Advertisement

ವಿಶ್ವಸಂಸ್ಥೆಯ ಗಮನ ಸೆಳೆದ ಮೂಡುಬಿದಿರೆಯ ಡೆನಿಮ್‌ ಧೀರಜ್‌ 

05:03 AM Feb 14, 2019 | Team Udayavani |

ಮೂಡುಬಿದಿರೆ: ಸೌರಶಕ್ತಿ ಬಳಕೆಯಲ್ಲಿ ಮಹತ್ವಪೂರ್ಣ ಸಂಶೋಧನೆ ನಡೆಸಿ ಎರಡು ಬಗೆಯ ಮಿತವ್ಯಯಕಾರಿ, ಪರಿಸರಸ್ನೇಹಿ ವ್ಯವಸ್ಥೆ ಗಳನ್ನು ರೂಪಿಸಿರುವ ಮೂಡುಬಿದಿರೆಯ 29ರ ಹರೆಯದ ಯುವ ಎಂಜಿನಿಯರ್‌ ಡೆನಿಮ್‌ ಧೀರಜ್‌ ಡಿ’ಕೋಸ್ತ ವಿಶ್ವಸಂಸ್ಥೆಯ ಗಮನ ಸೆಳೆದಿದ್ದಾರೆ. ಅವರ ಸಂಶೋಧನೆ ಭಾರತ ದಂತ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ವಿದ್ಯುತ್‌ ಸಮಸ್ಯೆಗೆ ಪರಿಹಾರ ಒದಗಿಸಬಲ್ಲುದಾಗಿದೆ.

Advertisement

ಡೆನಿಮ್‌ ಡಿ’ಕೋಸ್ತ ಅವರು ಜರ್ಮನಿಯ ಟೆಕ್ನಿಕಲ್‌ ಯುನಿವರ್ಸಿಟಿ ಆಫ್‌ ಮ್ಯೂನಿಕ್‌ (ಟುಮ್‌ ವಿವಿ)ಯಲ್ಲಿ ಪವರ್‌ ಎಂಜಿನಿಯರಿಂಗ್‌ ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿದ್ದಾರೆ. ಶೇ.40 ರಷ್ಟು ಕಡಿಮೆ ನಿರ್ವಹಣ ವೆಚ್ಚ, ಶೇ. 85ರಷ್ಟು ಮಾಲಿನ್ಯರಹಿತವಾಗಿರುವ ರಿನ್ಯೂವೆಬಲ್‌ ಸೋಲಾರ್‌ ಹೈಬ್ರಿಡ್‌ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಇದಕ್ಕಾಗಿ ಜರ್ಮನಿಯ ಬವೇರಿಯನ್‌ ಸೋಲಾರ್‌ ಎನರ್ಜಿ ಅಸೋಸಿಯೇಶನ್‌ನ “ಅತ್ಯು ತ್ತಮ ಮಾಸ್ಟರ್‌ ಥೀಸಿಸ್‌ ಎವಾರ್ಡ್‌’ಗೆ ಪಾತ್ರ ರಾಗಿ ದ್ದಾರೆ. ಅವರ ಈ ಸಾಧನೆ ಬಗ್ಗೆ ಜರ್ಮನಿಯ ಪ್ರಸಿದ್ಧ “Suddeutsche
Zeitung’ ನಿಯತಕಾಲಿಕದಲ್ಲಿ “Light for Moodbidri’ (ಮೂಡುಬಿದಿರೆಗೆ ಬೆಳಕು) ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿದೆ.

ವಿಶ್ವಸಂಸ್ಥೆಯ ಮನ್ನಣೆ
ವಿಶ್ವಸಂಸ್ಥೆಯ ಯುನೈಟೆಡ್‌ ನೇಶನ್ಸ್‌ ವರ್ಲ್ಡ್ಫುಡ್‌ ಪ್ರೋಗ್ರಾಂ (ಡಬ್ಲ್ಯೂ ಎಫ್‌ಪಿ)ನ ಸಹಕಾರದೊಂದಿಗೆ “ದಿ ಚೇರ್‌ ಆಫ್‌ ಎನರ್ಜಿ ಎಕಾನಮಿ ಆ್ಯಂಡ್‌ ಅಪ್ಲಿಕೇಶನ್‌ ಟೆಕ್ನಾಲಜಿ’ಯಲ್ಲಿ ಡೆನಿಮ್‌ ತನ್ನ ಸಂಶೋಧನೆಯನ್ನು ನಡೆಸಿದ್ದಾರೆ. ಸಂಶೋಧನೆಗೆ ಮನ್ನಣೆಯಾಗಿ ವಿಶ್ವಸಂಸ್ಥೆಯು ಅವರ ಸಂಶೋಧನೆಯ ಫಲಿತಾಂಶವನ್ನು ಪ್ರಪಂಚದ 300ಕ್ಕೂ ಅಧಿಕ, ವಿದ್ಯುತ್‌ ಸಮಸ್ಯೆಯಿರುವ ದೇಶಗಳಲ್ಲಿ ಕಾರ್ಯರೂಪಕ್ಕೆ ತರಲು ಯೋಜಿಸುತ್ತಿದೆ. ಅಫ್ಘಾನಿಸ್ಥಾನದ ಜಲಾಲಾ ಬಾದ್‌ನಲ್ಲಿ ಮೊದಲು ಅದು ಕಾರ್ಯಗತಗೊಳ್ಳುತ್ತಿದೆ.

