Advertisement

ಜೋಡುಕರೆ ಕಂಬಳ ಇತಿಹಾಸದಲ್ಲೇ ದಾಖಲೆ ಬರೆದ ಮೂಡಬಿದಿರೆ ಕಂಬಳ

10:01 AM Dec 27, 2019 | keerthan |

ಮೂಡಬಿದಿರೆ: ಜೋಡುಕರೆ ಕಂಬಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂಡಬಿದಿರೆ ಕಂಬಳ ಕೇವಲ 20 ಗಂಟೆಯಲ್ಲಿ ಮುಗಿದು ದಾಖಲೆ ಬರೆದಿದೆ. ಸುಮಾರು 162 ಜೊತೆ ಕೋಣಗಳು ಪಾಲ್ಗೊಂಡಿದ್ದ ಕೋಟಿ ಚೆನ್ನಯ ಜೋಡುಕರೆ ಕಂಬಳ ಗುರುವಾರ ಮುಂಜಾನೆ 4.30 ಸುಮಾರಿಗೆ ಸಂಪನ್ನವಾಯಿತು.

Advertisement

ಮೂಡಬಿದಿರೆಯ ಒಂಟಿಕಟ್ಟೆ ರಾಣಿ ಅಬ್ಬಕ್ಕ ನಿಸರ್ಗಧಾಮದ ಕೋಟಿ – ಚೆನ್ನಯ ಜೋಡುಕರೆ ಕಂಬಳವನ್ನು ಸಹಸ್ರಾರು ಸಂಖ್ಯೆಯ ಜನ ವೀಕ್ಷಿಸಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಸಚಿವರು, ಹಿರಿಯ ರಾಜಕಾರಣಿಗಳು ಪಾಲ್ಗೊಂಡರು.

ಡಿಸೆಂಬರ್ 21ರಂದು ನಡೆಯಬೇಕಿದ್ದ ಕಂಬಳ ಮಂಗಳೂರು ಗಲಭೆಯಿಂದಾಗಿ ಬುಧವಾರಕ್ಕೆ ಮುಂದೂಡಿಕೆಯಾಗಿತ್ತು. ಆದರೆ ಇಂದು ( ಗುರುವಾರ) ಸೂರ್ಯಗ್ರಹಣ ಇರುವ ಕಾರಣ ಮುಂಜಾವಿಗಿಂತ ಮೊದಲು ಕಂಬಳ ಕೂಟ ಮುಗಿಸುವ ಸವಾಲು ಕೂಡ ಆಯೋಜಕರ ಮುಂದಿತ್ತು.

ಈ ವರ್ಷದ ಕಂಬಳಗಳಲ್ಲಿಯೇ ಅತೀ ಹೆಚ್ಚು ಕೋಣಗಳು ಮೂಡಬಿದಿರೆಯಲ್ಲಿ ಸೇರಿತ್ತು. (ಕನೆಹಲಗೆ: 2 ಜೊತೆ, ಅಡ್ಡಹಲಗೆ: 6 ಜೊತೆ, ಹಗ್ಗ ಹಿರಿಯ: 16 ಜೊತೆ, ನೇಗಿಲು ಹಿರಿಯ: 24 ಜೊತೆ, ಹಗ್ಗ ಕಿರಿಯ: 14 ಜೊತೆ, ನೇಗಿಲು ಕಿರಿಯ: 100 ಜೊತೆ, ಒಟ್ಟು 162 ಜೋಡಿ) ಆದರೂ ಅಚ್ಚುಕಟ್ಟಿನ ವ್ಯವಸ್ಥೆಯಿಂದಾಗಿ ಬೆಳಕು ಮೂಡುವ ಮೊದಲೇ ಕಂಬಳ ಸಂಪನ್ನವಾಯಿತು.

Advertisement

ಫಲಿತಾಂಶ

ಕನೆಹಲಗೆ

ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಅಡ್ಡ ಹಲಗೆ:
ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ

ದ್ವಿತೀಯ: ಮೋರ್ಲ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ

ಹಗ್ಗ ಹಿರಿಯ:
ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ “A”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ದ್ವಿತೀಯ: ಮೂಡಬಿದ್ರಿ ನ್ಯೂ ಪಡಿವಾಲ್ಸ್ ಹಾರ್ಧಿಕ್ ಹರ್ಷವರ್ಧನ ಪಡಿವಾಲ್ “A”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ
: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “A”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ “B”
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್


ನೇಗಿಲು ಹಿರಿಯ

ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಮಾರ್ನಾಡ್ HP ನಿವಾಸ ದಿವಂಗತ ನಾರಾಯಣ ಆಚಾರ್ಯ
ಓಡಿಸಿದವರು: ಕಡಂದಲೆ ಭವನೀಶ್


ನೇಗಿಲು ಕಿರಿಯ:

ಪ್ರಥಮ: ಮೂಡಬಿದ್ರಿ ನಿವ್ ಪಡಿವಾಲ್ಸ್  ಮಿಥುನ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಬ್ರಹ್ಮಾವರ ಹಂದಾಡಿ ಶೇಖರ ಪೂಜಾರಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

 

ಚಿತ್ರಕೃಪೆ: ಪ್ರಖ್ಯಾತ್ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next