Advertisement
ವಿಜೇತ ಕೋಣಗಳ ಯಜಮಾನರು – (ಆವರಣದಲ್ಲಿ ಓಡಿಸಿದವರು) ಕನೆಹಲಗೆಯಲ್ಲಿ (2 ಜೊತೆ) ನಿಶಾನೆಯತ್ತ ಗರಿಷ್ಠ ಎತ್ತರಕ್ಕೆ ನೀರು ಹಾಯಿಸಿದುದನ್ನು ಗಮನಿಸಿ- ಪ್ರ.: ಬಾರಕೂರು ಶಾಂತಾರಾಮ ಶೆಟ್ಟಿ (ಮಂದಾರ್ತಿ ಶಿರೂರು ಗೋಪಾಲ ನಾೖಕ), ದ್ವಿ.: ವಾಮಂಜೂರು ತಿರುವೈಲು ನವೀನ್‌ಚಂದ್ರ ಆಳ್ವ (ನಾರಾವಿ ಯುವರಾಜ ಜೈನ್)
ಹಗ್ಗ ಕಿರಿಯ (20 ಜೊತೆ)- ಪ್ರ.: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ (ನಕ್ರೆ ಮಂಜುನಾಥ ಭಂಡಾರಿ), ದ್ವಿ.: ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (ಪಣಪೀಲು ಪ್ರವೀಣ್ ಕೋಟ್ಯಾನ್).
ನೇಗಿಲು ಹಿರಿಯ (33 ಜೊತೆ)- ಪ್ರ.: ಬಂಟ್ವಾಳ ಮಹಾ ಕಾಳಿಬೆಟ್ಟು ಸೀತಾರಾಮ ಶೆಟ್ಟಿ “ಎ’ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ), ದ್ವಿ.: ಬೋಳದಗುತ್ತು ಸತೀಶ್ ಶೆಟ್ಟಿ “ಎ’ (ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ. ಶೆಟ್ಟಿ.) ನೇಗಿಲು ಕಿರಿಯ (60 ಜೊತೆ)- ಪ್ರ.: ಅಳಿಯೂರು ಮಿತ್ತೋಟ್ಟು ಸೀತಾರಾಮ ಆನಂದ ಶೆಟ್ಟಿ “ಎ’ (ಮರೋಡಿ ಶ್ರೀಧರ್), ದ್ವಿ.: ಮಿಜಾರು ಪ್ರಸಾದ್‌ನಿಲಯ ಶಕ್ತಿಪ್ರಸಾದ್ ಶೆಟ್ಟಿ “ಬಿ’ (ಅಳದಂಗಡಿ ರವಿ ಕುಮಾರ್).
ಅಡ್ಡ ಹಲಗೆ (07 ಜೊತೆ)-ಪ್ರ.: ಹಂಕರಜಾಲು ರಾಮಚಂದ್ರ ಬಿರ್ಮಣ್ಣ ಶೆಟ್ಟಿ “ಬಿ’ (ನಾರಾವಿ ಯುವರಾಜ ಜೈನ್), ದ್ವಿ.: ಗುರುಪುರ ಕೆದುಬರಿ ಯಶೋಧರ ಗುರುವಪ್ಪ ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ).
Related Articles
ಒಟ್ಟು 137 ಜೊತೆ ಕೋಣಗಳು ಕಣದಲ್ಲಿದ್ದವು. ಕನೆಹಲಗೆಯಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ, ಹಗ್ಗ, ನೇಗಿಲು ಹಿರಿಯ ವಿಭಾಗದ ಕೋಣಗಳಿಗೆ ಕ್ರಮವಾಗಿ ಪ್ರಥಮ 2 ಪವನ್, ದ್ವಿತೀಯ 1 ಪವನ್ ಚಿನ್ನ, ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್, ದ್ವಿತೀಯ ಅರ್ಧ ಪವನ್ ಬಹುಮಾನ ನೀಡಿ ಗೌರವಿಸಲಾಯಿತು. (ವಿಶೇಷವಾಗಿ, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್ ಚಿನ್ನ ಹಾಗೂ ಸಹಾಯಕ ತಂಡದವರಿಗೆ 1,000 ರೂ. ನಗದು ಬಹುಮಾನ ನೀಡಿ ಗೌರವಿಸುವ ಕ್ರಮ ಕೋಟಿ ಚೆನ್ನಯ ಕಂಬಳದಲ್ಲಿ ಮಾತ್ರ ರೂಢಿಯಲ್ಲಿದೆ).