ಪೋರ್ಟೆಬಲ್‌ ಸೋಲಾರ್‌ ಸಿಸ್ಟಂ
ವಿದ್ಯುತ್ತೇ ಇಲ್ಲದ ಕಡೆಗಳಲ್ಲಿ ಪ್ರಯೋಜನಕಾರಿಯಾಗಬಲ್ಲ ಈ ಪುಟ್ಟ ಸೋಲಾರ್‌ ಸಿಸ್ಟಮ್‌ ಅನ್ನೂ ಡೆನಿಮ್‌ ಅಭಿವೃದ್ಧಿ ಪಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಟುಮ್‌ ವಿ.ವಿ. ಪ್ರಶಸ್ತಿ ಲಭಿಸಿದೆ.

ಜಗತ್ತಿನಲ್ಲಿ 120 ಕೋಟಿ ಜನರು ಸದಾ ವಿದ್ಯುತ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿದ ಡೆನಿಮ್‌ ಬೇಕಾದಲ್ಲಿಗೆ ಒಯ್ಯಬಲ್ಲ, ಅತ್ಯಂತ ಮಿತವ್ಯಯಕಾರಿ ಸೋಲಾರ್‌ ಸಿಸ್ಟಂ ರೂಪಿಸಿದ್ದಾರೆ. ಸಾಮಾನ್ಯ ಸೋಲಾರ್‌ ಘಟಕಗಳು ಕಟ್ಟಡಗಳ ಛಾವಣಿಯ ಮೇಲಿರುತ್ತವೆ. ಡೆನಿಮ್‌ ರೂಪಿಸಿರುವ ಘಟಕ ಮನೆಯ ಅಂಗಳದಲ್ಲಿ ಇಡಬಹುದಾಗಿದೆ. ಇದು ಸಾಮಾನ್ಯ ಗಾತ್ರದ ಸ್ಲೇಟ್‌ ಆಕಾರದ ಪ್ಯಾನೆಲ್‌ ಮುಖಾಂತರ ಸೆಳೆದ ಸೂರ್ಯ ಶಕ್ತಿಯನ್ನು ಪುಟ್ಟ ಬ್ಯಾಟರಿ ಸೆಲ್‌ನಲ್ಲಿ ಶೇಖರಿಸಲಾಗುತ್ತದೆ. ಇದರಿಂದ ದೀಪ ಮಾತ್ರವಲ್ಲದೆ ಫ್ರಿಡ್ಜ್, ಫ್ಯಾನ್‌, ಟಿ.ವಿ. ಕೂಡ ಕಾರ್ಯನಿರ್ವಹಿಸುತ್ತದೆ. ಮೊಬೈಲ್‌ ರೀಚಾರ್ಜ್‌ ಮಾಡಬಹುದು. ಇದೇ ಮಾದರಿಯಲ್ಲಿ ಹೆಚ್ಚು ಸಾಮರ್ಥ್ಯವುಳ್ಳ ಬ್ಯಾಟರಿಯನ್ನು ಬಳಸಿ ಎಲ್ಲ ಬಗೆಯ ವಿದ್ಯುತ್‌ ಉಪಕರಣಗಳನ್ನು ಉಪಯೋಗಿಸಬಹುದು. ಕಟ್ಟಿಗೆ ಬಳಸುವ, ಸಾಂಪ್ರದಾಯಿಕ ಅಡುಗೆ ಮನೆಯಿಂದ ಹೊರಡುವ ಕಾರ್ಬನ್‌ ಮೊನಾಕ್ಸೆ„ಡ್‌ನ‌ಂಥ ಅಪಾಯಕಾರಿ ಅನಿಲಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಜನರು ಈ ಪುಟ್ಟ ಸೋಲಾರ್‌ ಘಟಕಗಳನ್ನು ಅಳವಡಿಸುವ ಬಗ್ಗೆ ಡೆನಿಮ್‌ ಚಿಂತನೆ ನಡೆಸಿದ್ದಾರೆ.

