ಮೂಡುಬಿದಿರೆ: ಸ್ವಸಾಮರ್ಥ್ಯ ದಿಂದ ಪ್ರಧಾನಿಯಾಗಿ, ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಲ್ಲಿ
ಯಶಸ್ಸು ಗಳಿಸುತ್ತಿರುವ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ. ಭಟ್ ಹೇಳಿದರು.
ಮೂಡುಬಿದಿರೆ ಸಮಾಜಮಂದಿರದಲ್ಲಿ ಶುಕ್ರವಾರ ನಡೆದ, ಲೋಕಸಭಾ ಚುನಾವಣೆಯ ನಿಮಿತ್ತ ಬಿಜೆಪಿ ಮೂಡು ಬಿದಿರೆ
ವಿಧಾನ ಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ಕಾರ್ಯಕರ್ತರ ಮೂರನೇ ಹಾಗೂ ಅಂತಿಮ ಸಭೆಯಲ್ಲಿ ಮಾತನಾಡಿದರು.
ಎ. 13ಕ್ಕೆ ಮಂಗಳೂರಿಗೆ ಮೋದಿ ಪ್ರಧಾನಿ ನರೇಂದ್ರ ಮೋದಿ ಎ. 13ರಂದು ಮಂಗಳೂರಿಗೆ ಭೇಟಿ ನೀಡಲಿದ್ದು ಈ ಸಂದರ್ಭ ಪ್ರತಿ ಬೂತ್ ಮಟ್ಟದಿಂದ ಕನಿಷ್ಠ 50 ಮಂದಿ ಮಹಿಳೆಯರು ಒಟ್ಟಾಗಿ, ಮಂಡಲ ಮಟ್ಟದಿಂದ 15,000 ಮಂದಿ ಈ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆ ಸಬೇಕು ಎಂದು ಅವರು ಕರೆ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿದರು. ಸುಲೋಚನಾ ಜಿ.ಕೆ.ಭಟ್,
ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಮಂಡಲಾಧ್ಯಕ್ಷ ಈಶ್ವರ ಕಟೀಲು, ಜಿ.ಪಂ. ಸದಸ್ಯೆ ಕೆ.ಪಿ. ಸುಜಾತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾ.ಪಂ. ಸದಸ್ಯರಾದ ರೇಖಾ ಸಾಲ್ಯಾನ್, ನಾಗವೇಣಿ, ವನಿತಾ ನಾಯಕ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಲಕ್ಷ್ಮೀ ನಾಯಕ್, ಪ್ರಮುಖರಾದ ಲೀಲಾ ಬಂಜನ್, ಶಶಿಕಲಾ ಶೆಟ್ಟಿ , ಮಂಡಲ ಪ್ರ. ಕಾರ್ಯದರ್ಶಿ ಸುಕೇಶ ಶೆಟ್ಟಿ ಉಪಸ್ಥಿತರಿದ್ದರು. ಅನಿತಾ ಬಲ್ಲಾಳ್ ಸ್ವಾಗತಿಸಿದರು.
ಗೀತಾ ವೈ. ಆಚಾರ್ಯ ನಿರೂಪಿಸಿದರು.