Advertisement

‘ಸಮಾಜ ಒಗ್ಗೂಡಿಸಲು ಕಂಬಳ ಸಹಕಾರಿ’

11:29 AM Dec 03, 2018 | |

ಮೂಡುಬಿದಿರೆ : ರಾಜಕೀಯ ನಾಯಕರು ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ವಿಭಜನೆ ಮಾಡದೆ ಕಂಬಳದಂಥ ಜಾನಪದ ಕ್ರೀಡೆಯನ್ನು ಆಯೋಜಿಸುವ ಮೂಲಕ ಸಾಮರಸ್ಯ ಸಾಧಿಸಬಹುದು ಎಂದು ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್‌ ಕೊಲಾಸೋ ಹೇಳಿ ದ ರು. ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆದ ಕೋಟಿ ಚೆನ್ನಯ ಹೊನಲು ಬೆಳಕಿನ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕಂಬಳ ರಂಗದ ಹಿರಿಯರಾದ ಮಿಜಾರುಗುತ್ತು ಆನಂದ ಆಳ್ವ ಅವರನ್ನು ಸಮಿತಿ ವತಿಯಿಂದ ಕಂಬಳ ಸಮಿತಿ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್‌ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಡಾ| ಜೀವಂಧರ ಬಳ್ಳಾಲ್‌ ಅಧ್ಯಕ್ಷತೆ ವಹಿಸಿದ್ದರು.

 ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಬಂಟ್ವಾಳ ಶಾಸಕ ಉಳೆಪಾಡಿಗುತ್ತು ರಾಜೇಶ್‌ ನಾೖಕ್‌, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ರಾಜೇಂದ್ರ ಕುಮಾರ್‌, ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌, ಪ್ರತಾಪ್‌ ಸಿಂಹ ಬೆಳ್ತಂಗಡಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಸಹಿತ ಗಣ್ಯರು ಪಾಲ್ಗೊಂಡರು. ಇದೇ ವೇಳೆ, ಕಂಬಳದ ಓಟಗಾರರಾಗಿ 2017ರ ಕರ್ನಾಟಕ ಕ್ರೀಡಾರತ್ನ ಸಹಿತ 600ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿರುವ ಯುವರಾಜ್‌ ಜೈನ್‌ ನಾರಾವಿ ಅವರನ್ನು ಸಮ್ಮಾನಿಸಲಾಯಿತು.

ಕಂಬಳದಲ್ಲಿ ಬೆಳಕು, ಧ್ವನಿವರ್ಧಕ, ಚಪ್ಪರ ವ್ಯವಸ್ಥೆ ಮಾಡುತ್ತಿರುವ ಆರ್‌. ಕೆ. ಭಟ್‌, ಕಂಬಳ ಯಶಸ್ಸಿಗೆ ಶ್ರಮಿಸಿದ ರಂಜಿತ್‌ ಪೂಜಾರಿ ಅವರನ್ನು ಗೌರವಿಸಲಾಯಿತು. ಸಮಿತಿಯ ಪ್ರದಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕೋಶಾಧ್ಯಕ್ಷ ಭಾಸ್ಕರ ಎಸ್‌. ಕೋಟ್ಯಾನ್‌ ಸಹಿತ ಪದಾಧಿಕಾರಿಗಳಿದ್ದರು.

ಕಂಬಳದಲ್ಲಿ ಕಂಡು ಬಂದ ವಿಶೇಷತೆಗಳು
. ‘ಕೋಟಿ ಚೆನ್ನಯ’ ಕಂಬಳದ 16ನೇ ವರ್ಷದಲ್ಲಿ ಗಮನ ಸೆಳೆದದ್ದು ರಾಣಿ ಅಬ್ಬಕ್ಕನ ಭಾವಚಿತ್ರ. ಆಳೆತ್ತರದ ರಾಣಿ ಅಬ್ಬಕ್ಕನ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸಂಸ್ಮರಣೆ ನಡೆಸಲಾಯಿತು.

Advertisement

. ಶಾಸಕ ಉಮಾನಾಥ ಕೋಟ್ಯಾನ್‌ ಅವರ ಮುತುವರ್ಜಿಯಿಂದಾಗಿ ಕಂಬಳ ಕರೆಯಲ್ಲಿ ಕಟ್ಟಲಾಗಿರುವ ನಿಶಾನಿಯಲ್ಲೂ ತುಳು ಲಿಪಿ ಕಂಡಿದೆ; ವೇದಿಕೆಯಲ್ಲಿ ಕನ್ನಡಕ್ಕೆ ಸಮಬಲವಾಗಿ ತುಳು ಲಿಪಿಯನ್ನು ಮೆರೆಸಲಾಗಿದೆ.

. ಕಂಬಳ …ಮುಂದೇನು? ಎಂಬ ಪ್ರಶ್ನೆಗಳ ನಡುವೆಯೇ ಪಿಯುಸಿ ವಿದ್ಯಾರ್ಥಿ ಪ್ರಖ್ಯಾತ್‌ ಭಂಡಾರಿ ಅವರು ಥೇಟ್‌ ವೃತ್ತಿಪರ ಉದ್ಘೋಷಕರಂತೆ ಬಹಳ ಚುರುಕಾಗಿ, ಸ್ಪಷ್ಟವಾಗಿ, ಕಂಬಳ ಸ್ಟೈಲ್‌ನಲ್ಲೇ ಉದ್ಘೋಷಕರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದರು.

.ಎಂದಿನಂತೆ ಈ ಬಾರಿಯೂ ಸಂತೆ ಜೋರಾಗಿ ನಡೆದಿದ್ದು ಕಲ್ಲಂಗಡಿ ಮತ್ತಿತರ ಹಣ್ಣು ಹಂಪಲು, ಜ್ಯೂಸ್‌ ಅಂಗಡಿಗಳು, ಹೊಟೇಲ್‌ ಗಳೊಂದಿಗೆ ಫ್ಯಾನ್ಸಿ, ಬಟ್ಟೆ ಅಂಗಡಿಗಳೂ ತೆರೆದುಕೊಂಡಿದ್ದವು. ಹತ್ತಿರದಲ್ಲೇ ಎರಡು ದಿನಗಳ ಮಟ್ಟಿಗೆ ಮನೋರಂಜಕ ಎಮ್ಯೂಸ್‌ಮೆಂಟ್‌ ಪಾರ್ಕ್‌ ಸ್ಥಾಪಿಸಲಾಗಿತ್ತು.

. ಸುಪ್ರೀಂ ಕೋರ್ಟ್‌ ಆದೇಶದಂತೆ ‘ಬೆತ್ತ ಹಿಡಿಯದೆಯೇ’ ನಡೆಸಲಾದ ಕೋಟಿ ಚೆನ್ನಯ ಕಂಬಳಕ್ಕೆ ಜನಸಾಗರವೇ ಹರಿದು ಬಂದು ಈ ಜಾನಪದ ಕ್ರೀಡೆಗೆ ಜಾತಿ, ಪಕ್ಷ, ವರ್ಗಬೇಧ ಅನ್ವಯಿಸುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next