ಮೂಡುಬಿದಿರೆ: ಅತ್ತ ಮೂಡುಬಿದಿರೆ ಪುರಸಭೆಗೆ ನೀರುಣಿಸು ವ ಪುಚ್ಚಮೊಗರಿನ ಫಲ್ಗುಣೀ ನದಿಯೊಡಲೇ ಬರಿದಾಗಿ ಹೋಗಿದೆ. ಇತ್ತ ಸದ್ಯ ಜೀವ ವಿರುವ ನೂರಾರು ಬೋರ್‌ವೆಲ್‌ಗಳ ಜಲನಿಧಿಯನ್ನೇ ಪಾಲುಪಟ್ಟಿ ಮಾಡಿ ಹಂಚುವಲ್ಲಿ ಪುರಸಭೆ ಹೈರಾಣಾಗಿ ಹೋಗಿದೆ. ಹೆಚ್ಚುವರಿ ಬೋರ್‌ವೆಲ್ ತೋಡಿಸಲು ಚುನಾವಣೆ ಮತ್ತಿತರ ಕುಂಟು ನೆವ, ಅಡ್ಡಿ ಆತಂಕ. ಈಗ ಚುನಾವಣೆ ಮುಗಿದಿದೆ, ಹೊಸಸರಕಾರ ಬಂದಿದೆ. ಇನ್ನು ಜಿಲ್ಲಾಧಿಕಾರಿ ಮನಸ್ಸು ಮಾಡಿದರಾ ಯಿತು, ಬೋರ್‌ವೆಲ್ ತೋಡಬಹುದು. ಅದಕ್ಕೆ ಟೆಂಡರ್ ಪ್ರಕ್ರಿಯೆ ಆಗುವಾಗ ಇನ್ನೊಂದೆರಡು ವಾರಗಳೂ ಉರುಳಿ ಯಾವು. ಈಗಂತೂ ನೀರಿಗಾಗಿ ಕಾಯುವ ಪರಿಸ್ಥಿತಿ. ಸಮರ್ಪ ಕವಾಗಿ ಒದಗಿಸಲು ಕಷ್ಟ ಪಡುವ ಸ್ಥಿತಿ.
ಇಂಥ ಸಂಕಟ ಸಮಯದಲ್ಲಿ ಹೂವಿನ ಗಿಡಗಳಿಗೆ ನಳ್ಳಿ ನೀರು ಬಿಡ ಬೇಡಿರೋ, ಕಟ್ಟಡ ಕಾಮಗಾರಿಗಳಿಗೆ ನಳ್ಳಿ ನೀರು ಬಳಸಬೇಡಿರೋ ಎಂದು ಆಡಳಿತ ಕಡೆಯಿಂದ ಮನವಿ, ಸೂಚನೆ ಹೊರಡುವುದೇನೋ ಸಾಮಾನ್ಯ, ಸಹಜ. ಆದರೆ ಮೂರು ವರ್ಷಗಳಿಂದಲೂ ಗೊತ್ತಿಧ್ದೋ ಗೊತ್ತಿಲ್ಲದೆಯೋ ದುಬಾರಿ ಯಾದ ಫಲ್ಗುಣಿ ನದಿ ನೀರು ಮೂಡು ಬಿದಿರೆಯ ಸ್ವರಾಜ್ಯ ಮೈದಾನದ ಪಕ್ಕ, ಕಾಮಧೇನು ಸಭಾಂಗಣದ ಎದುರಿನ ಬಾಕ್ಸ್ ಚರಂಡಿಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆಯಲ್ಲ ಎಂಬ ಗುಮಾನಿ ಜನರಲ್ಲಿದೆ.
