Advertisement

ಕಾಡಾನೆ ಸೆರೆ ಕಾರ್ಯಾಚರಣೆಗೆ ಮತ್ತೊಂದು ಯಶಸ್ಸು: ಮೂಡಿಗೆರೆಯಲ್ಲಿ ಎರಡನೇ ಪುಂಡಾನೆ ಸೆರೆ

05:51 PM Dec 03, 2022 | Team Udayavani |

ಕೊಟ್ಟಿಗೆಹಾರ: ಕಾಡಾನೆಗಳ ಕಾರ್ಯಾಚರಣೆಗೆ ಮತ್ತೊಂದು ಯಶಸ್ಸು ಸಿಕ್ಕಿದೆ, ಕಳೆದ ಮೂರು ತಿಂಗಳಿಂದ ಮೂವರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆಗಳ ಪೈಕಿ ಎರಡನೇ ಪುಂಡಾನೆ ಸೆರೆಯಾಗಿದೆ.

Advertisement

ಇಂದು (ಶನಿವಾರ) ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

ಕಳೆದ ಮೂರು ತಿಂಗಳಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರಕಾರ ಅನುಮತಿ ನೀಡಿತ್ತು, ಅದರಂತೆ ಕಳೆದ ಐದು ದಿನಗಳ ಹಿಂದೆ ಅರಣ್ಯ ಇಲಾಖೆಯಿಂದ ಕಾಡಾನೆ ಕಾರ್ಯಾಚರಣೆ ನಡೆಸಲು ಆರಂಭಿಸಲಾಗಿತ್ತು, ಅದರಂತೆ ಮೊದಲ ದಿನವೇ ಕುಂಡ್ರ ಗ್ರಾಮದಲ್ಲಿ ಮೊದಲ ಪುಂಡಾನೆಯನ್ನು ಹಿಡಿಯುವ ಮೂಲಕ ಮೊದಲ ಯಶಸ್ಸು ಕಂಡಿದ್ದರು ಇದೀಗ ತಳವಾರ ಗ್ರಾಮದಲ್ಲಿ ಮತ್ತೊಂದು ಪುಂಡಾನೆ ಸೆರೆಯಾಗಿದೆ.

5 ಸಾಕಾನೆಗಳಿಂದ ಸತತ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಇಲಾಖೆ ಇನ್ನೊಂದು ಪುಂಡಾನೆಯ ಸೆರೆಗೆ ಕಾರ್ಯಾಚರಣೆ ಮುಂದುವರೆಸಿದೆ, ಇದಕ್ಕಾಗಿ ಇಲಾಖೆ ಡ್ರೋನ್ ಕ್ಯಾಮೆರಾಗಳನ್ನು ಉಪಯೋಗಿಸಿತ್ತು.

ಸದ್ಯ ಎರಡು ಪುಂಡಾನೆ ಸೆರೆಯಿಂದ ಕಾಫಿನಾಡಿಗರು ಕೊಂಚ ಮಟ್ಟಿನ ನಿಟ್ಟಿಸಿರು ಬಿಟ್ಟಂತಾಗಿದೆ.

Advertisement

ಇದನ್ನೂ ಓದಿ: ಪೊಲೀಸರು ಎಸೆದ ತೂಕದ ಮಾಪನವನ್ನು ತರಲು ಹೋಗಿ ಕಾಲು ಕಳೆದುಕೊಂಡ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next