Advertisement

ಸ್ಮಾರಕಗಳು ದೇಶದ ಸಾಂಸ್ಕೃತಿಕ ಕುರುಹು

06:51 PM Apr 20, 2021 | Team Udayavani |

ಬಸವಕಲ್ಯಾಣ: ಚಾರಿತ್ರಿಕ ಸ್ಮಾರಕಗಳು ದೇಶ-ಕಾಲದ ಸಾಂಸ್ಕೃತಿಕ ಕುರುಹುಗಳಾಗಿವೆ. ಹೊಸ ತಲೆಮಾರಿಗೆ ಹಳೆಯ ಸ್ಮಾರಕಗಳು ಮುಕ್ಕಿಲ್ಲದಂತೆ ವರ್ಗಾಯಿಸುವ ಹೊಣೆಗಾರಿಕೆ ಪ್ರತಿಯೊಬ್ಬದರಾಗಿದೆ ಎಂದು ಬಿಕೆಡಿಬಿ ತಹಶೀಲ್ದಾರ್‌ ಮೀನಾಕುಮಾರಿ ಬೋರಾಳಕರ್‌ ಹೇಳಿದರು.

Advertisement

ಪರಂಪರೆ ದಿನದ ಪ್ರಯುಕ್ತ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ನಗರದ ಕೋಟೆಯಲ್ಲಿ ಆಯೋಜಿಸಿದ್ದ 55ನೇ ಉಪನ್ಯಾಸ ಪ್ರಾಚೀನ ಸ್ಮಾರಕಗಳ ಸಂಕಥನ ಮತ್ತು ಸಂರಕ್ಷಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಬಸವಕಲ್ಯಾಣದ ಕೋಟೆ ಮತ್ತು ಶರಣರ ಸ್ಮಾರಕಗಳು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಸ್ಥಳೀಯ ಸ್ಮಾರಕಗಳು ಅತಿ ಮೌಲ್ಯ ಹೊಂದಿದ್ದು, ಅವು ಸ್ಥಳೀಯ ಚರಿತ್ರೆಯನ್ನು ವಿಶ್ವಾತ್ಮಕ ನೆಲೆಗೆ ನಿಲ್ಲಿಸಲು ಬಹುದೊಡ್ಡ ಆಕರಗಳಾಗಿವೆ. ಸ್ಮಾರಕಗಳ ರಕ್ಷಣೆಗೆ ಸರಕಾರದ ಜೊತೆಗೆ ಸಾರ್ವಜನಿಕರ ಕಾಳಜಿಯು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಬ್ದುಲ್‌ ಮಾಜಿದ್‌ ಮಣಿಯಾರ್‌ ಮಾತನಾಡಿ, ಬಸವಾದಿ ಶರಣರಷ್ಟೇ ಸೂಫಿತತ್ವವೂ ಬಸವಕಲ್ಯಾಣದಲ್ಲಿ ಚೈತನ್ಯ ಪಡೆದಿತ್ತು. ಬಹುತ್ವ ದೊಂದಿಗೆ ಸಹಬಾಳ್ವೆ, ಸಮನ್ವಯತೆಯ ನೆಯ್ಗೆ ಈ ನೆಲದ ಸತ್ವವಾಗಿದೆ ಎಂದರು. ಕೇಂದ್ರೀಯ ವಿವಿ ಪ್ರಾಧ್ಯಾಪಕ ಮಹಮದ್‌ ಮೌಸಿನ್‌ ಖಾನ್‌ ಮಾತನಾಡಿ, ಬಸವಕಲ್ಯಾಣ ಕೋಟೆ ಅತ್ಯಂತ ಪ್ರಾಚೀನವಾದದು. ಅದು ಚಾಲುಕ್ಯರಿಂದ ನಿಜಾಮನ ಆಳ್ವಿಕೆಯ ಸ್ಥಿತ್ಯಂತರ ಪಡೆದಂತೆ ಅದರ ರಚನೆಯಲ್ಲಿಯೂ ರೂಪಾಂತರವೂಗೊಂಡಿದೆ. ಈ ಕೋಟೆಯ ಚರಿತ್ರೆ, ಶಿಲ್ಪ, ರಚನಾ ವಿಧಾನಗಳು ವಿಶ್ವವ್ಯಾಪಿ ಪರಿಚಯಸುವ ಕಾರ್ಯ ಅಗತ್ಯ ಎಂದರು.

ಕಮಲಾಪುರ ಪ್ರೊ. ಬೇಷನರಿ ತಹಶೀಲ್ದಾರ್‌ ಮೌಸಿನ್‌ ಅಹಮದ್‌ ಮತ್ತು ಡಾ.ಭಿಮಾಶಂಕರ ಬಿರಾದಾರ್‌ ಮಾತನಾಡಿದರು. ಹೈದ್ರಾಬಾದ ಮೌಲಾನಾ ಆಜಾದ್‌ ಉರ್ದು ರಾಷ್ಟ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಮುಜಾಮಿಲ್‌ ಖಾದ್ರಿ, ಪ್ರತಿಷ್ಠಾನದಅಧ್ಯಕ್ಷ ಎಸ್‌.ಜಿ.ಹುಡೆದ್‌, ನಾಗಪ್ಪ ನಿಣ್ಣೆ, ನ್ಯಾಯವಾದಿ ಪ್ರಕೃತಿ ಬೋರಾಳಕರ,ಮೊಹಮದ್‌ ಅಲಿ ಖಾನ್‌, ಶೇರ ಅಲಿ, ಬಷೀರ್‌ ಅಹ್ಮದ್‌ ಗೋಬರೆ, ನವಾಜ ಅಹ್ಮದ್‌, ಅಸಾದುಲ್ಲಾಖಾನ್‌, ಆಸೀಫ್‌ ಅಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next