಏರಿಸುವ ಕ್ರಮ ಪ್ರಸ್ತಾವವಾದಾಗ ಕಾಂಗ್ರೆಸ್‌ ಸದಸ್ಯರು ತೀವ್ರ ವಿರೋಧ
– ಪೈಪ್‌ಲೈನ್‌ ದುರಸ್ತಿ ಸರ್ವೇಯನ್ನು ಡಿಜಿಟಲೀಕರಣಗೊಳಿಸಲು ಅನುಕೂಲವಾಗು ಸಾಫ್ಟ್ ವೇರ್‌ನ ಪ್ರಾತ್ಯಕ್ಷಿಕೆ
– ಶೇ. 7.25ರ ನಿಧಿಗೆ ಸಂಬಂಧಿಸಿ ವೈದ್ಯಕೀಯ ಸವಲತ್ತು, ಮನೆ ರಿಪೇರಿ, ಶೌಚಾಲಯ ನಿರ್ಮಾಣಗಳಿಗೆ ನೀಡುವ ಸಹಾಯ ಧನದ ಮೊತ್ತವನ್ನು ಏರಿಸಲು ಆಗ್ರಹ
– ಆರೋಗ್ಯ ನಿರೀಕ್ಷಕರ ನಿಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next