Advertisement
ಮೂಡುಬಿದಿರೆ ಪೇಟೆಯನ್ನು ಪ್ರವೇಶಿಸುವ (ಈಗಿನ ಶಾಸಕರ ಕಚೇರಿ, ಕೋರ್ಟ್ ರಸ್ತೆ ತಿರುವು, ಜೆಡಿಎಸ್ ಕಚೇರಿ ಇವುಗಳ ಮುಂಭಾಗದಲ್ಲಿ) ಉತ್ತರಕ್ಕೆ ರಿಂಗ್‌ರೋಡ್ ರಚಿಸಲಾಗಿತ್ತು. ರಿಂಗ್‌ರೋಡ್‌ನ ಪಕ್ಕವೇ ಮೂರು ದೇವಸ್ಥಾನಗಳು, ಕಲ್ಯಾಣಮಂದಿರ, ಕ್ರೀಡಾಂಗಣ, ಪೇಟೆಯಿಂದ ಸ್ಥಳಾಂತರಿತ ಪುರಸಭೆ ಮಾರುಕಟ್ಟೆ ಇವೆ; ಬಲಗಡೆಯಲ್ಲಿ ಮೀನು, ಮಾಂಸ ಮಾರುಕಟ್ಟೆ, ಸಣ್ಣ ಕೈಗಾರಿಕೆ ಘಟಕಗಳಿವೆ.
Related Articles
Advertisement
ಈ ರಿಂಗ್‌ರೋಡ್‌ಅನ್ನು ದ್ವಿಪಥ ಗೊಳಿಸಬೇಕಾಗಿದೆ. ಇಲ್ಲಿ ಅಗತ್ಯವಿರುವಲ್ಲಿ, ವಿಶೇಷವಾಗಿ ಮಾರುಕಟ್ಟೆ, ಆಸ್ಪತ್ರೆ, ರಿಂಗ್‌ರೋಡ್ ರಸ್ತೆಗಳು ಸಂಪರ್ಕಿಸುವಲ್ಲಿ ವೇಗತಡೆಗಳನ್ನು, ಕನ್ನಡಭವನದ ಬಳಿ ವೃತ್ತವನ್ನು ನಿರ್ಮಿಸಬೇಕಾಗಿದೆ ಎಂಬಿತ್ಯಾದಿ ಕೋರಿಕೆಗಳಿರುವ ಪತ್ರವನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಪುರಸಭೆ, ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಯವರಿಗೆ ಅಧಿಕಾರಿ ಕೂಡಲೇ ಕ್ರಮ ಜರಗಿಸುವಂತೆ ಸೂಚಿಸಿದ್ದರು. ಇದಾಗಿ ತಿಂಗಳ ಬಳಿಕ ಕಡೆಯಿಂದ ಪೊಲೀಸ್ ನಿರೀಕ್ಷಕರಿಗೆ “ಪುರಸಭೆ ಮುಖ್ಯಾಧಿಕಾರಿಯವರು ಪತ್ರದಲ್ಲಿ ವ್ಯಕ್ತಪಡಿಸಲಾದ ಕೋರಿಕೆಗಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆಯವರು ಅಭಿಪ್ರಾಯ ನೀಡಬೇಕಾಗಿ ಕೋರಿದ್ದರು.
ರಿಂಗ್‌ರೋಡ್ ಸಮಸ್ಯೆಗಳ ಬಗ್ಗೆ ಪುರಸಭೆಯ ವತಿಯಿಂದ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಪುರಸಭೆಯಲ್ಲಿ ಎಂಜಿನಿಯರ್ ಹುದ್ದೆ ಖಾಲಿ ಬಿದ್ದು ಸಮಯವಾಗಿದೆ, ಸಮಸ್ಯೆಯಾಗಿದೆ. ಆದರೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಅಭಿಪ್ರಾಯದಂತೆ ಕೂಡಲೇ ಪ್ರಯತ್ನಿಸಲಾಗುವುದು. –ಇಂದೂ ಎಂ., ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ
ಧನಂಜಯ ಮೂಡುಬಿದಿರೆ