ಮೊದಮೊದಲಿಗೆ ಇದು ತಾತ್ಕಾಲಿಕ ವಾಗಿ ಎಂದು 5 ವರ್ಷಗಳಿಂದ ಸ್ವರಾಜ್ಯ ಮೈದಾನದಲ್ಲಿ ಬೀಡುಬಿಟ್ಟಿರುವ ಪುರಸಭಾ ದಿನವಹಿ ಮಾರುಕಟ್ಟೆಯ ನೈಋತ್ಯ ಮೂಲೆಯ ಟ್ಯಾಂಕ್‌ನಿಂದ ಹೆಚ್ಚುವರಿಯಾಗಿ ಹರಿದು ಬಂದ ನೀರು ಆಗಿರಬೇಕು ಎಂದು ಶಂಕಿಸಲಾಗಿತ್ತು. ಇದೀಗ ಪರಿಶೀಲಿಸಿದಾಗ ಅದುಹಾಗಾಗಿ ರುವುದಲ್ಲ ಎಂದು ಬಾಕ್ಸ್ ಚರಂಡಿಯ ನಡುವೆ ಇರುವ ರಂದ್ರಗಳಿಗೆ ಕೋಲು ಹಾಕಿ ನೋಡಿದಾಗ ನಿಶ್ಚಿತವಾಯಿತು.
ಸ್ವರಾಜ್ಯ ಮೈದಾನದ ಗೇಟಿನಿಂದ ಸುಮಾರು 20 ಅಡಿ ಉದ್ದಕ್ಕೆ ಚರಂಡಿ ಯನ್ನು ಎತ್ತಿಡಬಲ್ಲ ಪುಟ್ಟ ಸ್ಲ್ಯಾಬ್ ಗಳಾಗಿ ರಚಿಸದೆ ಉದ್ದಕ್ಕೆ ಕಾಂಕ್ರೀಟ್ ಎರಕ ಹೊಯಿದಂತಿರುವ ಕಾರಣ ನೀರು ಎಲ್ಲಿಂದ ಪೋಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ತೀರಾ ಕೆಳಗಡೆ ಬಂದಾಗ ಹೊರ ಸೂಸುವ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದು ಗೋಚರಿಸಿದೆ. ತೀರಾ ಕೆಳಗಿನ ಮೋರಿಯ ಪಕ್ಕದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪಾದನ ತಾಣವಾಗಿ ಕಂಡುಬಂದಿದ್ದು ಶನಿವಾರವಷ್ಟೇ ಪೇಟೆಯಲ್ಲಿ ಆಚರಿಸಲಾಗಿದ್ದ ಡೆಂಗ್ಯೂ ದಿನಾಚರಣೆ, ಜಾಗೃತಿ ಜಾಥಾವನ್ನು ಅಣಕಿಸುವಂತಿದೆ!
ಜಲನಿಧಿಯನ್ನುಳಿಸಿ
ಕೂಡಲೇ ಈ ಚರಂಡಿಯ ಎಲ್ಲ ಸ್ಲಾ Âಬ್‌ಗಳನ್ನೆತ್ತಿ ಎಲ್ಲಿ ನೀರಿನ ಪೈಪ್‌ಲೈನ್ ಒಡೆದಿದೆ ಎಂಬುದನ್ನು ಪತ್ತೆ ಹಚ್ಚಿ ಜಲನಿಧಿಯನ್ನುಳಿಸುವ ಕಾರ್ಯ ನಡೆಸಬೇಕಾಗಿದೆ. ಇಲ್ಲವಾದಲ್ಲಿ ಒಂದು ವಾರ್ಡ್‌ಗಾಗುವಷ್ಟು ನೀರು ಹಾಗೆಯೇ ಪೋಲಾಗುವುದು ಖಂಡಿತ.
ಪರಿಶೀಲಿಸಿ ಸೂಕ್ತ ಕ್ರಮ
ನಾಳೆಯೇ ಅಂದರೆ ಸೋಮ ವಾರವೇ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವೆ.
-ಶಿವ ನಾಯ್ಕ…, ಪುರಸಭಾ ಮುಖ್ಯಾಧಿಕಾರಿ, ಮೂಡುಬಿದಿರೆ