Advertisement
ಕಂಬಳ ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಗುಣಪಾಲ ಕಡಂಬ ಅವರು ಪ್ರಧಾನ ತೀರ್ಪುಗಾರರಾಗಿದ್ದು ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ರವೀಂದ್ರ ಕುಮಾರ್, ಕುಕ್ಕುಂದೂರು, ರಾಜೀವ್ ಶೆಟ್ಟಿ ಎಡೂ¤ರು, ನವೀನ್‌ಚಂದ್ರ ಅಂಬೂರಿ, ಸುಧಾಕರ ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ, ವಿದ್ಯಾಧರ ಜೈನ್ ರೆಂಜಾಳ, ವಿನೋದ್ ಶೆಟ್ಟಿ ಕಾಪು ಮೊದಲಾದವರು ಸಹಕರಿಸಿದ್ದರು.
ಸಚಿವ ಬಿ. ರಮಾನಾಥ ರೈ, ಶಾಸಕ ವಿನಯ ಕುಮಾರ ಸೊರಕೆ, ರಾಜ್ಯ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮೀ ನಿಂಬಾಳ್ಕರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ , ಗೌರವಾಧ್ಯಕ್ಷ, ಮೂಡಬಿದಿರೆ ಕಂಬಳ ಸಮಿತಿ ಕೋಶಾಧಿಕಾರಿ ಭಾಸ್ಕರ ಎಸ್. ಕೋಟ್ಯಾನ್, ಪ್ರ. ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕಾರ್ಯದರ್ಶಿ ರತ್ನಾಕರ ಸಿ. ಮೊಲಿ, “ಮುಡಾ’ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ದಾಖಲೆ ನಿರ್ಮಿಸಿದ ಕಂಬಳಶನಿವಾರ ಬೆಳಗ್ಗೆ 8.30ಕ್ಕೆ ಆರಂಭಿಕ ವಿಧಿಗಳ ಬಳಿಕ 10 ಗಂಟೆಗೆ ಕಂಬಳದ ಸ್ಪರ್ಧೆಗಳು ಪ್ರಾರಂಭ
ವಾಗಿ 23 ಗಂಟೆ 49 ನಿಮಿಷಗಳಲ್ಲಿ ಅಂದರೆ ರವಿವಾರ ಮುಂಜಾನೆ 8.49ಕ್ಕೆ ಬಹುಮಾನ ವಿತರಣೆಯೂ ಒಳಗೊಂಡಂತೆ ಮುಕ್ತಾಯವಾ
ಯಿತು 10,000ಕ್ಕೂ ಅಧಿಕ ಅಭಿಮಾನಿಗಳಿಗೆ ಗಂಜಿಯೊಂದಿಗೆ ಪಾಯಸದೂಟ ಇತ್ತು. ಸುಮಾರು 75,000 ಮಂದಿ ಕಂಬಳಕ್ಕೆ ಸಾಕ್ಷಿಯಾಗಿದ್ದಾರೆ. ಲೇಸರ್ ಬೀಮ್ ನೀಡಿದ ಕರಾರುವಕ್ಕಾದ ಫಲಿತಾಂಶದಿಂದಾಗಿ ಯಾವುದೇ ಗೊಂದಲ
ಗಳಿಗೆ ಅವಕಾಶವೇ ಇರಲಿಲ್ಲ. ಸಂಪೂರ್ಣ ಕಂಬಳ ಬೆತ್ತದ ಪ್ರಯೋಗವೇ ಇಲ್ಲದೆಯೇ ಅಹಿಂಸಾತ್ಮಕ ಕಂಬಳ ನಡೆಸಲು ಸಾಧ್ಯವಿದೆ ಎಂದು ಈ ಕಂಬಳ ಸಾರಿ ಹೇಳಿದೆ.