Advertisement

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

09:00 PM May 07, 2024 | Team Udayavani |

ಮೂಡುಬಿದಿರೆ: ಎರಡು ಹಿಟಾಚಿಗಳ 4 ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

Advertisement

ತಾಕೊಡೆಯ ಸಿವಿಲ್‌ ಕಂಟ್ರಾಕ್ಟರ್‌ ರೋಹನ್‌ ಕಾಡೋìಜಾ ಹಾಗೂ ಪಂಚಶಕ್ತಿ ರಂಜಿತ್‌ ಪೂಜಾರಿ ತೋಡಾರು ಅವರಿಗೆ ಸೇರಿದ 2 ಹಿಟಾಚಿಗಳನ್ನು ಸಂಜೆ ಕೆಲಸವಾದ ಅನಂತರ ಮೂಡುಬಿದಿರೆಯ ಮಚಲಿ ಹೊಟೇಲ್‌ ಹತ್ತಿರ ನಿಲ್ಲಿಸಿ ಹೋಗಿದ್ದರು. ಮರುದಿನ ಬೆಳಗ್ಗೆ ಬಂದು ನೋಡಿದಾಗ ಎರಡೂ ಹಿಟಾಚಿಗಳ ನಾಲ್ಕು ಬ್ಯಾಟರಿಗಳು ಮಾಯವಾಗಿದ್ದವು.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.