Advertisement
ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಕಲಾವಿದರಿಗೆ ಶಾಲು ಹೊದೆಸಿ, ಹಾರ ತೊಡಿಸಿ, ಫಲಕಾಣಿಕೆ, ಪ್ರಶಸ್ತಿ ಫಲಕ ಸಹಿತ 1 ಲಕ್ಷ ರೂ. ನಗದು ಪುರಸ್ಕಾರ ಸಹಿತ ಗೌರವಿಸಿದರು. ಆಳ್ವಾಸ್ ವಿದ್ಯಾರ್ಥಿ ಗಳ ಹಾಡಿನೊಂದಿಗೆ ಕನ್ನಿಕೆಯರು ಕಲಾವಿದರಿಗೆ ಆರತಿ ಬೆಳಗಿ ತಿಲಕವಿರಿಸಿ, ಹೂಮಳೆ ಸುರಿಸಿದರು.
ಡಾ| ಮೈಸೂರು ಮಂಜುನಾಥ್ ಸಮ್ಮಾನಕ್ಕೆ ಸ್ಪಂದಿಸಿ, “ದೇವೇಂದ್ರನೂ ನಾಚಬೇಕು, ಸ್ವರ್ಗವೇ ಇಳೆಗಿಳಿದು ಬಂದಿದೆ ಇಲ್ಲಿ. ಸಾಧಾರಣ ಹಳ್ಳಿ ಯೊಂದು ವಿಶ್ವದ ಭೂಪಟದಲ್ಲಿ ಶಿಕ್ಷಣ, ಕಲೆ, ಸಂಸ್ಕೃತಿ, ಕ್ರೀಡೆ ಸಹಿತ ಹತ್ತಾರು ವಿಷಯಗಳಲ್ಲಿ ಗುರುತಿಸ ಲ್ಪಟ್ಟಿರುವ ಹಿಂದೆ ಡಾ| ಆಳ್ವ ಎಂಬ ಕನಸುಗಾರ ಇದ್ದಾರೆ. ಅವರದು ಬರೇ ಹಗಲುಕನಸಲ್ಲ, ಅದನ್ನು ನನಸಾಗಿಸುವ ಪರಿಶ್ರಮವಿದೆ. ಕಲಾಕ್ಷೇತ್ರದ ದಿಗ್ಗಜರೆಲ್ಲ ಬಂದು ಕಾರ್ಯಕ್ರಮ ನೀಡಿರುವ ವಿರಾಸತ್‌ನಲ್ಲಿ ಒಮ್ಮೆ ತನಗೂ ಅವಕಾಶ ಲಭಿಸೀತೇ ಎಂಬ ಮನದಾಸೆ ಹೆಚ್ಚಿನ ಕಲಾವಿದರಿಗಿದೆ ಎಂದರೆ ಅದು ಅತಿಶಯವಾಗದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಸಂಸದ ನಳಿನ್ ಕುಮಾರ್ ಕಟೀಲು “ಭಾರತೀಯ ಸಂಸ್ಕೃತಿಯ ಚೆಲುವು, ಸೊಬಗಿನ ಅನಾವರಣದೊಂದಿಗೆ ಮನಸ್ಸುಗಳನ್ನರಳಿಸುವ ಆಳ್ವಾಸ್ ವಿರಾಸತ್ ನಮಗೆಲ್ಲ ಹೆಮ್ಮೆ ಎಂದರು.
Related Articles
ವಿರಾಸತ್ ಸಾಗಿ ಬಂದ ದಾರಿ ಯನ್ನು ಅವಲೋಕಿಸಿದ ಡಾ| ಆಳ್ವರು, “ಇದಾವುದೂ ಬರೇ ಪ್ರದರ್ಶನ ಕಲೆಗಳಿಗಾಗಿ ಮೀಸ ಲಲ್ಲ, ಮನೋರಂಜನೆಗಲ್ಲ, ಪ್ರತಿ ಯೊಂದು ವಿರಾಸತ್ ಮೂಲಕ ಹಲವು ಸಂದೇಶ ಗಳು ನಾಡಿಗೆ ರವಾನೆಯಾಗಬೇಕು; ಸೌಂದರ್ಯ ಪ್ರಜ್ಞೆಯ ಪ್ರೇಕ್ಷಕರು ರೂಪುಗೊಳ್ಳು ವಂತಾಗಬೇಕು, ಪ್ರೇಕ್ಷಕರು ಮಾನಸಿಕವಾಗಿ ಭ್ರಷ್ಟರಾಗ ಬಾರದು ಎಂಬುದೇ ಇಲ್ಲಿನ ಉದ್ದೇಶ’ ಎಂದರಲ್ಲದೆ, ಈ ಉತ್ಸವವನ್ನು ದೇಶಕ್ಕಾಗಿ ಪ್ರಾಣತ್ಯಾಗಗೈದ ವೀರಯೋಧ ಕ್ಯಾ| ಎಂ.ವಿ. ಪ್ರಾಂಜಲ್ ಅವರಿಗೆ ಸಮರ್ಪಿಸುವುದಾಗಿ ಪ್ರಕಟಿಸಿದರು.
Advertisement
ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾ ರ್ಯವರ್ಯ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಮಣಿಪುರದ ಮಾಜಿ ಸಂಸದ ನಾರಾಸಿಂಗ್, ಸ್ಕೌಟ್ಸ್ ಗೈಡ್ಸ್ ರಾಜ್ಯಮುಖ್ಯ ಕಮಿಶನರ್ ಪಿ.ಜಿ. ಆರ್. ಸಿಂಧಿಯಾ, ಮಾಜಿ ಸಚಿವ ಕೆ. ಅಭಯಚಂದ್ರ, ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪುರಾಣಿಕ್, ಉದ್ಯಮಿ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.