Advertisement

ಮೂಡುಬಿದಿರೆ ಪುತ್ತಿಗೆ ಆನಡ್ಕದಲ್ಲಿ ಯಾಂತ್ರೀಕೃತ ಕೃಷಿ ಪ್ರಾತ್ಯಕ್ಷಿಕೆ

07:18 PM Jul 08, 2021 | Team Udayavani |

ಮೂಡುಬಿದಿರೆ : ಭತ್ತದ ಕೃಷಿಯಿಂದ ಯುವಕರು ವಿಮುಖರಾಗುತ್ತಿರುವ ಸನ್ನಿವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು `ಯಂತ್ರಶ್ರೀ ‘ ಯೋಜನೆಯ ಮೂಲಕ ಯಂತ್ರಗಳನ್ನು ಬಳಸಿ ಭತ್ತದ ಕೃಷಿಯನ್ನು ಲಾಭದಾಯಕವನ್ನಾಗಿಸಲು ಯುವಕರಿಗೆ, ಬಡವರಿಗೆ ಪ್ರೇರಣೆ, ಸಹಕಾರ ಸಹಿತ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.

Advertisement

ಸಮೀಪದ ಪುತ್ತಿಗೆಯ ಆನಡ್ಕ ದಿನೇಶ್ ಕುಮಾರ್ ಅವರ ಹೊಲದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ ಪ್ರಾತ್ಯಕ್ಷಿಕೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಎರಡು ನಾಟಿ ಯಂತ್ರಗಳ ಕಾರ್ಯಾಚರಣೆಗೆ ಟ್ರೇಯಲ್ಲಿ ಬೆಳೆಸಿರುವ ಭತ್ತದ ಸಸಿಗಳ ಮಡಿಗಳನ್ನು ದಿನೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು ಕೃಷಿ ಅಳಿದುಹೋಗುವುದೋ ಎಂಬ ಭೀತಿಯು ಹೊಸ ಹೊಸ ಯಂತ್ರಗಳ ಪ್ರವೇಶದಿಂದಾಗಿ ದೂರವಾಗುತ್ತಿದೆ; ಮತ್ತೆ ಜನರು ಭತ್ತದ ಕೃಷಿಯತ್ತ ಮನಸ್ಸು ಮಾಡುವಂತಾಗಿದೆ’ ಎಂದರು.

ಇದನ್ನೂ ಓದಿ :ಒತ್ತಡದಿಂದ ಹೊರಬರುವುದಕ್ಕೆ ಸುಲಭ ಮಾರ್ಗ ಯಾವುದು..? ಮ್ಯಾನೇಜ್ ಮೆಂಟ್ ಅಂದರೆ ಏನು… 

ಯೋಜನೆಯ ಹಿರಿಯ ನಿರ್ದೇಶಕ ಗಣೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, `ಯಂತ್ರಶ್ರೀ’ ಕಾರ್ಯಕ್ರಮದ ಮೂಲಕ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ, ಮೂಡುಬಿದಿರೆ ಒಳಗೊಂಡಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ವರ್ಷ 1000 ಎಕ್ರೆ ಹಡಿಲು ಭೂಮಿ ಸಾಗುವಳಿ ಆಗಿದ್ದರೆ ಈ ವರ್ಷ ಒಟ್ಟು 1750 ಎಕ್ರೆಯಷ್ಟು ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಯಲಿದೆ; ಒಟ್ಟು 4000 ಎಕ್ರೆಯಲ್ಲಿ ಯಂತ್ರಗಳ ಮೂಲಕ ಕೃಷಿ ಕಾರ್ಯ ನಡೆಸುವ ಗುರಿ ಹೊಂದಲಾಗಿದೆ’ ಎಂದರು.

ಕೃಷಿ ಅಧಿಕಾರಿ ವಿ.ಎಸ್. ಕುಲಕರ್ಣಿ ಅವರು, ಕನಿಷ್ಟ ಒಂದು ದನವಾದರೂ ಸಾಕಿದರೆ ಮೂವತ್ತು ಎಕ್ರೆ ಭೂಮಿಯನ್ನು ಹಸನಾಗಿಸಬಹುದು; ಒಂದು ಬ್ಯಾರೆಲ್ ಜೀವಾಮೃತದ ಮೂಲಕ ಒಂದು ಎಕ್ರೆಯಲ್ಲಿ ಕೃಷಿ ಕಾರ್ಯ ನಡೆಸಲು ಸಾಧ್ಯವಿದೆ’ ಎಂದರು.

Advertisement

ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಮಾತನಾಡಿ, ಭತ್ತದ ಬೀಜ ಬಿತ್ತನೆಯಿಂದ ಕಟಾವಿನವರೆಗೆ ಎಲ್ಲ ಕೃಷಿಕಾರ್ಯಗಳನ್ನೂ ಯಂತ್ರಗಳ ಮೂಲಕವೇ ನಡೆಸಲು ಕೃಷಿ ಇಲಾಖೆ ಮತ್ತು ಗ್ರಾಮಾಭಿವೃದ್ದಿ ಯೋಜನೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ’ ಎಂದು ವಿವರ ನೀಡಿದರು.

ಗ್ರಾ.ಪಂ. ಸದಸ್ಯ ಜಗದೀಶ ಕೋಟ್ಯಾನ್, ರೈತ ಪ್ರಮುಖರಾದ ಧನಕೀರ್ತಿ ಬಲಿಪ, ರಾಜವರ್ಮ ಬೈಲಂಗಡಿ, ಮಿತ್ತಬೈಲು ವಾಸುದೇವ ನಾಯಕ್, ವಾದಿರಾಜ ಮಡ್ಮಣ್ಣಾಯ, ‘ಯಂತ್ರಶ್ರೀ’ ಮೇಲ್ವಿಚಾರಕ ಬೃಜೇಶ್, ಆನಡ್ಕ ಸುಧೀಶ್ ಕುಮಾರ್ ಉಪಸ್ಥಿತರಿದ್ದರು.

ರುಕ್ಕು ಮತ್ತು ತಂಡದವರು `ರಾವೋ ರಾವು ಕೊರುಂಗೋ ರಾವೆರೇನೆ ಕೇನುಜಲೇ ‘ ಪಾಡ್ದನ ಹಾಡಿದರು. ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಮೇಲ್ವಿಚಾರಕ ವಿಠಲ್ ನಿರೂಪಿಸಿದರು. ಆನಡ್ಕದ ಬಾಕಿಮಾರು ಗದ್ದೆ ಸಹಿತ ಐದು ಎಕ್ರೆಯಷ್ಟು ವಿಸ್ತಾರದ ಹೊಲದಲ್ಲಿ ಯಂತ್ರದ ಮೂಲಕ ಕಜೆ ಜಯ ಭತ್ತದ ಸಸಿ ನಾಟಿ ಕಾರ್ಯನಡೆಸಲಾಯಿತು.

ಇದನ್ನೂ ಓದಿ : ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆಯಾಗಿ “ಶೋಭಾ”ಯಾನ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next