ಮೂಡಿಗೆರೆ: ಏಕಕಾಲದಲ್ಲಿಯೇ 4 ಬಾರ್ ಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬಣಕಲ್ ಮೂಡಿಗೆರೆ ಗೋಣಿಬೀಡು ಚೀಕನಹಳ್ಳಿ ಎಲ್ಲಿ ನಡೆದಿದೆ
4 ಬಾರ್ ಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದು ಹಣ ಮತ್ತು ಮದ್ಯವನ್ನು ತೆಗೆದು ತೆಗೆದುಕೊಳ್ಳದೆ ಪರಾರಿಯಾಗಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಾಲೂಕಿನ ಮೂಡಿಗೆರೆ ಪಟ್ಟಣದ ಚಂದನ್ ಬಾರ್, ಬಣಕಲ್ ಗ್ರಾಮದ ಸಂಭ್ರಮ್ ಬಾರ್ ಸೇರಿದಂತೆ ಗೋಣಿಬೀಡು ಹಾಗೂ ಚೀಕನಹಳ್ಳಿಯಲ್ಲಿ ಕಳ್ಳರು ನಾಲ್ಕು ಬಾರ್ ಗಳ ಬೀಗ ಒಡೆದು ಕಳ್ಳತನಕ್ಕೆ ಯತ್ನಿದ್ದರು.
ಈ ವೇಳೆ ಕಳ್ಳರು ಹಣ ಮತ್ತು ದುಬಾರಿ ಮದ್ಯ ಮುಟ್ಟದೆ ವಾಪಸ್ಸಾಗಿರುವುದು ಸ್ಥಳೀಯಲ್ಲಿ ಆಶ್ಚರ್ಯ ಮೂಡಿಸಿದೆ.
ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದು ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದೆಂದು ತಿಳಿಸಿದ್ದಾರೆ.