ಮೂಡಿಗೆರೆ: ಕಾಡಾನೆ ಸೆರೆ ಕಾರ್ಯಾಚರಣೆ ಮೂರನೇ ದಿನವಾದ ಗುರುವಾರ ತಳವಾರ, ದೊಡ್ಡಹಳ್ಳ, ಕುಂದೂರು ಭಾಗದಲ್ಲಿ ಮುಂದುವರಿದಿದೆ. ಆರು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಕಾಡಾನೆಗಳ ಪತ್ತೆಗೆ ಡ್ರೋನ್ ಕ್ಯಾಮರಾಗಳ ಬಳಕೆ ಮಾಡಲಾಗಿದ್ದು ಅರಣ್ಯ ಇಲಾಖೆ ಕಾಡಾನೆ ಜಾಡು ಹಿಡಿದು ಕಾರ್ಯಾಚರಣೆ ಆರಂಭಿಸಿದೆ.
ಇದನ್ನೂ ಓದಿ: ಡಿ. 24 ರಿಂದ ದಾವಣಗೆರೆಯಲ್ಲಿ ವೀರಶೈವ-ಲಿಂಗಾಯತ ಮಹಾಸಭಾ ಅಧಿವೇಶನ; ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ
ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು, ಗ್ರಾಮದ ಜನರು ಆನೆ ದಾಳಿಯಿಂದ ರೋಸಿ ಹೋಗಿದ್ದರು. ಹಲವು ಭಾರಿ ಕಾಡಾನೆಯಿಂದ ರಕ್ಷಣೆ ನೀಡಿ ಎಂದು ಗ್ರಾಮದ ಜನರು ಅರಣ್ಯ ಇಲಾಖೆ ಸಿಬ್ಬಂಧಿಗಳಲ್ಲಿ ಮನವಿಯನ್ನೂ ಮಾಡಿದ್ದರು, ಆದರೂ ಆನೆಗಳ ದಾಳಿ ಮಾತ್ರ ಮುಂದುವರೆದಿತ್ತು.