Advertisement

ಮೂಡುಬೆಳ್ಳೆ: ಮಳೆಯ ಅವಾಂತರ

06:00 AM May 30, 2018 | Team Udayavani |

ಶಿರ್ವ: ಮಂಗಳವಾರ ಸುರಿದ ಮಳೆಯ ಪರಿಣಾಮ ಮೂಡುಬೆಳ್ಳೆ ಪರಿಸರದಲ್ಲಿ ಚರಂಡಿಯ ಬದಲು ರಸ್ತೆಗಳಲ್ಲಿ , ಮನೆಯಂಗಳದಲ್ಲಿ ನೀರು ಹರಿದು ಜನರು, ವಾಹನ ಸವಾರರು ಪರದಾಡುವಂತಾಗಿದೆ.

Advertisement

ಮೂಡುಬೆಳ್ಳೆಯ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಲೋಕೋಪಯೋಗಿ ಇಲಾಖೆಯವರು ಸಕಾಲದಲ್ಲಿ ಚರಂಡಿ ತೆರೆದು ಸಿದ್ಧತೆ ಮಾಡಿಕೊಳ್ಳದ ಪರಿಣಾಮ ಮುಂಗಾರು ಮಳೆಗೆ ಮಳೆನೀರು ರಸ್ತೆಯಲ್ಲೇ ಹರಿದಿದೆ.

ಗಣಪನಕಟ್ಟೆ ಬಳಿ, ಮೂಡುಬೆಳ್ಳೆ ಪೇಟೆ, ಕೆಳಪೇಟೆಯಿಂದ ಪೆಟ್ರೋಲ್‌ ಬಂಕ್‌ನವರೆಗೆ ಚರಂಡಿ ಸಮರ್ಪಕ ವಿಲ್ಲದೆ ರಾಜ್ಯ ಹೆದ್ದಾರಿಯಲ್ಲೇ ಮಳೆನೀರು ನಿಂತಿದೆ.ರಸ್ತೆಯಲ್ಲೇ ಕೆಸರು ನೀರು ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಬಿದ್ದು ಗಾಯಗೊಂಡ ಘಟನೆ ಕೂಡಾ ಅಲ್ಲಲ್ಲಿ ಸಂಭವಿಸಿದೆ. ಅನುದಾನ ತಡವಾಗಿ ಬಂದ ಕಾರಣ ಆ ಬಳಿಕ ಟೆಂಡರ್‌ ನೀಡಬೇಕಾಗು ವುದರಿಂದ ಕಾಮಗಾರಿ ವಿಳಂಬವಾಗಿ ಈ ಸಮಸ್ಯೆ ಆಗುತ್ತಿದೆ ಎಂದು ಲೋಕೋ ಪಯೋಗಿ ಇಲಾಖೆಯ ಎಂಜಿನಿಯರ್‌ ಉದಯಕುಮಾರ್‌ ಶೆಟ್ಟಿ ತಿಳಿಸಿದ್ದಾರೆ. 

ಮನೆಗೆ ನುಗ್ಗಿದ ನೀರು
ಗಣಪನಕಟ್ಟೆಯ ಬಳಿ ರಾಜ್ಯ ಹೆದ್ದಾರಿ ಹಾಗೂ ಪಿಡಬ್ಲ್ಯುಡಿ ರಸ್ತೆಯ ಚರಂಡಿ ಅಸಮರ್ಪಕತೆಯಿಂದಾಗಿ ನೀರು ಮನೆಯಂಗಳಕ್ಕೆ ಹರಿದು ಮನೆಯೊಳಗೆ ನುಗ್ಗಿದ ಘಟನೆಯೂ ನಡೆದಿದೆ.

ಆವರಣಗೋಡೆ ಕುಸಿತ
ಗಾಂಧಿನಗರದಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದು ಕಲ್ಲು ಮಣ್ಣು ಪಕ್ಕದ ಮನೆಯ ಮುತ್ತು ಸೇರಿಗಾರಿ¤ಯವರ ಮನೆಯ ಪಂಚಾಂಗಕ್ಕೆ ತಾಗುವಂತೆ ಬಿದ್ದಿದೆ.ಮಳೆ ಇನ್ನಷ್ಟು ಬಂದರೆ ಕುಸಿತ ಉಂಟಾಗಿ ನೀರು ನುಗ್ಗಿ ಮನೆಗೆ ಹಾನಿಯುಂಟಾಗುವ ಸಾದ್ಯತೆಯೂ ಇದೆ.ಈ ಬಗ್ಗೆ ಕಾಪು ತಹಶೀಲ್ದಾರ್‌ ಜಾನ್‌ ಪಿಂಟೋ ಅವರಿಗೆ ಮಾಹಿತಿ ನೀಡಲಾಗಿದ್ದು , ಅವರು ಗ್ರಾಮ ಕರಣಿಕರನ್ನು ಪರಿಶೀಲನೆಗಾಗಿ ಸ್ಥಳಕ್ಕೆ ಕಳುಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next