Advertisement

ಮೂಡುಬಿದಿರೆಯ ವಿದ್ಯಾರ್ಥಿ
ಡೆನಿಮ್‌ ಅವರು ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆ, ಅಲಂಗಾರು ಸೈಂಟ್‌ ಥಾಮಸ್‌ ಆಂ.ಮಾ. ಶಾಲೆ, ಆಳ್ವಾಸ್‌ ಪ.ಪೂ. ಕಾಲೇಜಿನಲ್ಲಿ ಓದಿ ಮೈಸೂರಿನ ನ್ಯಾಷನಲ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಗಳಿಸಿದರು. ಅಲ್ಲಿರುವಾಗ ಮೂವರು ಒಡನಾಡಿಗಳೊಂದಿಗೆ ರಚಿಸಿದ್ದ ಸೋಲಾರ್‌ ಶಕ್ತಿಯಿಂದ ಕುಕ್ಕರ್‌ ಬಳಕೆ ಮತ್ತು ನೀರು, ವಾಯು, ಜೈವಿಕ ಅನಿಲ ಮೂಲದ ವಿದ್ಯುತ್‌ ಶಕ್ತಿ ಉತ್ಪಾದನೆ (ಹೈಬ್ರಿಡ್‌ ಸಿಸ್ಟಂ) ಕುರಿತಾದ ಸಂಶೋಧನ ಪ್ರಬಂಧಕ್ಕೆ ಕೇಂದ್ರ ಸರಕಾರವು ‘ಇನ್ನೊವೇಟಿವ್‌ ಬ್ಯಾಚುಲರ್‌ ಥೀಸಿಸ್‌ ಪ್ರೊಜೆಕ್ಟ್ ಎವಾರ್ಡ್‌’ ನೀಡಿ ಗೌರವಿಸಿತ್ತು. ಈ ಸಾಧನೆಯಿಂದ ಮುಂಬಯಿಯಲ್ಲಿ ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ ಲಿಮಿಟೆಡ್‌ನ‌ಲ್ಲಿ ಎಂಜಿನಿಯರ್‌ ಹಾಗೂ ಪ್ರೊಜೆಕ್ಟ್ ಮ್ಯಾನೇಜರ್‌ ಹುದ್ದೆಗೆ ಆಯ್ಕೆಯಾದ ಡೆನಿಮ್‌ ಕಂಪೆನಿಯ ಪ್ರೋತ್ಸಾಹದೊಂದಿಗೆ ಆಫ್ರಿಕಾ, ಇಟೆಲಿ, ಚೀನ ದೇಶಗಳಿಗೆ ತೆರಳಿ ಪುನರ್‌ನವೀಕರಿಸಬಹುದಾದ ಇಂಧನ ಶಕ್ತಿಯ ಆರ್ಥಿಕ ಸಾಧ್ಯತೆಗಳನ್ನು ಶೋಧಿಸಲು ಸಾಧ್ಯವಾಯಿತು. ಹೆಚ್ಚಿನ ಕಲಿಕೆಯ ಹಂಬಲದಿಂದ ಡೆನಿಮ್‌ 2014ರ ಅಕ್ಟೋಬರ್‌ನಲ್ಲಿ ಜರ್ಮನಿಗೆ ತೆರಳಿದರು.

ತನ್ನೆಲ್ಲ ಸಾಧನೆಗಳ ಹಿನ್ನೆಲೆಯಲ್ಲಿ ತಂದೆ ಫ್ರಾಂಕ್‌ ಡಿ’ಕೋಸ್ತ , ತಾಯಿ ಜ್ಯೂಲಿಯೆಟ್‌ ಡಿ’ಕೋಸ್ತ, ಅಕ್ಕ ಡೆನ್ಸಿಲ್‌ ದೀಪಿಕಾ ಡಿ’ಕೋಸ್ತ, ಟುಮ್‌ ವಿ.ವಿ.ಯಲ್ಲಿ ಮೇಲ್ವಿಚಾರಕರಾಗಿದ್ದ ಪ್ರೊ| ಡಾ| ಇಂಗ್‌ ಆಲ್‌ರಿಚ್‌ ವ್ಯಾಗ್ನರ್‌ ಅವರ ಸಕಾಲಿಕ ಪ್ರೋತ್ಸಾಹವನ್ನು ಡೆನಿಮ್‌ ಸ್ಮರಿಸಿಕೊಳ್ಳುತ್ತಾರೆ. ಸದ್ಯ ಅವರು ಇದೇ ವಿವಿಯಲ್ಲಿ ಮ್ಯಾನೇಜ್ಮೆಂಟ್‌ ವಿಷಯದಲ್ಲಿ ತನ್ನ ಎರಡನೇ ಸ್ನಾತಕೋತ್ತರ ಅಧ್ಯಯನವನ್ನು ನಡೆಸುತ್ತಿದ್ದಾರೆ.

ಸಂಶೋಧನೆಗೆ ಅಡ್ಡಿಯಾಗದ ಕಿಡ್ನಿ ದಾನ 
ಸಂಶೋಧನೆಗಳಲ್ಲಿ ತೊಡಗಿರುವಂತೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತಾಯಿಗೆ ಕಿಡ್ನಿ ದಾನ ಮಾಡಲು ಮುಂದಾದದ್ದು ಡೆನಿಮ್‌. ಇದರಿಂದಾಗಿ ಡೆನಿಮ್‌ನ ಅಧ್ಯಯನ ಅವ ಧಿ ಸುಮಾರು ಆರು ತಿಂಗಳು ಕುಂಠಿತವಾದರೂ ಧೃತಿಗೆಡದೆ ತನ್ನ ಸಂಶೋಧನೆ ಮುಂದುವರಿಸಿ ಯಶಸ್ಸು ಕಂಡದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next