Advertisement

ಮೂಡುಬಿದಿರೆಯಲ್ಲಿ ಗಂಜಿಕೇಂದ್ರ, ಎಲ್ಲರಿಗೂ ಪಡಿತರ: ಐವನ್‌ ಡಿ’ಸೋಜಾ

11:27 PM Apr 17, 2020 | Sriram |

ಮೂಡುಬಿದಿರ: ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರು ಮೂಡುಬಿದಿರೆ ತಾಲೂಕು ಕಚೇರಿಗೆ ಭೇಟಿ ನೀಡಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ತಹಶೀಲ್ದಾರ್‌ರಲ್ಲಿ ವಿಚಾರಿಸಿ, ಸರಕಾರದ ಆದೇಶದಂತೆ ತಾಲೂಕು ವ್ಯಾಪ್ತಿಯಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದರು.

Advertisement

ತಾ| ಕಾರ್ಯನಿರ್ವಹಣಾಧಿಕಾರಿ, ಪುರಸಭಾ ಮುಖ್ಯಾಧಿಕಾರಿ,ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದದರು.ತಾಲೂಕಿನ ವ್ಯಾಪ್ತಿಯಲ್ಲಿ 1,157 ಮಂದಿ ಅಶಕ್ತರನ್ನು ಗುರುತಿಸಿದ್ದು ಸುಮಾರು 12 ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳ ಗುರುತಿಸುವುದಾಗಿ ಕಾರ್ಯ ನಿರ್ವ ಹಣಾಧಿಕಾರಿ ಮಾಹಿತಿ ನೀಡಿದರು.

ಪಡಿತರ ವ್ಯವಸ್ಥೆಯಲ್ಲಿ ಶೇ.70ರಷ್ಟು ಜನರಿಗೆ ಅಕ್ಕಿ ವಿತರಿಸಲಾಗಿದ್ದು,ಉಳಿದವರಿಗೂ ಆದ್ಯತೆ ನೀಡಬೇಕು. ಎಪಿಎಲ್‌ ಕಾರ್ಡ್‌ದಾರರಿಗೆ,ಕಾರ್ಡ್‌ ಗಳಿಗೆ ಅರ್ಜಿ ಸಲ್ಲಿಸಿದವರಿಗೆ ಕೂಡ ಪಡಿತರ ನೀಡಬೇಕೆಂಬ ಆದೇಶ ಇನ್ನೂ ಜಾರಿಯಾಗಿಲ್ಲ ಎಂದು ಐವನ್‌ ಡಿ’ಸೋಜಾ ಅಧಿಕಾರಿಗಳ ಗಮನಕ್ಕೆ ತಂದರು.

ಉಚಿತ ಹಾಲು ಸಾಲದು
ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಈ ತಾಲೂಕಿನಲ್ಲಿ ಈಗ ಪೂರೈಸಲಾಗುತ್ತಿರುವ 140 ಲೀ. ಉಚಿತ ಹಾಲಿನ ಪ್ರಮಾಣ ತೀರಾ ಕಡಿಮೆಯಾಗಿದ್ದು, ಇದನ್ನು ಏರಿಸಬೇಕು ಎಂದು ಅವರು ಹೇಳಿದರು.ತಾಲೂಕು ಮಟ್ಟದಲ್ಲಿ ಮಲೇರಿಯಾ ಜ್ವರ ಬರುವ ಸಾಧ್ಯತೆ ಇರುವ ಕಾರಣ ಎಲ್ಲ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ ತೆರೆಯುವಂತೆ ತಹಶೀಲ್ದಾರರು ಕ್ರಮ ಜರಗಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next